Breaking News

ಬಹು ಬೇಡಿಕೆಯ ನಿಂಬೆಹಣ್ಣಿನ ಕೃಷಿ ನೀವೂ ಕೂಡ ಆರಂಭಿಸಬಹುದು; ಲಕ್ಷ ಲಕ್ಷ ಲಾಭ – ಇಲ್ಲಿದೆ ಸಮಗ್ರ ಮಾಹಿತಿ

Share News

ನಿಂಬೆ ಹಣ್ಣು ಬಹು ಉಪಯೋಗಿ ಹಣ್ಣಾಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ ಈ ತೋಟಗಾರಿಕಾ ಬೆಳೆಯಾದ ನಿಂಬೆಹಣ್ಣನ್ನು ಇಳುವರಿಯೊಂದಿಗೆ ಉತ್ತಮ ಆದಾಯ ಗಳಿಸಬಹದು. ಹೊಸದಾಗಿ ನಿಂಬೆ ಕೃಷಿ ಆರಂಭಿಸುವವರು ಗಿಡ ನಾಟಿಗೆ ಬೀಜದಿಂದ ತಯಾರಿಸಿದ ಗಿಡಗಳನ್ನು ಆಯ್ದುಕೊಳ್ಳುವುದು ಒಳ್ಳೆಯದು. ಮೇ ತಿಂಗಳ ಮೊದಲ ವಾರದಲ್ಲಿ ಗಿಡ ನಾಟಿ ಮಾಡಿದರೆ ಮಳೆ ನೀರಿನ ಬಲದಿಂದ ಉತ್ತಮವಾಗಿ ಬೆಳೆದು ನಿಲ್ಲುತ್ತದೆ. ಬೇಸಿಗೆಯಲ್ಲಿ ಗಿಡ ನೆಟ್ಟರೆ ಬೆಳೆಯುವ ಗಿಡಗಳಿಗೆ ನೀರು ಸಾಲದೆ ವಾತಾವರಣದ ಬಿಸಿಲಿಗೆ ಗಿಡ ಹೊಂದಿಕೊಳ್ಳದೆ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇಳುವರಿಯಲ್ಲಿ ವ್ಯತ್ಯಯವಾಗುತ್ತದೆ. ಗಿಡಗಳ ಆಯಸ್ಸು ಕ್ಷಿಣಿಸುತ್ತದೆ. ಗಿಡ ಹಚ್ಚಿದ ನಂತರ ಬುಡವನ್ನು ಬಿಡಿಸಿಕೊಡಬೇಕು. ಒಣಗಿದ ಗೆಲ್ಲುಗಳನ್ನು ತೆಗೆದುಬಿಡಬೇಕು. ಗಿಡಗಳಿಂದ ಇಳುವರಿ ಪಡೆಯಲುಮೂರು ವರ್ಷ ಕಾಯಬೇಕು. ಈ ಸಂದರ್ಭ ಆ ಭೂಮಿಯಲ್ಲಿ ಉತ್ಪಾದನೆ ಪಡೆಯಲು ಅಂತರ ಬೇಸಾಯವಾಗಿ ಪಪ್ಪಾಯ, ನುಗ್ಗೆ ಕೃಷಿ ಮಾಡಿದರೆ ಉತ್ತಮ.

ಬಹು ಬೇಡಿಕೆಯ ನಿಂಬೆಹಣ್ಣಿನ ಕೃಷಿ ನೀವೂ ಕೂಡ ಆರಂಭಿಸಬಹುದು; ಲಕ್ಷ ಲಕ್ಷ ಲಾಭ – ಇಲ್ಲಿದೆ ಸಮಗ್ರ ಮಾಹಿತಿ

ಲಿಂಬೆಯನ್ನು ಇತರ ಬಹುವಾರ್ಷಿಕ ಬೆಳೆಗಳಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದಾಗಿದೆ . ತೆಂಗಿನ ತೋಟದಲ್ಲಿ ಲಿಂಬೆಯನ್ನು ಅಂತರ ಬೆಳೆಯಾಗಿ ಅಳವಡಿಸಬಹುದಾಗಿದೆ . ಎರಡು ತೆಂಗಿನ ಸಾಲುಗಳ ಮಧ್ಯೆ ಬಿಸಿಲು ಸಾಕಷ್ಟು ಬೀಳುವಲ್ಲಿ ಲಿಂಬೆಗಿಡಗಳನ್ನು ಬೆಳೆಸಬಹುದಾಗಿದೆ . ಇದೇ ರೀತಿ ಲಿಂಬೆಯನ್ನು ಕಾಫಿ ಮತ್ತು ಸಪೋಟ ತೋಟಗಳಲ್ಲಿ ಅಂತರ ಬೆಳೆಯಾಗಿ ಬೆಳೆಸಬಹುದಾಗಿದೆ.

