Breaking News

ವಿಷಕಾರಿ ಹಾವುಗಳ ವಿಷವನ್ನು ತೆಗೆದು ಬಿಸಿನೆಸ್ ಮಾಡುತ್ತಿದ್ದ ವ್ಯಕ್ತಿ ; ಸಿಐಡಿ ಫಾರೆಸ್ಟ್ ಸೆಲ್ ವಶಕ್ಕೆ!

Share News

ಬೆಂಗಳೂರು: ಈ ಜಗತ್ತಿನಲ್ಲಿ ಎಂಥೆಂಥಾ ಮನುಷ್ಯರಿದ್ದಾರೆ ನೋಡಿ. ನಾವೆಲ್ಲ ಹಾವು, ಅದರ ವಿಷ ಅಂದ ಕೂಡಲೇ ಮೈ ಜುಮ್ಮೆಂದು ಬದುಕಿದೆಯಾ ಬಡ ಜೀವ ಎಂದು ಓಡಿ ಹೋಗುತ್ತೇವೆ. ಆದರೆ, ಇಲ್ಲೊಬ್ಬ ಮನುಷ್ಯ ವಿಷಯುಕ್ತ ಹಾವುಗಳನ್ನೇ ಸಾಕುತ್ತಿದ್ದಾನೆ. ಹಾವುಗಳ ವಿಷ (Snake Poison) ತೆಗೆದು ಮಾರಾಟ ಮಾಡುವುದೇ ಇವನ ಬ್ಯುಸಿನೆಸ್‌ (Snake business)!

ಅಂದ ಹಾಗೆ ಈ ವಿಷ ಜಂತುವಿನ ಹೆಸರು: ಸಂದೀಪ್‌ ಅಲಿಯಾಸ್‌ ದೀಪು. ಮೈಸೂರಿನಲ್ಲಿ (Snake Man in mysore) ತನ್ನ ಮನೆಯನ್ನೇ ಹಾವಿನ ಆವಾಸ ಸ್ಥಾನವಾಗಿ ಮಾಡಿಕೊಂಡಿರುವ ಈ ವಿಚಿತ್ರ ಜೀವಿಯನ್ನು ಸಿಐಡಿ ಫಾರೆಸ್ಟ್‌ ಸೆಲ್‌ (CID Forest Cell) ವಶಕ್ಕೆ ಪಡೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಮತ್ತು ತಮಿಳುನಾಡಿಗೆ ಮಾತ್ರ ಪ್ರಧಾನಿ ಅಲ್ಲ ; ಶೋಭಾ ಕರಂದ್ಲಾಜೆ

ಜಂತುವಿನ ವಿಷಕ್ಕಿಂತ ಮಾನವನ ದುರಾಸೆಯ ವಿಷವೇ ಹೆಚ್ಚು ಎನ್ನುವ ಮಾತು ಸರಿ ಹೊಂದುತ್ತದೆ ಈತನಿಗೆ. ಹಾವುಗಳ ವಿಷವನ್ನೇ ಬಳಸಿಕೊಂಡು ಲಕ್ಷ ಲಕ್ಷ ವ್ಯವಹಾರ ಮಾಡುವ ವಿಲಕ್ಷಣ ಜೀವಿ ಇವನು. ಹಾವಿನ ವಿಷಕ್ಕೆ ಇರುವ ಲಕ್ಷಾಂತರ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಇನ್ನೋವೇಟಿವ್‌ ಬ್ಯುಸಿನೆಸ್‌ ಸ್ಟ್ರಾಟಜಿ ಇವನದು.!

ಮನೆಯಲ್ಲ ಇದು ಹಾವಿನ ಮನೆ!

ಮೈಸೂರಿನಲ್ಲಿರುವ ಆರೋಪಿ ಸಂದೀಪ್ ಅಲಿಯಾಸ್ ದೀಪು ಹಾವಿನ ವಿಷದ ಬ್ಯುಸಿನೆಸ್‌ ಮಾಡುತ್ತಿದ್ದಾನೆ ಎಂಬ ಸಂಶಯ ಅರಣ್ಯ ಇಲಾಖೆಗೆ ಬಂದಿತ್ತು. ಸಿಐಡಿ‌‌ ಫಾರೆಸ್ಟ್ ಸೆಲ್‌ನ ಮೂಲಕ ಮಿಂಚಿನ ಕಾರ್ಯಾಚರಣೆಯಲ್ಲಿ ಆತನ ಮನೆಗೆ ದಾಳಿ ಮಾಡಿದಾಗ ಸ್ವತಃ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಯಾಕೆಂದರೆ ಅಲ್ಲಿ ಅವರು ತಿಳಿದುದಕ್ಕಿಂತಲೂ ದೊಡ್ಡ ಬ್ಯುಸಿನೆಸ್‌ ನಡೆಯುತ್ತಿತ್ತು.! ಆತ ಮನೆಯಲ್ಲಿ ಸುಮಾರು 9 ಜಾತಿಯ ವಿಷಕಾರಿ ಹಾವುಗಳನ್ನು ಸಾಕಿದ್ದ!

