Breaking News

ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಪೊಲೀಸ್ ಇಲಾಖೆಗೆ ಮಹತ್ವದ ಘೋಷಣೆಗಳನ್ನು ಮಾಡಿದ ಸಿಎಂ ಸಿದ್ದರಾಮಯ್ಯ

Share News

ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ರಾಜ್ಯದಲ್ಲಿ ಭವ್ಯವಾದ ಸುಸಜ್ಜಿತ ಸುವರ್ಣ ಪೊಲೀಸ್ ಭವನ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಬಜೆಟ್ ನಲ್ಲಿ ಹಣ ನಿಗಧಿಪಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.

ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ಪದಕ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.  2013ರಿಂದ ಪೊಲೀಸರ ವೈದ್ಯಕೀಯ ತಪಾಸಣೆ ಭತ್ಯೆಯನ್ನ ಹೆಚ್ಚಿಸಿರಲಿಲ್ಲ. ಪೊಲೀಸ್ ಸಿಬ್ಬಂದಿಯ ವೈದ್ಯಕೀಯ ತಪಾಸಣೆ ಭತ್ಯೆ 500 ರೂ. ಹೆಚ್ಚಳ ಮಾಡುತ್ತೇವೆ. ಈ ಹಿಂದೆ 1 ಸಾವಿರ ನೀಡಲಾಗಿತ್ತು, ಈಗ 1,500 ರೂ.ಗೆ ಹೆಚ್ಚಿಸಿದ್ದೇವೆ ಎಂದು ಸಿಎಂ ಘೋಷಣೆ ಮಾಡಿದರು.

ಇದನ್ನೂ ಓದಿ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗೆ ಅಪರಿಚಿತ ಕಾರೊಂದು ಡಿಕ್ಕಿ; ಪರಾರಿಯಾದ ಚಾಲಕ ಪೊಲೀಸ್ ವಶಕ್ಕೆ..!

CEN ಠಾಣಾಧಿಕಾರಿಗಳ ಹುದ್ದೆಯನ್ನು ACP ಮತ್ತು DCP ಮಟ್ಟಕ್ಕೆ ಉನ್ನತೀಕರಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಎಸ್‌ಪಿಗೆ ಯಾವ ರೀತಿ ಅಡಿಷನಲ್‌ ಎಸ್‌ಪಿ ಇರುತ್ತಾರೋ ಅದೇ ರೀತಿ ಬೆಂಗಳೂರು ನಗರದ 8 ಡಿಸಿಪಿಗಳಿಗೆ 8 ಅಡಿಷನಲ್‌ ಡಿಸಿಪಿ ಹುದ್ದೆ ಸೃಷ್ಟಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೈಬರ್ ಕ್ರೈಂ, ನಾರ್ಕೋಟಿಕ್ಸ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಆಗಬೇಕು. ಹೀಗಾಗಿ ಪ್ರತಿ CEN ಠಾಣೆಗಳಲ್ಲಿ ಡಿಎಸ್‌ಪಿ ಅಥವಾ ಎಸಿಪಿ ನಿಯೋಜನೆ ಮಾಡಲಾಗುವುದು ಎಂದರು.

ಇಂಟಲಿಜೆನ್ಸ್‌ನಲ್ಲಿ ಪ್ರತ್ಯೇಕ ಟ್ರೈನಿಂಗ್ ಮತ್ತು ಪ್ರತ್ಯೇಕ ನೇಮಕಾತಿಗೆ ಸೂಚಿಸಲಾಗಿದೆ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಸುರತ್ಕಲ್‌: ಹಠಾತ್ ಬ್ರೇಕ್ ಹಾಕಿದ ಬಸ್ ಚಾಲಕ; ಬಸ್ ಮುಂಭಾಗದಲ್ಲಿ ಕುಳಿತ ಮಹಿಳೆ ಕೆಳಗೆ ಬಿದ್ದು ತಲೆ ಮೇಲೆ ಚಕ್ರ ಹರಿದು ಸ್ಥಳದಲ್ಲೇ ಸಾವು


Share News

Leave a Reply

Your email address will not be published. Required fields are marked *