Breaking News

ಮಂಗಳೂರು ಲೋಕಸಭೆಗೆ ಅಭಿಪ್ರಾಯ ಸಂಗ್ರಹ: ಮಧು ಬಂಗಾರಪ್ಪ ಮುಂದೆ ಹರೀಶ್ ಕುಮಾರ್, ರಮಾನಾಥ ರೈ ಹೆಸರಿಗೆ ಪ್ರಬಲ ಒಲವು!

Share News

ಮಂಗಳೂರು: ಮಂಗಳೂರು ಲೋಕಸಭಾ ಚುನಾವಣೆಯ 2024ರ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಬಗ್ಗೆ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲು ಹೈಕಮಾಂಡ್ ನಿಂದ ನೇಮಕವಾದ ಚುನಾವಣಾ ವೀಕ್ಷಕರಾದ ಮಧು ಬಂಗಾರಪ್ಪ ಮಂಗಳೂರಿನ ಕದ್ರಿ ಡಿಸಿಸಿ ಕಾಂಗ್ರೆಸ್ ಕಚೇರಿಯಲ್ಲಿ ಅಭಿಪ್ರಾಯ ಅಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಹಾಗೂ ಮಾಜಿ ಸಚಿವರಾದ ರಮನಾಥ ರೈ ಪರವಾಗಿ ಕಾರ್ಯಕರ್ತರಿಂದ ವ್ಯಾಪಕ ಒಲವು ವ್ಯಕ್ತವಾಗಿದೆ.

ಅಚ್ಚರಿಯ ರೀತಿಯಲ್ಲಿ ಬಹುತೇಕ ಕಾರ್ಯಕರ್ತರು ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಹೆಸರನ್ನು ಪ್ರಸ್ತಾಪಿಸಿರುವುದು ಪಕ್ಷವನ್ನು ಅಚ್ಚರಿಗೆ ದೂಡಿದೆ. ಬಹುತೇಕ ಕಾರ್ಯಕರ್ತರು ಹರೀಶ್ ಕುಮಾರ್ ಅವರು ಎಲ್ಲರನ್ನು ಸರಿಸಮಾನವಾಗಿ ನಡೆಸಿಕೊಂಡು ಹೋಗುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ನೀಡಿ ಎಂಬ ಆಗ್ರಹವನ್ನು ಮಾಡಿದ್ದಾರೆ.

ಇನ್ನು ಮಾಜಿ ಸಚಿವ ರಮಾನಾಥ ರೈ ಪರವಾಗಿ ಬಂಟ್ವಾಳ ಹಾಗೂ ಇತರ ಭಾಗದ ಕಾರ್ಯಕರ್ತರು ಸಹ ಒಲವು ವ್ಯಕ್ತಪಡಿಸಿದ್ದಾರೆ. ಅವರು ಹಿರಿಯ ನಾಯಕರಿದ್ದಾರೆ, ಆ ಕಾರಣದಿಂದ ಅವರಿಗೆ ಟಿಕೆಟ್ ನೀಡುವಂತೆ ಹಲವು ಕಾರ್ಯಕರ್ತರು ಒಲವು ವ್ಯಕ್ತಪಡಿಸಿದ್ದಾರೆ.

ಹರೀಶ್ ಕುಮಾರ್ ಹಾಗೂ ರಮನಾಥ ರೈ ಪ್ರಬಲ ಅಭ್ಯರ್ಥಿಗಳಾಗಿ ಕಾರ್ಯಕರ್ತರ ಭಾಗದಿಂದ ಹೊರಹೊಮ್ಮಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.


Share News

Leave a Reply

Your email address will not be published. Required fields are marked *