Breaking News

ಬಂಟ್ವಾಳ ಬೈಪಾಸ್ ನಲ್ಲಿ ನಿರ್ಮಾಣಗೊಂಡ ರಿಕ್ಷಾ ತಂಗುದಾಣ ನಾಳೆ ಉದ್ಘಾಟನೆ!

Share News

ಬಂಟ್ವಾಳ ಬೈಪಾಸಿನ ರಿಕ್ಷಾ ಚಾಲಕರ ಬಹುದಿನದ ರಿಕ್ಷಾ ತಂಗುದಾಣ ದ ಬೇಡಿಕೆಯನ್ನು ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ಅವಿರತ ಪ್ರಯತ್ನದಿಂದ ವಿಧಾನ ಪರಿಷತ್ ಸದಸ್ಯರಾದ ಯು .ಬಿ. ವೆಂಕಟೇಶ್ ರವರ 2019 -2020ನೇ ಸಾಲಿನ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಾಣಗೊಂಡಿದ್ದು ಇದರ ಉದ್ಘಾಟನೆ ಯು ಇದೇ ಬರುವ ತಾರೀಕು 13.09.2023 ನೇ ಬುಧವಾರ ದಂದು ಬೆಳಗ್ಗೆ ಸಮಯ 9 ಗಂಟೆಗೆ ಸರಿಯಾಗಿ ನಮ್ಮ ನೆಚ್ಚಿನ ನಾಯಕರಾದ ಬಿ.ರಮಾನಾಥ ರೈ ಯವರ ಸಮ್ಮುಖದಲ್ಲಿ ನಡೆಯಲಿರುವುದು.

ತಾಸೆಯ ಪೆಟ್ಟಿಗೆ ಭರ್ಜರಿ ಹುಲಿ ಕುಣಿತ ಮಾಡಿದ ಶಿಕ್ಷಕರು ಹಾಗೂ ಮಕ್ಕಳು!

ಕೆಂಪೇಗೌಡ ಏರ್‌ಪೋರ್ಟ್‌: ಟರ್ಮಿನಲ್-2ರಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭ

ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ನಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಸಜ್ಜಾಗಿದೆ. ಕೆಂಪೇಗೌಡ ಏರ್ಪೋಟ್ ಎಂಡಿ ಹರಿಮಾರನ್ ಅವರು ಇಂದು ಟರ್ಮಿನಲ್-2ನಿಂದ ವಿದೇಶಿ ವಿಮಾನಗಳ ಹಾರಾಟಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10.45ಕ್ಕೆ ಟರ್ಮಿನಲ್-2ಗೆ ಮೊದಲ ವಿದೇಶಿ ವಿಮಾನ ಬಂದಿಳಿಯಲಿದೆ. ಇನ್ನು ಹಳೆಯ ಟರ್ಮಿನಲ್-1 ದೇಶಿಯ ವಿಮಾನಗಳ‌ ಹಾರಾಟಕ್ಕೆ ಮೀಸಲಿಡಲಾಗಿದೆ.

ವಿವಿಧ ಜಾತಿಯ ಸಸ್ಯಗಳು ಮತ್ತು ಮರಗಳಿಂದ ಸುತ್ತುವರಿದಿರುವ ಈ ಟರ್ಮಿನಲ್ ಅನ್ನು ಟರ್ಮಿನಲ್ ಇನ್​ ದಿ ಗಾರ್ಡನ್ ಎಂದು ಕರೆಯಲಾಗುತ್ತಿದೆ. ಈ ಟರ್ಮಿನಲ್​​​ನಲ್ಲಿ 180 ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಜಾತಿಯ ಸಸ್ಯಗಳಿವೆ. 3,600 ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, ಬಿದಿರು, 620 ಸ್ಥಳೀಯ ಸಸ್ಯಗಳು, 7,700 ಕಸಿ ಮರಗಳು, 96 ಕಮಲ ಮತ್ತು ಇನ್ನೂ ಹೆಚ್ಚಿನ ಸಸ್ಯಗಳಿವೆ.

