Breaking News

ಬೇವಿನ ಎಲೆಗಳಲ್ಲಿರುವ ಔಷಧೀಯ ಗುಣಗಳು ; ನಿಮಗೆ ತಿಳಿದಿರದ ವಿಸ್ಮಯಕಾರಿ ಪ್ರಯೋಜನಗಳು ಇಲ್ಲಿದೆ ನೋಡಿ

Share News

ಬೇವಿನ ಸೊಪ್ಪಿನ ಔಷಧೀಯ ಗುಣಗಳು ನಮಗೆ ಬಹಳ ಹಿಂದಿನಿಂದ ಚಿರಪರಿಚಿತ. ಏಕೆಂದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚರ್ಮದ ವ್ಯಾಧಿಗಳನ್ನು ನೈಸರ್ಗಿಕವಾಗಿ ಗುಣ ಪಡಿಸುವ ಏಕೈಕ ಸಸ್ಯ ಪದಾರ್ಥ ಎಂದರೆ, ಮೊದಲಿಗೆ ನಮಗೆ ನೆನಪಿಗೆ ಬರುವುದು ಬೇವಿನ ಸೊಪ್ಪುಹಿಂದಿನಿಂದಲೂ ಬೇವನ್ನು ಔಷಧೀಯ ಮೂಲಿಕೆ ಎಂದು ಪರಿಗಣಿಸಲಾಗಿದೆ. ಅದರ ಔಷಧೀಯ ಗುಣಗಳಿಗಾಗಿ ಬಳಸಲ್ಪಟ್ಟಿದೆ ಮತ್ತು ಅದ್ಭುತವಾದ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಬೇವಿನ ಎಲೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಬಲಪಡಿಸಲು ಸಹ ಸಹಾಯಕವಾಗಿವೆ. ಬೇವಿನ ಸಾರವಾಗಲಿ, ಬೇವಿನ ಎಣ್ಣೆಯಾಗಲಿ ಅಥವಾ ಬೇವಿನ ಎಲೆಗಳಾಗಲಿ, ಎಲ್ಲಾ ರೂಪಗಳಲ್ಲಿ ಬೇವು ಅತ್ಯುತ್ತಮ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಇದು ಗಾಯಗಳನ್ನು ಮತ್ತು ಕೆಲವು ರೋಗಗಳನ್ನು ಗುಣಪಡಿಸಲು ಸಹ ಬಳಸಲಾಗುತ್ತದೆ.

ಭಾರತದ ಆಯುರ್ವೇದ ಪದ್ಧತಿಯಲ್ಲಿ ಮಾತ್ರವಲ್ಲದೆ ಪ್ರಪಂಚದ ನಾನಾ ಭಾಗಗಳಲ್ಲಿ ಬೇವಿನ ಮರಕ್ಕೆ ಮನುಷ್ಯರ ಹಲವಾರು ರೋಗ ಲಕ್ಷಣಗಳನ್ನು ಗುಣಪಡಿಸುವ ವಿಚಾರದಲ್ಲಿ ನೂರಾರು ವರ್ಷಗಳ ಇತಿಹಾಸವಿದೆ ಎಂದು ಹೇಳಬಹುದು.

ಬೇವಿನ ಎಲೆಯಲ್ಲಿ ಅದ್ಭುತ ಔಷಧೀಯ ಗುಣಗಳಿವೆ. ಇದರಲ್ಲಿ ಸುಮಾರು 130 ಜೈವಿಕ ಸಕ್ರಿಯ ವಸ್ತುಗಳಿದ್ದು ಅದು ನಮ್ಮ ದೇಹದ ಚರ್ಮ, ಕೂದಲು, ರಕ್ತ ಮೊದಲಾದ ಭಾಗಗಳಿಗೆ ಅತ್ಯುತ್ತಮವಾಗಿದೆ. ಇಂತಹ ಅತ್ಯಮೂಲ್ಯ ಗಿಡಮೂಲಿಕೆಯಾದ ಬೇವಿನ ಎಲೆ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಉಪಕಾರಿಯಾಗಿದೆ. ಮಳೆಗಾಲದಲ್ಲಿ ತುರಿಕೆ, ಸೋಂಕು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಹೆಚ್ಚು. ಈ ಸಮಯದಲ್ಲಿ ಚರ್ಮ ಮತ್ತು ಕೂದಲಿಗೆ ಹೆಚ್ಚಿನ ರಕ್ಷಣೆ ಬೇಕಾಗುತ್ತದೆ. ಇದಕ್ಕೆಲ್ಲಾ ಬೇವಿನ ಎಲೆ ಉಪಕಾರಿಯಾಗಿದೆ.ಬೇವಿನಲ್ಲಿ ಜೈವಿಕವಾಗಿ ಸಕ್ರಿಯವಾಗಿರುವ ವಸ್ತು, ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶುದ್ಧೀಕರಿಸುವ ಗುಣಗಳಿವೆ, ಅದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಮೊಡವೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಬೇವಿನ ಎಲೆಗಳಲ್ಲಿರುವ ಔಷಧೀಯ ಗುಣಗಳು ; ನಿಮಗೆ ತಿಳಿದಿರದ ವಿಸ್ಮಯಕಾರಿ ಪ್ರಯೋಜನಗಳು ಇಲ್ಲಿದೆ ನೋಡಿ

