Breaking News

ಸುರತ್ಕಲ್‌: ಹಠಾತ್ ಬ್ರೇಕ್ ಹಾಕಿದ ಬಸ್ ಚಾಲಕ; ಬಸ್ ಮುಂಭಾಗದಲ್ಲಿ ಕುಳಿತ ಮಹಿಳೆ ಕೆಳಗೆ ಬಿದ್ದು ತಲೆ ಮೇಲೆ ಚಕ್ರ ಹರಿದು ಸ್ಥಳದಲ್ಲೇ ಸಾವು

Share News

ಸುರತ್ಕಲ್‌, ಜ 15: ಖಾಸಗಿ ಬಸ್‌ ಚಾಲಕ ಹಠಾತ್ ಬ್ರೇಕ್‌ ಹಾಕಿದ ಪರಿಣಾಮ ಬಸ್‌ ಮುಂಭಾಗದಲ್ಲಿ ಕುಳಿತ ಮಹಿಳೆ ಕೆಳಗೆ ಬಿದ್ದು ತಲೆ ಮೇಲೆ ಚಕ್ರ ಹರಿದು ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದ ಘಟನೆ ಜೋಕಟ್ಟೆ ಕ್ರಾಸ್ ಬಳಿಯ ಸರ್ವೀಸ್ ಸ್ಟೇಷನ್ ಬಳಿ ಇಂದು ಬೆಳಗ್ಗೆ 10 ಗಂಟೆ ಸಮಯಕ್ಕೆ ಸಂಭವಿಸಿದೆ.

ಇದನ್ನೂ ಓದಿ: ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಕಾಲುವೆಯಲ್ಲಿ ಪತ್ತೆ

ಮೃತಪಟ್ಟ ಮಹಿಳೆ ಈರಮ್ಮ (65) ಎಂದು ಗುರುತಿಸಲಾಗಿದೆ. ತನ್ನ ಮಗಳೊಂದಿಗೆ ಖಾಸಗಿ ಬಸ್ಸಿನಲ್ಲಿ ಸುರತಕ್ಕಲ್‌ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಬಸ್ಸು ಜೋಕಟ್ಟೆ ಕ್ರಾಸ್ ಬಳಿಯ ಸರ್ವೀಸ್ ಸ್ಟೇಷನ್ ತಲುಪಿದಾಗ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ.

ಮುಂದಿನ ಸೀಟಿನಲ್ಲಿ ಕುಳಿತಿದ್ದ ಈರಮ್ಮ ಬಸ್‌ನಿಂದ ಕೆಳಗೆ ಬಿದ್ದಿದ್ದಾರೆ. ಅಲ್ಲದೇ ಬಸ್ಸಿನ ಹಿಂದಿನ ಎಡ ಚಕ್ರ ಈರಮ್ಮನ ಮೇಲೆ ಚಲಿಸಿದೆ. ಇದರ ಪರಿಣಾಮವಾಗಿ ತಲೆಗೆ ಬಲವಾದ ಪೆಟ್ಟಾಗಿದ್ದು ಈರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಉತ್ತರ ಸಂಚಾರಿ   ಪೊಲೀಸ್‌ ರಾಣೆಯಲ್ಲಿ   ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ 2000 ಅಡಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ


Share News

Leave a Reply

Your email address will not be published. Required fields are marked *