10 ಸಾವಿರ ಚದರ‌ ಮೀಟರ್ ಹಸಿರು ಗೋಡೆ, ಕೃತಕ ವಾಟರ್ ಫಾಲ್ಸ್​ ಜೊತೆ ನೂರಾರು ವರ್ಷಗಳ ಹಳೆಯ ಮರವನ್ನು ಟರ್ಮಿನಲ್-2 ಹೊಂದಿದೆ. ಇನ್ನು 2 ಲಕ್ಷ 55 ಸಾವಿರದ 661 ಚದರ್ ಮೀಟರ್​ನ ನೂತನ ಟರ್ಮಿನಲ್-2ನಲ್ಲಿ ಪ್ರತ್ಯೇಕ ವಿಮಾನ ಆಗಮ‌ನ ಹಾಗೂ ನಿರ್ಗಮನದ 2 ಹಂತಗಳನ್ನು ಹೊಂದಿದ್ದು, 5 ಜಿ ನೆಟ್ವರ್ಕ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಚೆಕ್ ಇನ್, ಬ್ಯಾಗೇಜ್ ಡ್ರಾಪ್ ಕೌಂಟರ್ ವ್ಯವಸ್ಥೆ ಇದೆ.

ಕಳೆದ ವರ್ಷ ನವೆಂಬರ್​​ನಲ್ಲಿ ಪ್ರಧಾನಿ ಮೋದಿ 5 ಸಾವಿರ ಕೋಟಿ ‌ವೆಚ್ಚದಲ್ಲಿ‌ ನಿರ್ಮಾಣವಾಗಿರುವ ಗಾರ್ಡನ್ ಟರ್ಮಿನಲ್ 2 ಉದ್ಘಾಟಿಸಿದ್ದರು. ಆಗಸ್ಟ್‌ 31 ರಿಂದಲೇ ಟರ್ಮಿನಲ್‌-2ರಿಂದ ಅಂತರರಾಷ್ಟ್ರೀಯ ವಿಮಾನಯಾನ ಅಧಿಕೃತವಾಗಿ ಪ್ರಾರಂಭವಾಗಬೇಕಿತ್ತು. ಆದರೆ, ತಾಂತ್ರಿಕ ಅಡೆತಡೆ ಹಾಗೂ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ವಿಮಾನ ನಿಲ್ದಾಣದ ನಿರ್ವಹಣಾ ಮಂಡಳಿ ಮುಂದೂಡಿತ್ತು.

ಮಂಗಳೂರು: ಅರಣ್ಯ ರಕ್ಷಣೆಯಿಂದ ದೇಶದ ರಕ್ಷಣೆ ; ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ – ಅಗರ್ವಾಲ್

ಅರಣ್ಯ ರಕ್ಷಣೆ ಯ ಮೂಲಕ ನಮ್ಮ ರಕ್ಷಣೆ ದೇಶದ ರಕ್ಷಣೆ ಮಾಡುತ್ತಿರುವ ಅರಣ್ಯ ರಕ್ಷಕರಿಗೆ ಹೆಚ್ಚಿನ ಗೌರವ ದೊರೆಯ ಬೇಕಾಗಿದೆ ಅರಣ್ಯ ಸಂಪತ್ತಿನ ಸಂರಕ್ಷಣೆ ನಮ್ಮ ಜವಾಬ್ದಾರಿ ಯಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್ ತಿಳಿಸಿದ್ದಾರೆ.

ಅವರು ಇಂದು ನಗರದ ಪಡೀಲ್ ನಲ್ಲಿರುವ ಅರಣ್ಯ ಭವನದಲ್ಲಿ ಅರಣ್ಯ ಹುತಾತ್ಮಸ್ಮಾರಕ ಕ್ಕೆ ಗೌರವ ಸಲ್ಲಿಸಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಯನ್ನು ದ್ದೇಶಿಸಿ ಮಾತನಾಡುತ್ತಿದ್ದರು. ಖಾಕಿ ಸಮವಸ್ತ್ರಧಾರಣೆಯಿಂದ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಮೂಲಕ ಹಲವು ಅಧಿಕಾರಿಗಳು ನಮಗೆ ಮಾದರಿಯಾಗಿದ್ದಾರೆ. ದಂತ ಚೋರ ವೀರಪ್ಪನ್ ಕಾರ್ಯಾಚರಣೆ ಯಲ್ಲಿ ಬಲಿಯಾದ ಅಧಿಕಾರಿಗಳು ಇದ ಕ್ಕೊಂದು ಉದಾಹರಣೆಯಾಗಿದೆ ಎಂದು ಕಮೀಷನರ್ ಅಗರ್ವಾಲ್ ತಿಳಿಸಿದ್ದಾರೆ.