ಮೊಡವೆಗಳನ್ನು ಗುಣಪಡಿಸುತ್ತದೆ:

ಬೇವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ತುರಿಕೆ ಮತ್ತು ಕಿರಿಕಿರಿಯುಂಟುಮಾಡುವ ದದ್ದುಗಳು ಮತ್ತು ಮೊಡವೆ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ.

​ಬೇವಿನ ಸೊಪ್ಪನ್ನು ಅಡುಗೆ ಮಾಡಲು ಬಳಸುತ್ತಾರೆ:

ಬೇವಿನ ಸೊಪ್ಪಿನಿಂದ ಕೆಲವು ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಸೇವಿಸುವುದು ಕೇಳುವವರಿಗೆ ಸ್ವಲ್ಪ ಆಶ್ಚರ್ಯ ಎನಿಸಬಹುದು. ಆದರೆ ಬೇವಿನ ಸೊಪ್ಪಿನ ಖಾದ್ಯಗಳು ಇತ್ತೀಚಿನದೇನಲ್ಲ. ಅದೂ ಅಲ್ಲದೆ ಬೇವಿನ ಸೊಪ್ಪು ನಮ್ಮ ದೇಹದಲ್ಲಿ ಅದರಲ್ಲೂ ವಿಶೇಷವಾಗಿ ಕರುಳಿನ ಭಾಗದಲ್ಲಿ ಕಂಡು ಬರುವ ಕೆಲವೊಂದು ಜಾತಿಯ ಹುಳುಗಳು ಮತ್ತು ಪರಾವಲಂಬಿ ಜೀವಿಗಳನ್ನು ನಾಶ ಪಡಿಸುತ್ತದೆ.ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ತಾಜಾ ಬೇವಿನ ಎಲೆಗಳಿಂದ ತಮ್ಮ ಆರೋಗ್ಯ ವೃದ್ಧಿಗಾಗಿ ಕೆಲವು ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಸೇವಿಸುತ್ತಿದ್ದರು. ಬೇವಿನ ಸೊಪ್ಪಿನಲ್ಲಿ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ತೆಗೆದು ಮೆಟಬಾಲಿಕ್ ಪ್ರಕ್ರಿಯೆಯನ್ನು ಹೆಚ್ಚು ಮಾಡುವಂತಹ ಗುಣ ಲಕ್ಷಣಗಳಿವೆ.

ಜೀರ್ಣಾಂಗಕ್ಕೆ ಮತ್ತು ಕರುಳಿನ ಚಲನೆಗೆ ಸಹಕಾರಿ:

ಪ್ರತಿ ದಿನ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಿಗಿದು ತಿನ್ನುವುದರಿಂದ ನಮ್ಮ ಹೊಟ್ಟೆಗೆ ಸಂಬಂಧ ಪಟ್ಟಂತಹ ಸಾಕಷ್ಟು ಆರೋಗ್ಯ ಸಮಸ್ಯೆಗಳು ಅಂದರೆ ಅಜೀರ್ಣತೆ, ಮಲಬದ್ಧತೆ, ಆಮ್ಲೀಯತೆ ದೂರವಾಗಿ ಕರುಳಿನ ಭಾಗ ಆರೋಗ್ಯದಿಂದ ಕೂಡಿ ಆಹಾರದ ಜೀರ್ಣ ಪ್ರಕ್ರಿಯೆ ಉತ್ತಮವಾಗಿ ಆಗುತ್ತದೆ.

