Breaking News

ಕಾರು ಮತ್ತು ಟಾಟಾ ಏಸ್ ನಡುವೆ ಭೀಕರ ಅಪಘಾತ ; ಓರ್ವ ಸಾವು!

Share News

ಚಿಕ್ಕಬಳ್ಳಾಪುರ: ಕಾರು (Car) ಮತ್ತು ಟಾಟಾ ಏಸ್‌ನ (Tata Ace) ನಡುವೆ ಭೀಕರ ಅಪಘಾತ (Accident) ಸಂಭವಿಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ದೊಡ್ಡಬಳ್ಳಾಪುರದಲ್ಲಿ (Doddaballapura) ನಡೆದಿದೆ.

ಇದನ್ನೂ ಓದಿ: SSLC ಮತ್ತು ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ…!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ತಾಂಡಾ ಬಳಿ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಬೆಂಗಳೂರಿನ (Bengaluru) ಬಗಲಗುಂಟೆ ನಿವಾಸಿ ಶಿವಕುಮಾರ್ (32) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತೋರ್ವ ಅನಂತರಾಮ್ (37) ಗಂಭೀರ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಕೋಳಿ ಸಾಗಾಟದ ಲಾರಿ ರಸ್ತೆಯಲ್ಲೇ ಪಲ್ಟಿ!

ಗಾಯಾಳುವಿಗೆ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ 112 ಪೊಲೀಸರು ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಟಾಟಾ ಏಸ್‌ನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಚಾಲಕನ ಮಾಹಿತಿಯನ್ನು ಪೋಲೀಸರು ಕಲೆ ಹಾಕುತ್ತಿದ್ದಾರೆ.

WATCH VIDEO ON YOUTUBE: ನಾಗನ ಆರಾಧನೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶ ನಾಗಬನಗಳದ್ದು: ತಮ್ಮಣ್ಣ ಶೆಟ್ಟಿ


Share News

Leave a Reply

Your email address will not be published. Required fields are marked *