ಪರಿಸರಕ್ಕಾಗಿ ಪ್ರಾಣ ತ್ಯಾಗ ಮಾಡಿದ ನನ್ನ ಊರಿನ ಜನರ ನೆನಪಿನೊಂದಿಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ:

ಸುಮಾರು 300 ವರ್ಷಗಳ ಹಿಂದೆ ಜೋದ್ ಪುರದ ರಾಜ ಅಭಯ ಸಿಂಗ್ ಕೆಲವು ಮರಗಳನ್ನು ಕಡಿ ಯಲು ಆಜ್ಞೆ ಮಾಡುತ್ತಾನೆ.ಅಲ್ಲಿನ ಪರಿಸರ ಪ್ರೇಮಿಗಳಾದ ಬಿಷ್ಣೋಯಿಗಳು ಅದನ್ನು ವಿರೋಧಿ ಸುತ್ತಾರೆ.ಬಳಿಕ ರಾಜನ ಸೈನಿಕರು ಮರಕಡಿಯಲು ಬಂದಾಗ ಮರವನ್ನು ಅಪ್ಪಿಕೊಂಡು ತಮ್ಮ ಪ್ರಾಣವನ್ನು ಬಲಿಕೊಡುವ ಪ್ರಸಂಗ ನಡೆದಿದೆ. ನಾನೂ ಅದೇ ಊರಿಗೆ ಸೇರಿದವನು.ದೇಶದ ಪರಿಸರ ಅರಣ್ಯ ಸಂಪತ್ತು ರಕ್ಷಣೆ ಮಾಡುವ ಹೊಣೆಗಾರಿಕೆ ಎಲ್ಲಾ ಪ್ರಜೆಗಳಿಗೂ ಸೇರಿದೆ ಎಂದು ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯ್ಂತ್,ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಿ.ಕರಿಕ್ಕಲ್ಲನ್,ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲ ಕರಿಕ್ಕಲ್ಲನ್, ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ಮಣಿಕಂಠನ್, ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಸರ್ವೇಶ್,ಉಪ ಅರಣ್ಯ ಸಂರಕ್ಷಣಾ ಧಿಕಾರಿ ಅಂತೋನಿ ಎಸ್ ಮರಿಯಪ್ಪ, ಕ್ಲಿಫರ್ಡ್ ಲೋಬೊ, ಉಪ ಅರಣ್ಯ ಸಂರಕ್ಷಣಾ ಧಿಕಾರಿ ಕರಾವಳಿ ನಿಯಂತ್ರಣ ವಲಯ ಡಾ.ದಿನೇಶ್, ಎಸಿಎಫ್ ಶ್ರೀ ಧರ್, ಮೊದಲಾದವರು ವೇದಿಕೆ ಯಲ್ಲಿ ಉಪ ಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅರಣ್ಯ ರಕ್ಷಣಾ ಪಡೆಯ ಸಿಬ್ಬಂದಿಗಳು ಅಧಿಕಾರಿಗಳಿಂದ ಹುತಾತ್ಮ ಸ್ಮಾರಕಕ್ಕೆ ಗೌರವ ಅರ್ಪಣೆ ನಡೆಯಿತು. ಸಿಬ್ಬಂದಿ ಗಳಿಂದ ಗಾಳಿಯಲ್ಲಿ ಗುಂಡು ಸಿಡಿಸಿ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.


Share News

Leave a Reply

Your email address will not be published. Required fields are marked *