ಮುಖ್ಯವಾಗಿ ನಮ್ಮ ದೇಹದಲ್ಲಿ ಆಹಾರ ಜೀರ್ಣವಾಗುವ ಸಮಯದಲ್ಲಿ ಉತ್ಪತ್ತಿಯಾಗುವ ಹಲವಾರು ವಿಷಕಾರಿ ಅಂಶಗಳು ಹೊಟ್ಟೆಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಬೇವಿನ ಸೇವನೆಯಿಂದ ಇಂತಹ ಹಲವಾರು ಸಮಸ್ಯೆಗಳು ಮುಕ್ತಿ ಕಾಣುತ್ತವೆ.

​ಬೇವಿನ ಚಹಾ:

ಮೇಲಿನ ಬೇವಿನ ಎಲೆಯ ಖಾದ್ಯಗಳನ್ನು ತಯಾರು ಮಾಡಲು ನಿಮಗೆ ಸಾಧ್ಯ ಆಗದಿದ್ದರೆ, ಇದೊಂದು ಸುಲಭವಾದ ಪಾನೀಯವನ್ನು ನೀವು ಸೇವಿಸಬಹುದು. ಬೇವಿನ ಎಲೆಗಳ ಚಹ ತಯಾರು ಮಾಡುವ ಮತ್ತು ಸೇವಿಸುವ ಅಭ್ಯಾಸದಿಂದ ನಿಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಬಲಗೊಳ್ಳುತ್ತದೆ.ಬೇವಿನ ಚಹ ತಯಾರು ಮಾಡಲು ಮೊದಲಿಗೆ ಒಲೆಯ ಮೇಲೆ 2 ಕಪ್ ನೀರು ಕುದಿಯಲು ಇಟ್ಟು ಅದಕ್ಕೆ 4 ರಿಂದ 5 ಬೇವಿನ ಎಲೆಗಳನ್ನು ಹಾಕಿ ಸ್ವಲ್ಪ ಶುಂಠಿಯನ್ನು ಸೇರಿಸಿ ಚೆನ್ನಾಗಿ ಹತ್ತು ನಿಮಿಷಗಳ ಕಾಲ ಕುದಿಸಿ.ಕುದಿಯುತ್ತಿರುವ ನೀರಿನಲ್ಲಿ ಬೇವಿನ ಹಾಗೂ ಶುಂಠಿಯ ರಸಗಳನ್ನು ಚೆನ್ನಾಗಿ ಹೀರಿಕೊಂಡು ಚಹಾದ ರುಚಿ ಘಮ ಗುಡುತ್ತದೆ. ನೀರು ಹಸಿರು ಬಣ್ಣಕ್ಕೆ ತಿರುಗಿದ ನಂತರ ಅರ್ಧ ಟೀ ಚಮಚಗ್ರೀನ್ ಟೀ ಪುಡಿ ಹಾಕಿ, ಸ್ಟೌ ಆರಿಸಿ ಇದನ್ನು ಸೋಸಿ, ಸ್ವಲ್ಪ ಬಿಸಿ ಆರಿದ ನಂತರ ಅದಕ್ಕೆ ಜೇನು ತುಪ್ಪವನ್ನು ಮಿಶ್ರಣ ಮಾಡಿ. ಇಂತಹ ಗಿಡಮೂಲಿಕೆ ಚಹಾವನ್ನು ಕುಡಿಯುವುದರಿಂದ ಆರೋಗ್ಯಕರ ದೇಹ ಮತ್ತು ಒಳ್ಳೆಯ ರೋಗ ನಿರೋಧಕ ಶಕ್ತಿ ನಿಮ್ಮದಾಗುತ್ತದೆ.

ಬೇವಿನ ಎಲೆಗಳಲ್ಲಿರುವ ಔಷಧೀಯ ಗುಣಗಳು ; ನಿಮಗೆ ತಿಳಿದಿರದ ವಿಸ್ಮಯಕಾರಿ ಪ್ರಯೋಜನಗಳು ಇಲ್ಲಿದೆ ನೋಡಿ

ಮೂತ್ರಪಿಂಡದ ಆರೋಗ್ಯವನ್ನು ಕಾಪಾಡುತ್ತದೆ:

ಬೇವಿನ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಇದು ಯಕೃತ್ತು ಮತ್ತು ಮೂತ್ರಪಿಂಡದ ಆರೋಗ್ಯವನ್ನು ಉತ್ತೇಜಿಸುತ್ತದೆ.

