ಹೊಸದಿಲ್ಲಿ: 2019-20ರ ಆರ್ಥಿಕ ವರ್ಷದ ಆದಾಯ ತೆರಿಗೆ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ (income tax department) ಮಂಗಳವಾರ ಮಾರುತಿ ಸುಜುಕಿ (Maruti Suzuki) ಕಂಪನಿಗೆ ನೋಟೀಸ್ ನೀಡಿದ್ದು, ಇದಾದ ಕೂಡಲೇ ಕಂಪನಿಯ ಷೇರು ಬೆಲೆಗಳು 2%ಕ್ಕಿಂತ ಹೆಚ್ಚು ಕುಸಿದವು. ₹2,160 ಕೋಟಿ ಮೌಲ್ಯದ ಪಾವತಿಸದ ಬಾಕಿಯ ಬಗ್ಗೆ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿದೆ. ಮಾರುತಿ ಸುಜುಕಿ ಷೇರಿನ (Maruti Suzuki shares) ಬೆಲೆ ಇಂದು ಬಿಎಸ್ಇಯಲ್ಲಿ ₹10,298.95ಕ್ಕೆ ಪ್ರಾರಂಭವಾಯಿತು, ಷೇರು ದಿನದ…