Breaking News

ಸುರತ್ಕಲ್: ಭೂಮಾಪನಾಧಿಕಾರಿ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ!

Share News

ಸುರತ್ಕಲ್, ಡಿ 04: ಬೆಳ್ತಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಭೂ ಮಾಪನಾಧಿಕಾರಿಯನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಬೆಳ್ತಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಭೂ ಮಾಪನಾಧಿಕಾರಿ ನಿಝಾಮ್ ಅಮಾನತುಗೊಂಡ ಅಧಿಕಾರಿ.

ಇದನ್ನೂ ಓದಿ: ಮಂಗಳೂರು ಲೋಕಸಭೆಗೆ ಅಭಿಪ್ರಾಯ ಸಂಗ್ರಹ: ಮಧು ಬಂಗಾರಪ್ಪ ಮುಂದೆ ಹರೀಶ್ ಕುಮಾರ್, ರಮಾನಾಥ ರೈ ಹೆಸರಿಗೆ ಪ್ರಬಲ ಒಲವು!

ನಿಝಾಮ್ ಸುರತ್ಕಲ್ ವಲಯ ಭೂ ಮಾಪನಾಧಿಕಾರಿಯಾಗಿದ್ದ ಸಂದರ್ಭ , ಕಾನ ಕಟ್ಲ ಜನತಾ ಕಾಲನಿಯ ದ.ಕ. ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತ್ತು ಆಟದ ಮೈದಾನವಿರುವ ಭೂಮಿಯನ್ನು ಅಳೆತ ಮಾಡಿ ಖಾಸಗಿ ನಿವೇಶನ ಎಂದು ಜಮೀನಿನ ಮಾಲಕರಿಗೆ ಪ್ರಾಪರ್ಟಿ ಕಾರ್ಡ್‌ನೀಡಿದ್ದರು.

ಇದನ್ನೂ ಓದಿ: ಕಾರು ಮತ್ತು ಟಾಟಾ ಏಸ್ ನಡುವೆ ಭೀಕರ ಅಪಘಾತ ; ಓರ್ವ ಸಾವು!

ಆರ್ ಟೀಸಿ ಹಾಗೂ ಇಲಾಖೆಯ ಎಫ್ಎಂಬಿ ನಕ್ಷೆಯನ್ನು ಪಡೆದುಕೊಂಡು ಕಾನೂನು ಪ್ರಕಾರವಾಗಿಯೇ ಸರ್ವೆ ಆಗಿದೆಯಾದರೂ ಭೂಮಾಪನಾಧಿಕಾರಿ ತಲೆದಂಡವಾಗಿದೆ. ಶಿಕ್ಷಣ ಇಲಾಖೆಗೆ ಮೀಸಲಿರಿಸಲಾದ 1.60 ಎಕರೆ ಭೂಮಿಯಲ್ಲಿ ಅಲ್ಪಭಾಗದಷ್ಟು ಜಮೀನು ವಸತಿ ರಹಿತರಿಗೆ ಮತ್ತು ನಗರಾಭಿವೃದ್ಧಿ ಇಲಾಖೆಯಡಿ ಬರುವ ಮಂಗಳೂರು ಮಹಾನಗರ ಪಾಲಿಕೆಯ ಆಶ್ರಯ ನಿವೇಶನ ಕಟ್ಟಲು ಬಳಕೆಯಾಗಿದೆ.

WATCH VIDEO ON YOUTUBE: ನಾಗನ ಆರಾಧನೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶ ನಾಗಬನಗಳದ್ದು: ತಮ್ಮಣ್ಣ ಶೆಟ್ಟಿ


Share News

Leave a Reply

Your email address will not be published. Required fields are marked *