ಹೊಳಪಿನ ಚರ್ಮ:

ಕೇವಲ ಕೆಲವು ಮಂದಿಗೆ ಮಾತ್ರ ಆಯುರ್ವೇದ ಪದ್ಧತಿಯಲ್ಲಿ ಚರ್ಮದ ಸಮಸ್ಯೆಗಳನ್ನು ಬಗೆಹರಿಸಲು ಬೇವಿನ ಎಣ್ಣೆ ಬದಲು ಬೇವಿನ ಎಲೆಗಳನ್ನು ಬಳಸುತ್ತಾರೆ ಎಂಬ ಸತ್ಯ ತಿಳಿದಿದೆ.

ಇದಕ್ಕೆ ಕಾರಣ ಎಂದರೆ ತಾಜಾ ಬೇವಿನ ಎಲೆಗಳಲ್ಲಿ ಸಾಕಷ್ಟು ಆಂಟಿ – ಬ್ಯಾಕ್ಟೀರಿಯಲ್ ಮತ್ತು ಆಂಟಿ – ಇಂಪ್ಲಾಮೇಟರಿ ಗುಣ ಲಕ್ಷಣಗಳು ತುಂಬಿದ್ದು, ಈ ಅಂಶಗಳು ಬೇವಿನ ಎಲೆಗಳನ್ನು ಸಂಸ್ಕರಿಸಿ ತಯಾರು ಮಾಡಿದ ಬೇವಿನ ಎಣ್ಣೆ, ಬೇವಿನ ಸೋಪು ಮತ್ತು ಬೇವಿನ ಕ್ರೀಮ್ ಇತ್ಯಾದಿಗಳಲ್ಲಿ ಲಭ್ಯವಿರುವುದಿಲ್ಲ.

ಹಾಗಾಗಿ ಚರ್ಮದ ಹಲವಾರು ಸಮಸ್ಯೆಗಳಿಗೆ ನೇರವಾಗಿ ಬೇವಿನ ಎಲೆಗಳನ್ನು ಪೇಸ್ಟ್ ಮಾಡಿ ಹಚ್ಚಿ ಬಗೆಹರಿಸಿಕೊಳ್ಳಬಹುದು. ನಿತ್ಯ ನಿಯಮಿತವಾಗಿ ಬೇವಿನ ಎಲೆಗಳನ್ನು ಸೇವಿಸುವುದರಿಂದ ಚರ್ಮದ ಮೇಲಿನ ಕಲೆಗಳು, ಗುಳ್ಳೆಗಳು, ಮಚ್ಚೆಗಳು ಮಾಯವಾಗುತ್ತದೆ ಎಂದು ಹೇಳುತ್ತಾರೆ.

ಯಾವುದೇ ಬಗೆಯ ಸೋಂಕುಗಳಿಂದ ಚರ್ಮದ ಮೇಲೆ ಉಂಟಾಗಿರುವ ಹಲವಾರು ಸಮಸ್ಯೆಗಳು ದೂರವಾಗುತ್ತವೆ. ಒಣ ಚರ್ಮಕ್ಕೆ ಅಥವಾ ಬಿರುಕು ಬಿಟ್ಟ ಚರ್ಮಕ್ಕೆ ಬೇವು ತುಂಬಾ ಸಹಕಾರಿ.

ಬಾಯಿಯ ಆರೋಗ್ಯವನ್ನು ಹೆಚ್ಚಿಸಬಹುದು :

ಬೇವಿನ ತೊಗಟೆಯನ್ನು ಜಗಿಯುವುದು ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಇದರ ನಂಜುನಿರೋಧಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದಂತಕ್ಷಯ, ಜಿಂಗೈವಿಟಿಸ್ ಮತ್ತು ಹೆಚ್ಚಿನವುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಚರ್ಮಕ್ಕೆ ಮುಖ್ಯ: ಆಯುರ್ವೇದದಲ್ಲಿ ಬೇವಿನ ಎಲೆಗೆ ತನ್ನದೇ ಆದ ಪ್ರಾಮುಖ್ಯತೆಯಿದೆ. ಹೊಳೆಯುವ ಚರ್ಮದ ಕಾಂತಿಗೆ ಬೇವಿನ ಎಲೆ ಮುಖ್ಯ. ಮಳೆಗಾಲದಲ್ಲಿ, ದೇಹದಲ್ಲಿ ಎಣ್ಣೆಯ ಅಂಶ ಉತ್ಪಾದನೆಗೆ ಕಾರಣವಾಗುವ ಮತ್ತು ಬೆವರು ನಿಯಂತ್ರಿಸುವ ಸೆಬಾಸಿಯಸ್ ಗ್ರಂಥಿಗಳು ಹೆಚ್ಚಿದ ತೇವಾಂಶದ ಕಾರಣದಿಂದಾಗಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆ.

