Breaking News

ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ: ಕರ್ತವ್ಯದಿಂದ ಅಮಾನತು!

Share News

ಇಡುಕ್ಕಿ: ಕೇರಳದ ಸಿರೋ- ಮಲಬಾರ್ ಚರ್ಚ್‌ನ ಇಡುಕ್ಕಿ ಡಿಯಾಸಿಸ್‌ನ ಕ್ಯಾಥೋಲಿಕ್ ಪಾದ್ರಿ ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ದು, ಅದಾಗಿ ಕೆಲವೇ ಗಂಟೆಗಳಲ್ಲಿ ಅವರನ್ನು ಚರ್ಚ್‌ನ ಪ್ರತಿನಿಧಿ (ವಿಕಾರ್) ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

ಕ್ಯಾಥೋಲಿಕ್ ಚರ್ಚ್‌ನ ಪಾದ್ರಿ ಫಾದರ್ ಕುರಿಯಾಕೊಸೆ ಮಟ್ಟಂ ಅವರು ಸೋಮವಾರ ಇಡುಕ್ಕಿ ಜಿಲ್ಲಾ ಅಧ್ಯಕ್ಷ ಕೆಎಸ್ ಅಜಿ ಅವರಿಂದ ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡಿದ್ದರು. ಕೆಲವು ಗಂಟೆಗಳಲ್ಲಿಯೇ ಇಡುಕ್ಕಿ ಡಿಯಾಸಿಸ್ ಅವರ ವಿರುದ್ಧ ಕ್ರಮ ಕೈಗೊಂಡಿದೆ.

ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಭೀಕರ ಅಪಘಾತ; 2 ವರ್ಷದ ಪುಟ್ಟ ಮಗು ಸೇರಿ ಇಬ್ಬರು ಮೃತ್ಯು!

ಅಡಿಮಲಿ ಸಮೀಪದ ಮಂಕುವಾ ಸೇಂಟ್ ಥಾಮಸ್ ಚರ್ಚ್‌ನ ಪ್ಯಾರಿಶ್ ಹುದ್ದೆಯಿಂದ ಫಾದರ್ ಮಟ್ಟಂ ಅವರನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ಚರ್ಚ್ ತಿಳಿಸಿದೆ.

“ಮಂಕುವಾ ಚರ್ಚ್‌ನ ಫಾದರ್ ಕುರಿಯಾಕೊಸೆ ಮಟ್ಟಂ ಅವರನ್ನು ಪಾದ್ರಿ ಕರ್ತವ್ಯದಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ” ಎಂದು ಇಡುಕ್ಕಿ ಡಿಯಾಸಿಸ್ ಹೇಳಿಕೆ ನೀಡಿದೆ.

ಚರ್ಚ್‌ನ ಪಾದ್ರಿಯು ಯಾವುದೇ ರಾಜಕೀಯ ಪಕ್ಷವನ್ನು ಸೇರಿಕೊಳ್ಳುವಂತಿಲ್ಲ ಅಥವಾ ಸಕ್ರಿಯವಾಗಿ ಭಾಗವಹಿಸುವಂತೆ ಇಲ್ಲ ಎಂದು ಕೆನಾನ್ ಕಾನೂನು ಹೇಳುತ್ತದೆ. ಹೀಗಾಗಿ ಅದರ ಅಡಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಚರ್ಚ್ ವಕ್ತಾರರೊಬ್ಬರು ತಿಳಿಸಿದ್ದಾರೆ. 74 ವರ್ಷದ ಪಾದ್ರಿ ಮಟ್ಟಂ ಅವರು ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ ಎಂದು ಚರ್ಚ್ ಮೂಲಗಳು ತಿಳಿಸಿವೆ.

ಸಾಲಬಾಧೆಗೆ ಮನನೊಂದು ಒಂದೇ ಕುಟುಂಬದ ಮೂವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ!

ಮಣಿಪುರ ಹಿಂಸಾಚಾರ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕ್ಯಾಥೋಲಿಕ್ ಚರ್ಚ್ ವಾಗ್ದಾಳಿ ನಡೆಸುತ್ತಿರುವ ನಡುವೆಯೇ ಪಾದ್ರಿ ಕೇಸರಿ ಪಾಳೆಯ ಸೇರ್ಪಡೆಯಾಗಿದ್ದಾರೆ. ಪಾದ್ರಿ ಜತೆಗಿನ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕ ಅಜಿ, ದೇಶದಲ್ಲಿನ ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದ ನಂತರ ಫಾದರ್ ಮಟ್ಟಂ ಅವರು ಬಿಜೆಪಿ ಸೇರಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ತಮಗೆ ಬಿಜೆಪಿ ಸೇರದೆ ಇರಲು ಯಾವ ಕಾರಣವೂ ಇರಲಿಲ್ಲ ಎಂದು ಪಾದ್ರಿ ಮಟ್ಟಂ ಹೇಳಿದ್ದಾರೆ. “ನಾನು ಸಮಕಾಲೀನ ವಿಚಾರಗಳ ಬಗ್ಗೆ ಗಮನ ಹರಿಸುತ್ತಿರುತ್ತೇನೆ. ಬಿಜೆಪಿ ಸೇರ್ಪಡೆಯಾಗದೆ ಇರಲು ನನಗೆ ಯಾವ ಕಾರಣವೂ ಕಾಣಿಸಲಿಲ್ಲ. ಬಿಜೆಪಿಯ ಅನೇಕ ಕಾರ್ಯಕರ್ತರ ಜತೆ ನನಗೆ ಗೆಳೆತನವಿದೆ. ಇಂದು ನಾನು ಸದಸ್ಯತ್ವ ಸ್ವೀಕರಿಸಿದ್ದೇನೆ. ನಾನು ಪತ್ರಿಕೆಗಳನ್ನು ಓದುತ್ತಿದ್ದು, ದೇಶದಲ್ಲಿನ ಬಿಜೆಪಿ ಬಗ್ಗೆ ತಿಳಿವಳಿಕೆ ಹೊಂದಿದ್ದೇನೆ” ಎಂದು ಅವರು ಹೇಳಿದ್ದಾರೆ.

ಪಾರಿವಾಳವನ್ನು ರಕ್ಷಿಸಲು ಹೋದ ಯುವಕರು ತೊಂದರೆಗೆ ಒಳಗಾದ ಮಂಗಳೂರಿನ ವಿಡಿಯೋ!


Share News

Leave a Reply

Your email address will not be published. Required fields are marked *