ಚೆನ್ನಾಗಿ ನೀರು ಬಸಿದು ಹೋಗುವಂತಹ 2-3 ಮೀ . ( 8-10 ಅಡಿ ) ಆಳವಿರುವ ಗೋಡು ಮಣ್ಣು ಪ್ರದೇಶಗಳನ್ನು ಈ ಬೆಳೆಗಳಿಗೆ ಆಯ್ಕೆ ಮಾಡಬೇಕು . ಲಿಂಬೆಗೆ ತೇವಾಂಶಯುಕ್ತ ಉಷ್ಣ ಹವಾಗುಣ ಸೂಕ್ತ . ಕಡಿಮೆ ತಾಪಮಾನ ಮತ್ತು ಬಿರುಗಾಳಿ ಬೀಸುವ ಪ್ರದೇಶಗಳು ಸೂಕ್ತವಲ್ಲ . ಒಣಹವೆಯಲ್ಲಿ ಇದು ಚೆನ್ನಾಗಿ ಬರುತ್ತದೆ . ಜೂನ್ – ಆಗಸ್ಟ್ ತಿಂಗಳುಗಳು ನಾಟಿಗೆ ಸಕಾಲ. ಸಸಿ ಬೆಳೆಸಲು ಬೇಕಾಗುವ ಬಿತ್ತನೆ ಬೀಜ ಪಡೆಯಲು ದೊಡ್ಡದಾದ ರಸಭರಿತ ತೆಳು ಸಿಪ್ಪೆಯ ಹಣ್ಣುಗಳನ್ನು ಆಯ್ಕೆ ಮಾಡಬೇಕು .ಸಾವಯುವ ಗೊಬ್ಬರವನ್ನು ಒಂದು ಸಸಿಗೆ ಪ್ರಾರಂಭದಲ್ಲಿ 5 ಕೆಜಿ ಕೊಡಬೇಕು ನಂತರ ವರ್ಷದಲ್ಲಿ ಜ್ಯಾಸ್ತಿ ಮಾಡಿಕೊಳ್ಳುತ್ತ ಹೋಗಬೇಕು. ಅಂದರೆ ವರ್ಷ ವರ್ಷ ೫ ಕೆಜಿ ಹೆಚ್ಚು ಮಾಡಿಕೊಳ್ಳುತ್ತಾ ಹೋಗಬೇಕು.

