Breaking News

ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆಗೆ ಹೊಸ ನಿಯಮ; ಯಾವುದೆಲ್ಲ ದಾಖಲೆಗಳಲ್ಲಿ ಬದಲಾವಣೆ – ಇಲ್ಲಿದೆ ಮಾಹಿತಿ

Share News

ಹೊಸದಿಲ್ಲಿ: ವಿದೇಶ ಪ್ರಯಾಣಕ್ಕಾಗಿ ಹೊಸ ಪಾಸ್‌ಪೋರ್ಟ್‌ಗೆ (Passport Rule) ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಅರ್ಜಿದಾರರು ಇನ್ನು ಮುಂದೆ ಅರ್ಜಿ ಸಲ್ಲಿಸುವಾಗ ಡಿಜಿಲಾಕರ್‌ (DigiLocker) ಮೂಲಕ ದಾಖಲೆಗಳನ್ನು ಅಪ್‌ಲೋಡ್‌ (upload) ಮಾಡಬೇಕಾಗುತ್ತದೆ. ಈ ನಿಯಮವು (Rule) ಆ. 5ರಿಂದಲೇ (August 5) ಜಾರಿಗೆ ಬಂದಿದೆ.

“ಡಿಜಿಲಾಕರ್‌ (DigiLocker) ಬಳಸಿದರೆ, ಪಾಸ್‌ಪೋರ್ಟ್‌ ಅರ್ಜಿಯ ವೆರಿಫಿಕೇಷನ್‌ ಪ್ರಕ್ರಿಯೆಯಲ್ಲಿ ಯಾವುದೇ ಹಾರ್ಡ್‌ ಕಾಪಿ ತರುವ ಅಗತ್ಯ ಇರುವುವಿಲ್ಲ,” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಹೊಸ ನಿಯಮದಿಂದ ಅರ್ಜಿ ಪ್ರಕ್ರಿಯೆಯ ಸಮಯ ಕಡಿಮೆಯಾಗಲಿದ್ದು, ಪಾಸ್‌ಪೋರ್ಟ್‌ ಅಪ್ಲಿಕೇಶನ್‌ ಪ್ರಕ್ರಿಯೆಯ ಗುಣಮಟ್ಟವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಬಹು ಬೇಡಿಕೆಯ ನಿಂಬೆಹಣ್ಣಿನ ಕೃಷಿ ನೀವೂ ಕೂಡ ಆರಂಭಿಸಬಹುದು; ಲಕ್ಷ ಲಕ್ಷ ಲಾಭ – ಇಲ್ಲಿದೆ ಸಮಗ್ರ ಮಾಹಿತಿ

ಪಾಸ್ ಪೋರ್ಟ್ ಅರ್ಜಿ ಪ್ರಕ್ರಿಯೆಯೆಗೆ ಹೊಸ ನಿಯಮ
ಅಂತಾರಾಷ್ಟ್ರೀಯ (International) ಪ್ರಯಾಣಕ್ಕಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಗಳು www.passportindia.gov.in ಆನ್ಲೈನ್ ನಲ್ಲಿ (Online) ಅರ್ಜಿ ಸಲ್ಲಿಸುವ ಮೊದಲು ಈ ಕೆಲಸ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಕೆಯ ಮೊದಲು ಸರ್ಕಾರ (Government) ಒದಗಿಸಿದ ವೇದಿಕೆಯಾದ ಡಿಜಿಲಾಕರ್ (DigiLocker) ಮೂಲಕ ಅಗತ್ಯ ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗಿದೆ.
ವಿವಿಧ ಪ್ರದೇಶಗಳಲ್ಲಿರುವ ಪಾಸ್ ಪೋರ್ಟ್ ಕೇಂದ್ರಗಳು ಮತ್ತು ಪೋಸ್ಟ್ ಆಫೀಸ್ ಪಾಸ್ಟ್ ಪೋರ್ಟ್ ಸೇವಾ ಕೇಂದ್ರಗಳಲ್ಲಿ ಭೌತಿಕ ದಾಖಲೆ ಪರಿಶೀಲನೆಯ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಈ ನಿಯಮ ಏಕೆ?
ಪಾಸ್‌ಪೊರ್ಟ್‌ (Passport) ಅರ್ಜಿ ಪ್ರಕ್ರಿಯೆಯನ್ನು ವೇಗವಾಗಿಸಲು ಈ ಡಿಜಿಲಾಕರ್ (DigiLocker) ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಏಕಕಾಲದಲ್ಲಿ ಭೌತಿಕ ದಾಖಲೆಗಳ ಪರಿಶೀಲನೆಯ ಅಗತ್ಯವನ್ನು ಕಡಿಮೆ ಮಾಡಲು ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಮತ್ತು ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ವಿವಿಧ ಪ್ರದೇಶಗಳಲ್ಲಿ ತೆರೆಯಲಾಗಿದೆ.

ಬಹು ಬೇಡಿಕೆಯ ನಿಂಬೆಹಣ್ಣಿನ ಕೃಷಿ ನೀವೂ ಕೂಡ ಆರಂಭಿಸಬಹುದು; ಲಕ್ಷ ಲಕ್ಷ ಲಾಭ – ಇಲ್ಲಿದೆ ಸಮಗ್ರ ಮಾಹಿತಿ

ಡಿಜಿಲಾಕರ್‌ (DigiLocker) ಎಂದರೇನು?

ಡಿಜಿಲಾಕರ್‌ (DigiLocker) ಎನ್ನುವುದು ಭಾರತೀಯ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ಸಚಿವಾಲಯ ಒದಗಿಸುತ್ತಿರುವ ಡಿಜಿಟಲ್‌ ವ್ಯಾಲೆಟ್‌ (Digital wallet) ಸೇವೆಯಾಗಿದೆ. ಇದರ ಅಡಿಯಲ್ಲಿ ಬಳಕೆದಾರರು ಸರಕಾರದಿಂದ ಪಡೆದ ಎಲ್ಲಾ ದಾಖಲೆಗಳನ್ನು ಸುರಕ್ಷಿತ ರೀತಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದಾಗಿದೆ. ಅಗತ್ಯವಿದ್ದಾಗ ಇದನ್ನು ಡಿಜಿಲಾಕರ್‌ನಿಂದ ತೆಗೆದು ಬಳಸಬಹುದು. ಪ್ಯಾನ್‌ ಕಾರ್ಡ್‌ (Pancard), ಆಧಾರ್‌ ಕಾರ್ಡ್‌ (Adhaar card), ಪಾಸ್‌ಪೋರ್ಟ್‌ (Passport) ಮತ್ತು ಮತದಾರರ ಗುರುತಿನ ಚೀಟಿ (Voter ID), ಚಾಲನಾ ಪರವಾನಗಿ (Driving licence), ವಾಹನ ನೋಂದಣಿ ಪ್ರಮಾಣಪತ್ರ, ಶೈಕ್ಷಣಿಕ ಅಂಕಪಟ್ಟಿ (Marks card) ಮತ್ತು ಇತರ ದಾಖಲೆಗಳನ್ನು ಈ ಡಿಜಿಲಾಕರ್‌ನಲ್ಲಿ ಸಂಗ್ರಹಿಸಬಹುದು.

ಡಿಜಿಲಾಕರ್ (DigiLocker) ಬಳಕೆ ಹೇಗೆ?

ಡಿಜಿಲಾಕರ್ (DigiLocker) ಖಾತೆಯನ್ನು ತೆರೆಯಲು ಬಳಕೆದಾರರು ಮೊಬೈಲ್ (Mobile) ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಬೇಕು. ಮತ್ತು ಈ ಸಂಖ್ಯೆಯನ್ನು ಈಗಾಗಲೇ ಆಧಾರ್‌ಗೆ ಲಿಂಕ್ (Adhaar link) ಮಾಡಿರಬೇಕು, ಡಿಜಿಲಾಕರ್ (DigiLocker) ಖಾತೆಗೆ ಲಾಗ್ ಇನ್ ಮಾಡುವಾಗ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಬಳಕೆದಾರರಿಗೆ ಒನ್ ಟೈಮ್ ಪಾಸ್‌ವರ್ಡ್‌ (One time password) (OTP) ಕಳುಹಿಸಲಾಗುತ್ತದೆ. ಇನ್ನೊಂದು ಪ್ರಮುಖ ವಿಷಯವೆಂದರೆ, ನೀವು ಡಿಜಿಲಾಕರ್‌ನಲ್ಲಿ (DigiLocker) ಯಾವುದೇ ಬದಲಾವಣೆಗಳನ್ನು ಮಾಡಲು ಬಯಸಿದರೆ, ನೀವು ನಿನ್ನ ಆಧಾರ್‌ನಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.


Share News

Leave a Reply

Your email address will not be published. Required fields are marked *