Breaking News

ಇನ್‌ಸ್ಟಾ ಗ್ರಾಂ ಮೆಸೇಜ್‌ನಲ್ಲಿ ಎಂದು 16ರ ಬಾಲಕನನ್ನು ತಲ್ವಾರ್‌ನಿಂದ ಕಡಿದು ಕೊಂದ ಸ್ನೇಹಿತರು!

Share News

ಬೆಳಗಾವಿ: ಸಾಮಾಜಿಕ ಜಾಲ ತಾಣಗಳ ದುಷ್ಪರಿಣಾಮ (Social Media side effects) ಒಬ್ಬ ಬಾಲಕನ ಪ್ರಾಣವನ್ನೇ (16 year old boy murdered) ಕಿತ್ತುಕೊಂಡಿದೆ. ಇನ್‌ಸ್ಟಾ ಗ್ರಾಂ ವೇದಿಕೆಯಲ್ಲಿ (Instagram fight) ಆಡಿದ ಒಂದು ಸಣ್ಣ ಮಾತಿನಿಂದ 16 ವರ್ಷದ ಬಾಲಕನೊಬ್ಬನ ಸಾವಿಗೆ ಕಾರಣವಾಗಿದೆ.

ಇನ್‌ಸ್ಟಾ ಗ್ರಾಂ ಮೆಸೇಜ್‌ನಲ್ಲಿ ಬೈದಿದ್ದ ಎಂಬ ಒಂದೇ ಕಾರಣವನ್ನು ಇಟ್ಟುಕೊಂಡು ಒಬ್ಬ ಬಾಲಕನನ್ನು ಕೊಲೆ ಮಾಡಿದ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ನಡೆದಿದೆ. ಕೇವಲ ಹದಿನಾರು ವರ್ಷದ ಬಾಲಕನನ್ನು ತಲವಾರಿನಿಂದ ಕಡಿದು ಕೊಲೆ (Murder by friends) ಮಾಡಲಾಗಿದೆ. ಹಾಗಂತ ಕೊಲೆ ಮಾಡಿದವರು ದೊಡ್ಡವರೇನಲ್ಲ. ಅವನದೇ ವಯಸ್ಸಿನ ನಾಲ್ಕು ಮಂದಿ ಬಾಲಕರು ಸೇರಿ ಈ ಕೊಲೆ ಮಾಡಿದ್ದಾರೆ. ಜತೆಗೆ ಅವರು ಅವನ ಸ್ನೇಹಿತರೇ ಬೇರೆ.

ಮದುವೆ ಸಮಾರಂಭದಲ್ಲಿ ಅಗ್ನಿ ದುರಂತ ; 100 ಮಂದಿ ಸಾವು!

ಈ ಜಗಳ ಶುರುವಾಗಿದ್ದು ಯಾವಾಗ? ಏನು ಮೆಸೇಜ್‌ ಮಾಡಿದ್ದ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಬುಧವಾರ ಸಂಜೆ ಪ್ರಜ್ವಲ್‌ ಸಂಕದ್‌ನನ್ನು ಕರೆಸಿಕೊಂಡ ಈ ನಾಲ್ವರು ಬಾಲಕರು ಅವನ ಮೇಲೆ ಯದ್ವಾತದ್ವಾ ತಲವಾರು ಬೀಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಆತನ ತಲೆಯನ್ನೇ ಗುರಿ ಮಾಡಿಕೊಂಡು ದಾಳಿ ಮಾಡಲಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಜ್ವಲ್‌ನನ್ನು ಆತನ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಾದರೂ ತಡರಾತ್ರಿ ಆತ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣವೇ ಬದುಕಾದರೆ ದುರಂತ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳೇ ನಮ್ಮ ಬದುಕನ್ನು ನಿರ್ಧರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜಗತ್ತು ಜಾಲತಾಣಗಳಿಂದಲೇ ನಡೆಯುತ್ತಿದೆ ಎನ್ನುಷ್ಟು ಅಡಿಕ್ಟ್‌ ಆಗಿಬಿಟ್ಟಿರುವುದರಿಂದ ಅಲ್ಲಿ ನಡೆಯುವ ಬೆಳವಣಿಗೆಗಳು ಬದುಕನ್ನೇ ಬದಲಿಸಿ ಬಿಡುತ್ತವೆ.

ಫೇಸ್‌ ಬುಕ್‌ನಲ್ಲೋ, ಇನ್‌ಸ್ಟಾ ಗ್ರಾಂನಲ್ಲೋ ಹಾಕಿದ ಫೋಟೊ, ವಿಡಿಯೊಗಳಿಗೆ ಬರುವ ವ್ಯೂಸ್‌ ಮತ್ತು ಕಮೆಂಟ್‌ಗಳಿಂದಲೇ ಖುಷಿಪಡುವವರು, ಕಮೆಂಟ್‌ ಬಾರದಿದ್ದರೆ ಮರುಗುವವರು, ವ್ಯೂಸ್‌ ಇಲ್ಲದಿದ್ದರೆ ಕೊರಗುವವರು ಹೆಚ್ಚಾಗಿದ್ದಾರೆ.

ರಸ್ತೆಬದಿ ಬಿದ್ದಿದ್ದ ಕಪ್ಪು ಚಿರತೆ ಮರಿಯನ್ನು ಬೆಕ್ಕು ಮರಿ ಎಂದು ಸಾಕಿದ ಯುವತಿ! ಇಲ್ಲಿದೆ ವಿಡಿಯೋ

ಇದೇ ಹೊತ್ತಿಗೆ ಅದರಲ್ಲಿ ಬರುವ ನೆಗೆಟಿವ್‌ ಕಮೆಂಟ್‌ಗಳಿಂದ ಬದುಕೇ ಮುಗಿದು ಹೋಯಿತು ಎಂಬಂತೆ ಬೇಜಾರು ಮಾಡಿಕೊಳ್ಳುವವರು, ನೆಗೆಟಿವ್‌ ಕಮೆಂಟ್‌ ಹಾಕಿದವರ ಮೇಲೆ ಮಾತಿನ, ಬರಹದ ದ್ವೇಷ ಸಾಧಿಸಲು ಹೊರಡುವುದು ಹೆಚ್ಚಾಗುತ್ತಿದೆ. ಕೆಲವರು ಇದನ್ನೊಂದು ಸಾಮಾಜಿಕ ಅಂತಸ್ತು ಎಂದು ಪರಿಗಣಿಸಿ ದೈಹಿಕವಾಗಿಯೇ ಹಲ್ಲೆ ನಡೆಸುತ್ತಾರೆ.

ಇಲ್ಲಿ ಸಾಮಾಜಿಕ ಜಾಲತಾಣವೇ ಬದುಕಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲೂ ಸಣ್ಣ ಸಣ್ಣ ಮಕ್ಕಳು ಕೂಡಾ ಈಗ ಜಾಲತಾಣದಲ್ಲೇ ಮುಳುಗಿರುವುದರಿಂದ ಅವರಿಗೆ ಒಳಿತು ಕೆಡುಕಿನ ಬಗ್ಗೆ ಅರಿವಿಲ್ಲದೆ ಅಪಾಯಕಾರಿ ಸೇಡಿಗೆ ಮುಂದಾಗುತ್ತಾರೆ. ಬಹುಶಃ ಪ್ರಜ್ವಲ್‌ ಕೊಲೆಗೆ ಇಂಥ ಸಣ್ಣ ಸಂಗತಿಗಳೇ ಕಾರಣ ಆಗಿರಬಹುದು. ಏನೇ ಆದರೂ ಒಬ್ಬ‌ ಬೆಳೆಯುವ ಹುಡುಗ ಸಾವು ಕಂಡಿದ್ದಾನೆ. ಅವನದೇ ವಯಸ್ಸಿನ ಮಕ್ಕಳು ಹಂತಕರಾಗಿ ನಿಂತಿದ್ದಾರೆ.

ಇಂದು ಭಾರತ-ಆಸ್ಟ್ರೇಲಿಯಾ ತ್ರತೀಯ ಏಕದಿನ – ತಂಡಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಾಪಸ್!


Share News

Leave a Reply

Your email address will not be published. Required fields are marked *