ನಿಂಬೆಹಣ್ಣಿಗೆ ಕನಿಷ್ಠ 7 °C (45 °F) ತಾಪಮಾನ ಬೇಕಾಗುತ್ತದೆ, ಆದ್ದರಿಂದ ಅವು ಸಮಶೀತೋಷ್ಣ ಹವಾಮಾನದಲ್ಲಿ ವರ್ಷಪೂರ್ತಿ ಗಟ್ಟಿಯಾಗಿರುವುದಿಲ್ಲ, ಆದರೆ ಅವು ಬಲಿತಂತೆ ಗಟ್ಟಿಯಾಗುತ್ತವೆ. [31] ಕಿಕ್ಕಿರಿದ ಕೊಂಬೆಗಳನ್ನು ಟ್ರಿಮ್ ಮಾಡುವ ಮೂಲಕ ಸಿಟ್ರಸ್‌ಗೆ ಕನಿಷ್ಠ ಸಮರುವಿಕೆಯನ್ನು ಅಗತ್ಯವಿರುತ್ತದೆ, ಪೊದೆಗಳ ಬೆಳವಣಿಗೆಯನ್ನು ಉತ್ತೇಜಿಸಲು ಎತ್ತರದ ಶಾಖೆಯನ್ನು ಕತ್ತರಿಸಲಾಗುತ್ತದೆ. [31] ಬೇಸಿಗೆಯ ಉದ್ದಕ್ಕೂ, ಅತ್ಯಂತ ಶಕ್ತಿಯುತ ಬೆಳವಣಿಗೆಯ ಬೆನ್ನಿನ ತುದಿಗಳನ್ನು ಹಿಸುಕು ಹಾಕುವುದು ಹೆಚ್ಚು ಹೇರಳವಾದ ಮೇಲಾವರಣ ಅಭಿವೃದ್ಧಿಗೆ ಭರವಸೆ ನೀಡುತ್ತದೆ. ಪ್ರೌಢ ಸಸ್ಯಗಳು ಅನಗತ್ಯ, ವೇಗವಾಗಿ ಬೆಳೆಯುವ ಚಿಗುರುಗಳನ್ನು (“ನೀರಿನ ಚಿಗುರುಗಳು” ಎಂದು ಕರೆಯಲಾಗುತ್ತದೆ) ಉತ್ಪಾದಿಸಬಹುದು, ಇವುಗಳನ್ನು ಸಸ್ಯದ ಕೆಳಭಾಗದಲ್ಲಿ ಅಥವಾ ಮಧ್ಯದಲ್ಲಿರುವ ಮುಖ್ಯ ಶಾಖೆಗಳಿಂದ ತೆಗೆದುಹಾಕಲಾಗುತ್ತದೆ. [31]

ನಿಂಬೆ ಗಿಡಗಳು ನಾಟಿ ಮಾಡಿದ ಮೂರು ವರ್ಷಕ್ಕೆ ಇಳುವರಿ ನೀಡಲು ಆರಂಭಿಸುತ್ತದೆ. ಸುಲಭ ನಿರ್ವಹಣೆಯಿಂದ ಉತ್ತಮ ಇಳುವರಿ ಪಡೆಯಬಹುದು. ಗಿಡಗಳಿಗೆ ಡ್ರಿಪ್‌ ಮೂಲಕ ನೀರು ಹಾಯಿಸಿಬೇಕು. ಗಿಡದ ಬುಡದಿಂದ ಮೂರು ಅಡಿ ಸುತ್ತಳತೆಯಲ್ಲಿ ಹನಿಹನಿಯಾಗಿ ನೀರು ಬೀಳುವಂತೆ ಮಾಡಬೇಕು. ಹನಿ ನೀರುಣ್ಣುವನಿಂಬೆ ಗಿಡಗಳು ಭರ್ತಿ ಫಸಲನ್ನು ಹೊತ್ತು ನಿಲ್ಲುತ್ತವೆ.

ಒಂದು ತಿಂಗಳಲ್ಲಿ 70ರಿಂದ 400 ರೂ.ಗೆ ನಿಂಬೆ ಹಣ್ಣಾಗಿದೆ. ತರಕಾರಿ ಮಾರಾಟಗಾರರು 1 ನಿಂಬೆ ಹಣ್ಣನ್ನು 10 ರೂ.ಗೆ ನೀಡುತ್ತಿದ್ದಾರೆ.ವಿವಿಧ ರಾಜ್ಯಗಳಲ್ಲಿ ರೈತರು ವಿವಿಧ ತಳಿಯ ನಿಂಬೆಯನ್ನು ಬೆಳೆಯುತ್ತಾರೆ. ನಿಂಬೆ ಗಿಡವನ್ನು ಒಮ್ಮೆ ನೆಟ್ಟರೆ 10 ವರ್ಷಗಳವರೆಗೆ ಇಳುವರಿ ಪಡೆಯಬಹುದು . ನಿಂಬೆ ಗಿಡವು ಸುಮಾರು 3 ವರ್ಷಗಳ ನಂತರ ಚೆನ್ನಾಗಿ ಬೆಳೆಯುತ್ತದೆ. ಇದರ ಸಸ್ಯಗಳು ವರ್ಷವಿಡೀ ಇಳುವರಿಯನ್ನು ನೀಡುತ್ತವೆ.