ಇದರಿಂದ ಚರ್ಮದಲ್ಲಿ ಹೆಚ್ಚು ಎಣ್ಣೆಯ ಅಂಶ ಉಂಟಾಗುತ್ತದೆ. ಬೇವಿನ ಎಲೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮೊಡವೆ, ಬ್ಲಾಕ್ ಅಂಡ್ ವೈಟ್ ಹೆಡ್ಸ್ ಗಳನ್ನು ಕಡಿಮೆ ಮಾಡುತ್ತದೆ. ಚರ್ಮದಲ್ಲಿರುವ ದದ್ದುಗಳು, ತುರಿಕೆ, ಸೋಂಕು, ಸುಟ್ಟ ಗಾಯಗಳನ್ನು ಗುಣಪಡಿಸುತ್ತದೆ.

ರಕ್ತ ಶುದ್ಧೀಕರಣದಲ್ಲಿ ಪ್ರಮುಖ ಪಾತ್ರ:

ಬೇವಿನ ಎಲೆಗಳಿಗೆ ಕೇವಲ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹಾಕುವ ಗುಣ ಲಕ್ಷಣ ಇರುವುದು ಮಾತ್ರವಲ್ಲದೆ, ನಮ್ಮ ರಕ್ತವನ್ನು ಶುಚಿ ಮಾಡುವ ಲಕ್ಷಣಗಳು ಇವೆ. ದೇಹದಲ್ಲಿ ರಕ್ತ ಶುದ್ಧೀಕರಣ ನಡೆದರೆ ಹಲವಾರು ರಕ್ತ ಸಂಬಂಧಿತ ಕಾಯಿಲೆಗಳು ಮತ್ತು ಸೋಂಕುಗಳು ಬೇವಿನ ಎಲೆಗಳಿಂದ ನೈಸರ್ಗಿಕವಾಗಿ ನಿವಾರಣೆಯಾಗುತ್ತವೆ

ಮಧುಮೇಹಿಗಳಿಗೆ ಬೇವು ರಾಮಬಾಣ

ಮಧುಮೇಹಿಗಳಿಗೆ ವೈದ್ಯರು ಕೊಡುವ ಔಷಧಿಗಳು ಒಂದು ಕಡೆಯಾದರೆ ಆಯುರ್ವೇದ ಪ್ರಕಾರದಲ್ಲಿ ಬೇವು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ. ಮುಖ್ಯವಾಗಿ ದೇಹದ ರಕ್ತ ಸಂಚಾರವನ್ನು ಉತ್ತಮಗೊಳಿಸಿ ರಕ್ತ ನಾಳಗಳನ್ನು ಹಿಗ್ಗಿಸುವಲ್ಲಿ ಬೇವು ಸಹಕಾರಿ.

ಇದರಿಂದ ಹೆಚ್ಚಾಗಿ ಅನ್ಯ ಔಷಧಿಗಳ ಮೇಲೆ ಅವಲಂಬಿತವಾಗುವುದು ತಪ್ಪುತ್ತದೆ. ವೈಜ್ಞಾನಿಕವಾಗಿ ಸಹ ಬೇವಿನ ಎಲೆಗಳು ದೇಹಕ್ಕೆ ಇನ್ಸುಲಿನ್ ಅಗತ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ.ರಕ್ತದಲ್ಲಿನ ಗ್ಲುಕೋಸ್ ಅಂಶಗಳನ್ನು ಕಡಿಮೆ ಮಾಡಿ ಸಕ್ಕರೆ ಪ್ರಮಾಣವನ್ನು ನೈಸರ್ಗಿಕವಾಗಿ ತಗ್ಗಿಸುವಂತಹ ಗುಣ ಲಕ್ಷಣ ಬೇವಿನ ಎಲೆಗಳಿಗೆ ಇದೆ.

