Breaking News

ಸಚಿವ ಡಿ.ಸುಧಾಕರ್ ವಿರುದ್ಧ  ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು!

Share News

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಸಂಪುಟದ ಸಚಿವ ಡಿ.ಸುಧಾಕರ್ (Minister D.Sudhakar) ವಿರುದ್ಧ  ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ( FIR) ದಾಖಲಾಗಿದೆ. ಸುಬ್ಬಮ್ಮ ಹಾಗೂ ಭಾಗ್ಯಾ ಎಂಬುವರು ಆಸ್ತಿ ಕಬಳಿಸಿದ್ದಾರೆ ಎಂದು ಆರೋಪಿಸಿ ಯಲಹಂಕ ಪೊಲೀಸ್ ಠಾಣೆಯಲ್ಲಿ (Yelhanka Police Station) ದೂರು ದಾಖಲಿಸಿದ್ದರು. ಇಬ್ಬರ ದೂರಿನ ಅನ್ವಯ ಸಚಿವ ಡಿ.ಸುಧಾಕರ್ ಸೇರಿದಂತೆ ಸವೆನ್​​ ಹಿಲ್ಸ್​​​ ಡೆವಲಪರ್ಸ್​ ಸಂಸ್ಥೆ ಸೇರಿ 40 ಜನರ ಮೇಲೆ ಎಫ್​ಐಆರ್​ ದಾಖಲಾಗಿದೆ. ಇತ್ತ ತಮ್ಮ ವಿರುದ್ಧ ಎಫ್​ಐಆರ್ ದಾಖಲಾಗುತ್ತಿದ್ದಂತೆ ಗೃಹ ಸಚಿವ ಜಿ.ಪರಮೇಶ್ವರ್ ಜೊತೆಯಲ್ಲಿ ಡಿ.ಸುಧಾಕರ್ ಚರ್ಚೆ ನಡೆಸಿದ್ದಾರೆ.

ಕರಾವಳಿ ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಈ ವಾರ ಮಳೆ ಸಾಧ್ಯತೆ ; ಹವಾಮಾನ ಇಲಾಖೆ ಮುನ್ಸೂಚನೆ!

ಸಚಿವ ಡಿ.ಸುಧಾಕರ್ ಸೆವೆನ್ ಹಿಲ್ಸ್ ಡೆವಲಪರ್ಸ್ ಪಾಲುದಾರರಾಗಿದ್ದಾರೆ. ಯಲಹಂಕ ಗ್ರಾಮದ ಸರ್ವೆ ನಂ. 108/1ರಲ್ಲಿ ನಮ್ಮ ಜಮೀನಿದೆ. ನಾಲ್ವರು ಅರೋಪಿಗಳು ಮೋಸದಿಂದ ಕ್ರಯಪತ್ರ ಮಾಡಿಸಿದ್ದಾರೆ. ಸಿಟಿ ಸಿವಿಲ್​ ಕೋರ್ಟ್​​​​, ಹೈಕೋರ್ಟ್​ನಲ್ಲಿ ಪ್ರಕರಣ ಇದೆ. ಆದ್ರೂ ಸುಧಾಕರ್​, ಶ್ರೀನಿವಾಸ್​, ಭಾಗ್ಯಮ್ಮ ಸಹಚರರು ಬಂದಿದ್ದರು. ನಮ್ಮ ಕಟ್ಟಡ, ಶೀಟಿನ ಶೆಡ್​​, ಕಾಂಪೌಂಡ್​​​ ಕೆಡವಿ ಬೆದರಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸ್ಥಳಕ್ಕೆ ಬಂದ ನಮ್ಮ ಮೇಲೆ ದೌರ್ಜನ್ಯ ಮಾಡಿ ಜಾತಿ ನಿಂದಿಸಿದ್ದಾರೆ. ತಕ್ಷಣ ಇವರ ಮೇಲೆ ಕ್ರಮ ಜರುಗಿಸಿ ನಮಗೆ ರಕ್ಷಣೆ ನೀಡಬೇಕು ಎಂದು ದೂರುದಾರರು ಮನವಿ ಮಾಡಿಕೊಂಡಿದ್ದಾರೆ.

ಸಚಿವ ಡಿ.ಸುಧಾಕರ್ ಧಮ್ಕಿ ಹಾಕಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೀನು ಮಾತನಾಡಬೇಡ, ಕೂಲಾಗಿ ಮಾತನಾಡು, ಯಲಹಂಕ ನನಗೇನು ಹೊಸದಾ? ಆಂಧ್ರದಲ್ಲಿ ಮಚ್ಚು ಹಿಡಿದು ಹೋರಾಡಿದ್ವಿ, ಮಚ್ಚು, ಕೊಡಲಿ ಇಟ್ಕೊಂಡು ಓಡಾಡಿದ್ದೀನೋ, ಯಲಹಂಕ ದೊಡ್ಡದೇನೋ ನನಗೆ, ಅಲ್ಲಿಗೆ ಯಾವನ್ ಬರ್ತಾನೋ ಬರಲಿ, ನನ್ಹತ್ರ ಗಾಂಚಾಲಿ, ಗಿಂಚಾಲಿ ನಡೆಯೋಲ್ಲ ಎಂದು ವಿಡಿಯೋದಲ್ಲಿ ಬೆದರಿಕೆ ಹಾಕಲಾಗಿದೆ.

ಬಂಟ್ವಾಳ ಬೈಪಾಸ್ ನಲ್ಲಿ ನಿರ್ಮಾಣಗೊಂಡ ರಿಕ್ಷಾ ತಂಗುದಾಣ ನಾಳೆ ಉದ್ಘಾಟನೆ!

ಇತ್ತ ಮಾಜಿ ಸಿಎಂ ಯಡಿಯೂರಪ್ಪ, ಎಫ್​ಐಆರ್ ದಾಖಲಾಗಿದೆ ಅಂದ್ರೆ ಗೃಹ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ತಮ್ಮ ವಿರುದ್ಧ ಎಫ್​ಐಆರ್ ದಾಖಲಾಗಿದ್ದರ ಬಗ್ಗೆ ಮಾತನಾಡಿರುವ ಸಚಿವರು, ನಾನು ಸಚಿವನಾಗಿದ್ದೇನೆ ಅಂತ ಷಡ್ಯಂತ್ರ ನಡೆದಿದೆ. ಹತ್ತದಿನೈದು ವರ್ಷಗಳ ಹಿಂದೆ ಈ ವ್ಯವಹಾರ ನಡೆದಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನನ್ನನ್ನ ತೇಜೊವಧೆ ಮಾಡ್ತಿದ್ದಾರೆ. ಈ ಹಿಂದೆ ಬಿಎಸ್‌ವೈ ಸರ್ಕಾರದಲ್ಲೂ ಕೇಸ್ ಹಾಕಿದ್ರು. ನಿನ್ನೆ ಗೃಹ ಸಚಿವರನ್ನ ಭೇಟಿಯಾಗಿ ಘಟನೆಯ ಬಗ್ಗೆ ವಿವರಿಸಿದ್ದೇನೆ. ನನಗೆ ಯಾವುದೇ ಭಯವಿಲ್ಲ, ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ ಎಂದು ಹೇಳಿದ್ದಾರೆ.

ತಾಸೆಯ ಪೆಟ್ಟಿಗೆ ಭರ್ಜರಿ ಹುಲಿ ಕುಣಿತ ಮಾಡಿದ ಶಿಕ್ಷಕರು ಹಾಗೂ ಮಕ್ಕಳು!


Share News

Leave a Reply

Your email address will not be published. Required fields are marked *