ಮುಖದ ಮೇಲೆ ಉಂಟಾಗುವ ಮೊಡವೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿಗೆ ಒಂದು ಹನಿ ಜೇನುತುಪ್ಪ ಬೆರೆಸಿ, ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆದರೆ, ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗಿ, ಚರ್ಮ ಕಾಂತಿಯುತವಾಗುತ್ತದೆ. ಡೆಡ್ ಸ್ಕಿನ್ ತೆಗೆಯಲು ನಿಂಬೆ ಹಣ್ಣು ಉತ್ತಮ ಔಷಧ.
ಪ್ರತಿ ದಿನ ರಾತ್ರಿ ಮಲಗುವ ಮೊದಲು ಒಂದು ಲೋಟ ನೀರಿಗೆ ಒಂದು ಚಮಚದಷ್ಟು ನಿಂಬೆ ರಸ ಸೇರಿಸಿ ಸೇವಿಸಿದರೆ ನಿಶ್ಶಕ್ತಿ ಕಡಿಮೆಯಾಗುತ್ತದೆ.
ನಿಂಬೆರಸದೊಂದಿಗೆ ಉಪ್ಪು ಮತ್ತು ಅಡುಗೆ ಸೋಡಾವನ್ನು ಸೇರಿಸಿ ಹಲ್ಲುಜ್ಜುವುದರಿಂದ ದಂತ ಸಮಸ್ಯೆ ನಿಯಂತ್ರಣವಾಗುತ್ತದೆ. ಈ ನೀರಿನಲ್ಲಿ ಬಾಯಿಮುಕ್ಕಳಿಸುವುದರಿಂದ ವಸಡುಗಳು ಶಕ್ತಿಯುತವಾಗುತ್ತವೆ.

ನಿಂಬೆ ಹಣ್ಣು, ಹಾಲಿನ ಕೆನೆ, ಜೇನುತುಪ್ಪವನ್ನು ಮಿಶ್ರಣ ಮಾಡಿ, ಅದಕ್ಕೆ ಸ್ವಲ್ಪ ಅರಿಶಿಣ ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಕಾಂತಿ ಹೆಚ್ಚಿಸುತ್ತದೆ.
ನಿಂಬೆರಸವನ್ನು ತಲೆಗೂದಲಿಗೆ ಹಚ್ಚಿ ತಲೆ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
ನಿಂಬೆ ಹಣ್ಣಿಗೆ ಹೋಲಿಸಿದರೆ ನಿಂಬೆಹಣ್ಣಿನ ಸಿಪ್ಪೆಯಲ್ಲಿ ಸುಮಾರು ಐದರಿಂದ ಹತ್ತು ಪಟ್ಟು ಹೆಚ್ಚು ವಿಟಮಿನ್ ಅಂಶಗಳು ಸಿಗುತ್ತವೆ. ನಿಂಬೆಹಣ್ಣು ಕೇವಲ ನಿಮ್ಮ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ ಬಹಳಷ್ಟು ಸೋಂಕುಗಳಿಂದ ನಿಮಗೆ ರಕ್ಷಣೆ ನೀಡುತ್ತದೆ.
ಲೆಮನ್ ಟೀ ಸೇವಿಸುವುದರಿಂದ ನೆಗಡಿ ಶಮನವಾಗುತ್ತದೆ.
ನಿಂಬೆ ಹಣ್ಣಿನಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಲಕ್ಷಣಗಳು ಸಿಗುತ್ತವೆ.

ವರ್ಷವಿಡೀ ನಿಂಬೆಹಣ್ಣಿಗಿದೆ ಡಿಮ್ಯಾಂಡ್​!
ಇದು ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿದೆ. ಇದು ಮಾರುಕಟ್ಟೆಯಲ್ಲಿ ಅದರ ಬೇಡಿಕೆ ವರ್ಷವಿಡೀ ಉಳಿಯಲು ಕಾರಣವಾಗಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ನಿಂಬೆ ಉತ್ಪಾದಿಸುವ ದೇಶವಾಗಿದೆ. ಇದು ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿದೆ. ಇದು ಮಾರುಕಟ್ಟೆಯಲ್ಲಿ ಅದರ ಬೇಡಿಕೆ ವರ್ಷವಿಡೀ ಉಳಿಯಲು ಕಾರಣವಾಗಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ನಿಂಬೆ ಉತ್ಪಾದಿಸುವ ದೇಶವಾಗಿದೆ.

