Breaking News

ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಟಾಯ್ಲೆಟಲ್ಲೇ ಕೂತು ಪ್ರಯಾಣ!

Share News

ಚಿಕ್ಕಬಳ್ಳಾಪುರ: ವಿಮಾನದ ಟಾಯ್ಲೆಟ್‌ ಬಾಗಿಲು ಲಾಕ್‌ ಆಗಿ ತೆರೆಯಲು ಸಾಧ್ಯವಾಗದ ಕಾರಣ ಪ್ರಯಾಣಿಕನೋರ್ವ ವಿಮಾನದ ಟಾಯ್ಲೆಟ್‌ನಲ್ಲೇ ಕುಳಿತು ಮುಂಬೈನಿಂದ ಬೆಂಗಳೂರಿಗೆ (Mumbai-Bengaluru Flight) ಪ್ರಯಾಣಿಸಿದ್ದಾರೆ. ಬರೋಬ್ಬರಿ 100 ನಿಮಿಷಕ್ಕೂ ಹೆಚ್ಚು ಕಾಲ ಲಾಕ್‌ ಆಗಿದ್ದ ಪ್ರಯಾಣಿಕ ಘಟನೆಯಿಂದ ಶಾಕ್‌ಗೆ ಒಳಗಾಗಿದ್ದಾರೆ.

ಘಟನೆಯ ವಿವರ:
ಮುಂಬೈ ಏರ್‌ಪೋರ್ಟ್‌ನಿಂದ (Mumbai Airport) ಹೊರಟ ಸ್ಪೈಸ್ ಜೆಟ್‌ SG-268 ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಈ ವಿಮಾನ ಸೋಮವಾರ ರಾತ್ರಿ 10:55ಕ್ಕೆ ಮುಂಬೈನಿಂದ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ವಿಮಾನ (Spice Jet Flight) ಮಂಗಳವಾರ ಬೆಳಗಿನ ಜಾವ 2:00 ಗಂಟೆಗೆ ಮುಂಬೈನಿಂದ ಟೇಕಾಫ್‌ ಆಗಿದೆ.

ವಿಮಾನ ಟೇಕ್‌ ಆಫ್‌ ಆಗಿ, ಸೀಟ್‌ ಬೆಲ್ಟ್‌ ಸೈನ್‌ ಆಫ್‌ ಆದ ನಂತರ 14D ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕ ಮೂತ್ರ ವಿಸರ್ಜನೆಗೆಂದು ಟಾಯ್ಲೆಟ್‌ ಒಳಗೆ ಹೋಗಿದ್ದಾರೆ. ಆದರೆ ಬಳಿಕ ವಿಮಾನ ಟಾಯ್ಲೆಟ್‌ ಡೋರ್‌ ಓಪನ್‌ ಮಾಡಲು ಸಾಧ್ಯವಾಗಲಿಲ್ಲ ಎಂದು ಬೆಂಗಳೂರು ವಿಮಾನ ನಿಲ್ದಾಣದ ಗ್ರೌಂಡ್‌ ಸ್ಟಾಫ್‌ ಮಾಹಿತಿ ನೀಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ಡೋರ್‌ ಲಾಕ್‌ ತೆಗೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ಯಾನಿಕ್‌ ಬಟನ್‌ ಒತ್ತಿದ್ದಾರೆ. ಇದು ವಿಮಾನದಲ್ಲಿದ್ದ ಸಿಬ್ಬಂದಿ ಗಮನಕ್ಕೆ ಬಂದಿದೆ. ಅವರು ಕೂಡಾ ಲಾಕ್‌ ಓಪನ್‌ ಮಾಡೋಕೆ ಟ್ರೈ ಮಾಡಿದ್ದಾರೆ. ಆದರೆ ವಿಮಾನದ ಸಿಬ್ಬಂದಿ ಎಷ್ಟೇ ಪ್ರಯತ್ನ ಮಾಡಿದರೂ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಪುಂಜಾಲಕಟ್ಟೆ: ಸರಕಾರಿ ಬಸ್ ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ

ಡೋರ್‌ ಗ್ಯಾಪಲ್ಲಿ ಚೀಟಿ ಪಾಸ್:
ಟಾಯ್ಲೆಟ್ ಬಾಗಿಲು ಓಪನ್ ಮಾಡುವ ಸಾಹಸ ವಿಫಲವಾದ ಬೆನ್ನಲ್ಲೇ ವಿಮಾನದಲ್ಲಿದ್ದ ಗಗನಸಖಿಯೊಬ್ಬರು ಬ್ರೌನ್‌ ಕಲರ್‌ ಪೇಪರ್‌ ಚೀಟಿಯಲ್ಲಿ ಇಂಗ್ಲಿಷ್‌ ಕ್ಯಾಪಿಟಲ್ ಲೆಟರ್ ಬಳಸಿ ನೋಟ್ ಬರೆದಿದ್ದಾರೆ. ಬಳಿಕ ಆ ಪೇಪರನ್ನು ಡೋರ್‌ ಸಂಧಿಯಿಂದ ಟಾಯ್ಲೆಟ್ ಒಳಗೆ ತಳ್ಳಿದ್ದಾರೆ.

ಆ ಚೀಟಿಯಲ್ಲಿ, ʻಬಾಗಿಲು ತೆಗೆಯಲು ನಾವೆಲ್ಲರೂ ಶ್ರಮಪಟ್ಟೆವು. ಆದರೆ ಬಾಗಿಲು ಓಪನ್ ಆಗುತ್ತಿಲ್ಲ. ನೀವು ಆತಂಕಕ್ಕೆ ಒಳಗಾಗಬೇಡಿ. ಕೆಲವೇ ನಿಮಿಷಗಳಲ್ಲಿ ವಿಮಾನ ಲ್ಯಾಂಡ್ ಆಗಲಿದೆ. ಟಾಯ್ಲೆಟ್ ಕಮೋಡ್ ಮುಚ್ಚಿ ಅದರ ಮೇಲೆ ನೀವು ಕುಳಿತುಕೊಳ್ಳಿ. ಈ ಮೂಲಕ ನೀವು ಸೇಫ್‌ ಆಗಿರಿ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಇಂಜಿನಿಯರ್‌ಗಳು ಬಂದು ಟಾಯ್ಲೆಟ್ ಬಾಗಿಲು ಓಪನ್ ಮಾಡುತ್ತಾರೆ ಎಂದು ನೋಟ್‌ನಲ್ಲಿ ಬರೆದಿದ್ದರು.

ಎಂಜಿನಿಯರ್‌ಗಳ ಸಹಾಯದಿಂದ ಡೋರ್‌ ಓಪನ್: ಕೊನೆಗೆ ವಿಮಾನ ಬೆಳಗಿನ ಜಾವ 3:45ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) ಲ್ಯಾಂಡ್‌ ಆಗಿದೆ. ಬಳಿಕ ವಿಮಾನ ನಿಲ್ದಾಣದಲ್ಲಿದ್ದ ಇಂಜಿನಿಯರ್‌ಗಳು ಆಗಮಿಸಿ ಟಾಯ್ಲೆಟ್ ಬಾಗಿಲು ಒಡೆದು ಪ್ರಯಾಣಿಕನನ್ನು ರಕ್ಷಿಸಿದ್ದಾರೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎರಡು ತಾಸು ಟಾಯ್ಲೆಟ್ ನಲ್ಲಿ ಲಾಕ್ ಆದ ಪ್ರಯಾಣಿಕ ಶಾಕ್‌ಗೆ ಒಳಗಾಗಿದ್ದರು. ಈ ಪ್ರಕರಣ ಸಂಬಂಧ ಸ್ಪೈಸ್‌ ಜೆಟ್‌ (Spice Jet) ಸಂಸ್ಥೆಯಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಇದನ್ನೂ ಓದಿ: ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಪೊಲೀಸ್ ಇಲಾಖೆಗೆ ಮಹತ್ವದ ಘೋಷಣೆಗಳನ್ನು ಮಾಡಿದ ಸಿಎಂ ಸಿದ್ದರಾಮಯ್ಯ


Share News

Leave a Reply

Your email address will not be published. Required fields are marked *