ಸಂದೀಪ್ ಅಲಿಯಾಸ್ ದೀಪು ಮನೆಯಲ್ಲಿದ್ದ 9 ವಿಧದ ಹಾವುಗಳನ್ನು ನೋಡಿದರೆ ನೀವು ಬೆಚ್ಚಿ ಬೀಳುತ್ತೀರಿ. ಪಟ್ಟಿಯನ್ನೊಮ್ಮೆ ನೀವೇ ನೋಡಿ.

  1. ಕನ್ನಡಕ ನಾಗರ – 04
  2. ಟ್ರಿಂಕೆಟ್ ಹಾವು – 02
  3. ಸಾಮಾನ್ಯ ಕ್ರೈಟ್ – 02
  4. ಸಾಮಾನ್ಯ ತೋಳ ಹಾವು -01
  5. ಸಾಮಾನ್ಯ ಕುಕ್ರಿ – 01
  6. ಸಾ ಸ್ಕಾಲ್ಡ್ ವೈಪರ್ – 02
  7. ಇಲಿ ಹಾವು – 02
  8. ಚೆಕರ್ಡ್ ಕೀಲ್‌ಬ್ಯಾಕ್ – 01
  9. ಸ್ಯಾಂಡ್ ಬೋವಾ – 01

ಹಾವುಗಳ ಜತೆಗೆ ನಾವು ನಾಲ್ಕು ಸಿವೆಟ್ ಬೆಕ್ಕುಗಳನ್ನು ಸಾಕಿದ್ದ ಆರೋಪಿ ದೀಪು. ಈಗ ಹಾವು ಬೆಕ್ಕುಗಳೊಂದಿಗೆ ಆರೋಪಿಯನ್ನು ಅರಸ್ಟ್ ಮಾಡಿದ ಸಿಐಡಿ ಫಾರೆಸ್ಟ್ ಸೆಲ್ WLPA 1972 ರ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದೆ.

ಇನ್‌ಸ್ಟಾ ಗ್ರಾಂ ಮೆಸೇಜ್‌ನಲ್ಲಿ ಎಂದು 16ರ ಬಾಲಕನನ್ನು ತಲ್ವಾರ್‌ನಿಂದ ಕಡಿದು ಕೊಂದ ಸ್ನೇಹಿತರು!

ಹೇಗೆ ಸಾಕುತ್ತಿದ್ದ ಎನ್ನುವುದೇ ಕುತೂಹಲ

ಒಂದು ಮನೆಯಲ್ಲಿ ಇಷ್ಟೆಲ್ಲ ಭಯಾನಕ ಹಾವುಗಳನ್ನು ಇಟ್ಟುಕೊಂಡು ಹೇಗೆ ಸಾಕುತ್ತಿದ್ದ ಎನ್ನುವುದೇ ಕುತೂಹಲಕಾರಿ ಸಂಗತಿ. ಈ ಎಲ್ಲ ಹಾವುಗಳಿಗೆ ನಿರ್ದಿಷ್ಟವಾದ ಆಹಾರಗಳಿವೆ. ಅವುಗಳನ್ನೇ ಕೊಡಬೇಕು. ಹೆಚ್ಚಿನವುಗಳಿಗೆ ಬೇರೆ ಹಾವು ಮತ್ತು ಇಲಿಗಳು ಆಹಾರ.

ಅವುಗಳನ್ನು ಹೇಗೆ ವ್ಯವಸ್ಥೆ ಮಾಡುತ್ತಿದ್ದ? ಹಾವುಗಳಿಂದ ವಿಷ ಹೇಗೆ ತೆಗೆಯುತ್ತಿದ್ದ? ಅವುಗಳಿಗೆ ಮಾರುಕಟ್ಟೆ ಹೇಗೆ ಕಂಡುಕೊಳ್ಳುತ್ತಿದ್ದ? ಅವುಗಳನ್ನು ಕೊಳ್ಳುವವರು ಯಾರು ಎನ್ನುವುದೆಲ್ಲ ಭಾರಿ ಕುತೂಹಲದ ಸಂಗತಿಗಳು. ಪೊಲೀಸರು ಆತನ ವಿಚಾರಣೆ ನಡೆಸುವಾಗ ಭಯಾನಕ ಮತ್ತು ಕುತೂಹಲಕಾರಿ ಮಾಹಿತಿಗಳು ದೊರೆಯುವ ನಿರೀಕ್ಷೆ ಇದೆ.

101 ಕೋಟಿ ಷೇರು ಮೌಲ್ಯ ಹೊಂದಿರುವ ಈ ವ್ಯಕ್ತಿಯ ಸರಳ ಜೀವನ ಒಮ್ಮೆ ನೋಡಿ…!


Share News

Leave a Reply

Your email address will not be published. Required fields are marked *