ನಿಂಬೆಯನ್ನು ಅದರ ತಾಜಾ ಹಣ್ಣಿಗಾಗಿ ಬೆಳೆಸುವುದೇ ವಾಡಿಕೆ. ಇದರ ರಸದಿಂದ ಷರಬತ್ತು ತಯಾರಿಸುವುದಲ್ಲದೆ ಮಾರ್ಮಲೆಂಡ್, ಕಾರ್ಡಿಯಲ್ ಮುಂತಾದವನ್ನೂ ತಯಾರಿಸುವರು. ನಿಂಬೆಯರಸವನ್ನು ಬಟ್ಟಿಯಿಳಿಸಿ ತೈಲವನ್ನು ತೆಗೆವುದಿದೆ. ಸಿಪ್ಪೆಯಿಂದಲೂ ಎಣ್ಣೆಯನ್ನು ಪಡೆಯಬಹುದು. ಈ ಎಣ್ಣೆಯನ್ನು ಪಾನೀಯಗಳಿಗೆ ವಾಸನೆ ಕಟ್ಟಲೂ ಸಿಹಿತಿಂಡಿಗಳ ತಯಾರಿಕೆಯಲ್ಲೂ ಬಳಸುವುದಿದೆ.

ಈ ಗೋಲಾಕಾರದ ಹಳದಿ ಬಣ್ಣದ ಹಣ್ಣುಗಳನ್ನು ಪ್ರಮುಖವಾಗಿ ತಂಪುಪಾನೀಯವಾಗಿ ಬಳಸಲಾಗುವುದು ಹಾಗೂ ಅಡಿಗೆಗೂ ಕೂಡ ಹೇರಳವಾಗಿ ಬಳಸುತ್ತಾರೆ.

ಹಜಾರಿ ನಿಂಬೆಹಣ್ಣಿಗಿದೆ ಸಿಕ್ಕಾಪಟ್ಟೆ ಡಿಮ್ಯಾಂಡ್!
ಆದರೆ ರೈತರು ಕೃಷಿಯಲ್ಲಿ ಆವಿಷ್ಕಾರ ಮಾಡಿ ಉತ್ಪನ್ನಗಳಿಸಿದರೆ ಉತ್ತಮ ಉತ್ಪಾದನೆಯ ಜತೆಗೆ ಉತ್ತಮ ಲಾಭವನ್ನೂ  ಪಡೆಯಬಹುದು. ಹಜಾರಿ ನಿಂಬೆಯು ಉತ್ತಮ ಲಾಭದಾಯಕ ಬೆಳೆಯಾಗಿದೆ. ಹಜಾರಿ ನಿಂಬೆಹಣ್ಣು ಉತ್ತಮವಾಗಿ ಕಾಣುತ್ತದೆ. ಅದು ರೈತರಿಗೆ ಹೆಚ್ಚು ಲಾಭದಾಯಕವಾಗಿದೆ.

ಸಾಮಾನ್ಯವಾಗಿ, ರೈತರು ಕಾಗದದ ನಿಂಬೆಹಣ್ಣುಗಳನ್ನು ಬೆಳೆಸುತ್ತಾರೆ, ಇದು ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಆದರೆ ಅದರಿಂದ ರೈತನಿಗೆ ಒಳ್ಳೆಯ ಲಾಭ ಸಿಗುತ್ತಿಲ್ಲ. ಇನ್ನೊಂದೆಡೆ ಹಜಾರಿ ನಿಂಬೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.

ಸಾಮಾನ್ಯ ನಿಂಬೆಗಿಂತು ಇದರಲ್ಲಿ ಹುಳಿ ಹೆಚ್ಚು!
ಮೇಲಾಗಿ ಇತರ ನಿಂಬೆಹಣ್ಣಿಗೆ ಹೋಲಿಸಿದರೆ ಈ ನಿಂಬೆಯ ಮಾರಾಟದ ಲಾಭವೂ ಚೆನ್ನಾಗಿದೆ. ಈ ನಿಂಬೆಯ ಬಣ್ಣ ಕಿತ್ತಳೆ ಇರುತ್ತದೆ. ಈ ನಿಂಬೆಯ ವೈಶಿಷ್ಟ್ಯವೆಂದರೆ ಇತರ ನಿಂಬೆಹಣ್ಣಿಗೆ ಹೋಲಿಸಿದರೆ ಇದು ಹುಳಿಯಾಗಿದೆ.