ಕೂದಲಿಗೆ ಒಳ್ಳೆಯದು:

ಮಾನ್ಸೂನ್ ಋತುವಿನಲ್ಲಿ ಕೂದಲಿನ ತೊಂದರೆಗಳು ಆಗಾಗ್ಗೆ ಆಗುತ್ತವೆ. ಬೇವು ಉರಿಯೂತವನ್ನು ನಿಗ್ರಹಿಸಲು ಸಹಾಯ ಮಾಡುವ ಸಕ್ರಿಯ ಘಟಕಾಂಶವಾದ ನಿಂಬ್ಡಿನ್ ಅನ್ನು ಹೊಂದಿರುತ್ತದೆ, ಇದು ಫೋಲಿಕ್ಯುಲೈಟಿಸ್, ತುರಿಕೆ ಮತ್ತು ತಲೆಹೊಟ್ಟು ಮುಂತಾದ ಕೂದಲಿನ ಸೋಂಕುಗಳಿಗೆ ಚಿಕಿತ್ಸೆ ನೀಡಲು ಉಪಯುಕ್ತವಾಗಿದೆ.ತಲೆಹೊಟ್ಟು ಮತ್ತು ಶುಷ್ಕ ನೆತ್ತಿಗೆ ಸಹ ಬೇವಿನ ಸೊಪ್ಪನ್ನು ಬಳಸಬಹುದು. ವಾತಾವರಣದಲ್ಲಿ ಹವಾಮಾನ ಬದಲಾದರೆ ನಿಮ್ಮ ನೆತ್ತಿಯ ಪಿಎಚ್ ಏರುಪೇರಾಗಿ ನಿಮ್ಮ ತಲೆಕೂದಲು ಜಿಡ್ಡುಜಿಡ್ಡಾಗಿ ಹೊಟ್ಟು ಉತ್ಪತ್ತಿಯಾಗುತ್ತದೆ. ಆದರೆ ಬೇವಿನ ಎಲೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶಗಳಿಂದ ಒಣ ನೆತ್ತಿ ಮತ್ತು ತಲೆಹೊಟ್ಟನ್ನು ನಿವಾರಿಸಬಹುದು. ತಲೆಕೂದಲು ಉದುರುವುದನ್ನು ಕೂಡ ನಿಯಮಿತವಾಗಿ ಹಚ್ಚುತ್ತಾ ಬಂದರೆ ತಡೆಯಬಹುದು.

ತೂಕ ನಿರ್ವಹಣೆಯಲ್ಲಿ ಬೇವಿನ ಪಾತ್ರ

ಇತ್ತೀಚಿಗಂತೂ ಜನರು ತಮ್ಮ ಜೀವನ ಶೈಲಿಯನ್ನು ಹೇಗೆ ಬೇಕೋ ಹಾಗೆ ಬದಲಾಯಿಸಿಕೊಂಡು ತಮ್ಮ ದೇಹದ ತೂಕವನ್ನು ಹೆಚ್ಚು ಮಾಡಿಕೊಂಡಿದ್ದಾರೆ. ಯಾರಿಗೆ ನೋಡಿದರೂ ವಿಪರೀತ ಬೊಜ್ಜು ಮತ್ತು ಕೊಬ್ಬಿನ ಅಂಶ ಹೆಚ್ಚಾಗಿರುತ್ತದೆ.ಆದರೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಸೇವಿಸುವುದರಿಂದ ಕೇವಲ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಮಾತ್ರವಲ್ಲದೆ ಸೊಂಟದ ಭಾಗದ ಕೊಬ್ಬನ್ನು ಇಳಿಸಿಕೊಳ್ಳಬಹುದು. ಅಂದರೆ ನಮ್ಮ ಸೊಂಟದ ಭಾಗದಲ್ಲಿ ಹೆಚ್ಚಾಗಿ ಶೇಖರಣೆಯಾಗಿರುವ ಕೊಬ್ಬಿನ ಅಂಶವನ್ನು ಕರಗಿಸಿ ನಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡುವಂತಹ ಶಕ್ತಿ ಬೇವಿನ ಎಲೆಗಳಿಗೆ ಇದೆ.

ಫಂಗಲ್ ಸೋಂಕುಗಳ ವಿರುದ್ಧ ಸಹಾಯ ಮಾಡುತ್ತದೆ:

ನಿಂಬ್ಡಿನ್ ