Breaking News

ಇನ್ಕಮ್ ಟ್ಯಾಕ್ಸ್ ನೋಟಿಸ್ ಬೆನ್ನಲ್ಲೇ ಮಾರುತಿ ಸುಜುಕಿ ಶೇರು ಬೆಲೆ 2% ಕುಸಿತ!

Share News

ಹೊಸದಿಲ್ಲಿ: 2019-20ರ ಆರ್ಥಿಕ ವರ್ಷದ ಆದಾಯ ತೆರಿಗೆ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ (income tax department) ಮಂಗಳವಾರ ಮಾರುತಿ ಸುಜುಕಿ (Maruti Suzuki) ಕಂಪನಿಗೆ ನೋಟೀಸ್‌ ನೀಡಿದ್ದು, ಇದಾದ ಕೂಡಲೇ ಕಂಪನಿಯ ಷೇರು ಬೆಲೆಗಳು 2%ಕ್ಕಿಂತ ಹೆಚ್ಚು ಕುಸಿದವು.

₹2,160 ಕೋಟಿ ಮೌಲ್ಯದ ಪಾವತಿಸದ ಬಾಕಿಯ ಬಗ್ಗೆ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿದೆ. ಮಾರುತಿ ಸುಜುಕಿ ಷೇರಿನ (Maruti Suzuki shares) ಬೆಲೆ ಇಂದು ಬಿಎಸ್‌ಇಯಲ್ಲಿ ₹10,298.95ಕ್ಕೆ ಪ್ರಾರಂಭವಾಯಿತು, ಷೇರು ದಿನದ ಗರಿಷ್ಠ ₹10,298.95 ಮತ್ತು ₹10,092.90ರ ಕನಿಷ್ಠವನ್ನು ಮುಟ್ಟಿತು.

ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ: ಕರ್ತವ್ಯದಿಂದ ಅಮಾನತು!

“ಕಂಪನಿಯು 2019-20ರ ಹಣಕಾಸು ವರ್ಷದ ಕರಡು ಮೌಲ್ಯಮಾಪನ ಆದೇಶವನ್ನು ಸ್ವೀಕರಿಸಿದೆ. ಇದರಲ್ಲಿ ಹಿಂದಿರುಗಿದ ಆದಾಯಕ್ಕೆ (ಕಂಪನಿಯು ತನ್ನ ಆದಾಯ ತೆರಿಗೆ ರಿಟರ್ನ್‌ನಲ್ಲಿ ಬಹಿರಂಗಪಡಿಸಿದ ಆದಾಯ) ಸಂಬಂಧಿಸಿದಂತೆ ₹ 2159.7 ಕೋಟಿ ಮೊತ್ತದ ಕೆಲವು ಸೇರ್ಪಡೆಗಳು/ಅನುಮತಿಗಳನ್ನು ಪ್ರಸ್ತಾಪಿಸಲಾಗಿದೆ” ಎಂದು ಮಾರುತಿ ಸುಜುಕಿ ಹೇಳಿದೆ.

ಕಂಪನಿಯು ವಿವಾದ ಪರಿಹಾರ ಸಮಿತಿಗೆ ತನ್ನ ಆಕ್ಷೇಪಣೆಗಳನ್ನು ಪ್ರಸ್ತುತಪಡಿಸುವುದಾಗಿ ಹೇಳಿದೆ. ಈ ಕರಡು ಮೌಲ್ಯಮಾಪನ ಆದೇಶವು ಅದರ ಹಣಕಾಸು, ಕಾರ್ಯಾಚರಣೆಗಳು ಅಥವಾ ಇತರ ಕಂಪನಿ-ಸಂಬಂಧಿತ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದೆ.

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಐವರ ಬಂಧನ!

ಟ್ರೆಂಡ್‌ಲೈನ್ ಡೇಟಾ ಪ್ರಕಾರ, ಮಾರುತಿ ಸುಜುಕಿ ಷೇರಿನ ಬೆಲೆ ಕಳೆದ ವರ್ಷ 18.81%ರಷ್ಟು ಏರಿದೆ. ಮಾರುತಿ ಸುಜುಕಿಯು ಸೆಪ್ಟೆಂಬರ್ 2023ರಲ್ಲಿ ತನ್ನ ಅತ್ಯಧಿಕ ಮಾಸಿಕ ಮಾರಾಟವನ್ನು ವರದಿ ಮಾಡಿದೆ. ಕಳೆದ ತಿಂಗಳು ಕಂಪನಿಯ ಒಟ್ಟು ಸಗಟು ಮಾರಾಟ ಕಳೆದ ವರ್ಷದಿಂದ 2.8% ಏರಿದ್ದು, 181,343 ಯುನಿಟ್‌ಗಳು ಮಾರಾಟವಾಗಿದ್ದವು.

ಪಾರಿವಾಳವನ್ನು ರಕ್ಷಿಸಲು ಹೋದ ಯುವಕರು ತೊಂದರೆಗೆ ಒಳಗಾದ ಮಂಗಳೂರಿನ ವಿಡಿಯೋ!


Share News

Leave a Reply

Your email address will not be published. Required fields are marked *