ಹಾಗಾಗಿ ಹಜಾರಿ ನಿಂಬೆಹಣ್ಣಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಚಹಾ ಮಾಡುವುದರಿಂದ ಹಿಡಿದು ಉಪ್ಪಿನಕಾಯಿ ಮಾಡುವವರೆಗೆ ಜನರು ಈ ನಿಂಬೆಯನ್ನು ವಿವಿಧ ಉದ್ದೇಶಗಳಿಗಾಗಿ ಬಳಸುತ್ತಾರೆ. ಹಾಗಾಗಿ ಜನರು ಈ ನಿಂಬೆಯನ್ನು ಹೆಚ್ಚು ಇಷ್ಟಪಡುತ್ತಾರೆ.

ಹಜಾರಿ ನಿಂಬೆ ಹಣ್ಣು ಬೆಳೆಸುವುದು ಹೇಗೆ?
ಹಜಾರಿ ನಿಂಬೆಹಣ್ಣು ನಾಟಿ ಮಾಡುವ ಮೊದಲು ರೈತರು ಗದ್ದೆಯನ್ನು ಉಳುಮೆ ಮಾಡಿ. ಹೊಲವನ್ನು ಸಂಪೂರ್ಣವಾಗಿ ಬೇಸಾಯಕ್ಕೆ ಸಿದ್ಧಪಡಿಸಬೇಕು. ಅದರ ನಂತರ ರೈತರು ಹಜಾರಿ ನಿಂಬೆ ಗಿಡಗಳನ್ನು ನೆಡಲು ಬಯಸುವ ಪ್ರತಿಯೊಂದು ಸ್ಥಳದಲ್ಲಿ ಸುಮಾರು 1 ಅಡಿಯಷ್ಟು ಹೊಂಡವನ್ನು ಮಾಡಿ ಅದಕ್ಕೆ ನೀರು ಹಾಕಬೇಕು. ನಂತರ ಗಿಡ ನೆಡಬೇಕು. ಅದರ ನಂತರ ಗುಂಡಿಗೆ ಮಣ್ಣು ಸೇರಿಸಿ ಮತ್ತು ನೀರನ್ನು ಸೇರಿಸಲು ಸಸ್ಯದ ಸುತ್ತಲೂ ಸಣ್ಣ ರಂಧ್ರವನ್ನು ಮಾಡಿ.

ಸಸ್ಯ ನೆಟ್ಟ ಬಳಿಕ ಬೇಕಿಲ್ಲ ಹೆಚ್ಚಿನ ನೀರು!
ರೈತರು ಗಿಡ ನೆಡುವಾಗ ಕೆಲವು ಪ್ರಮುಖ ವಿಷಯಗಳತ್ತ ಗಮನ ಹರಿಸಬೇಕು. ನೆಟ್ಟ ನಂತರ ಕೆಲವು ದಿನಗಳವರೆಗೆ ಹೆಚ್ಚು ನೀರು ಹಾಕಬೇಡಿ ಮತ್ತು ಸಸ್ಯಕ್ಕೆ ಗಮನ ಕೊಡಿ. ಕೆಲವು ಸಸ್ಯಗಳು ಸರಿಯಾಗಿ ನೆಡದ ಕಾರಣ ಒಣಗಲು ಪ್ರಾರಂಭಿಸುತ್ತವೆ.  ಅಂತಹ ಸಸ್ಯಗಳಿಗೆ ಸಾಕಷ್ಟು ನೀರು ನೀಡಬೇಕು. ಈ ರೀತಿ ಹಜಾರಿ ನಿಂಬೆ ನಾಟಿ ಮಾಡುವ ಮೂಲಕ ಉತ್ತಮ ಆದಾಯ ಗಳಿಸಬಹುದು. ಆಧುನಿಕ ತಂತ್ರಜ್ಞಾನವನ್ನು ಬಳಸುವುದು ಅದಕ್ಕೆ ಉಪಯುಕ್ತವಾಗಿದೆ.

 


Share News

Leave a Reply

Your email address will not be published. Required fields are marked *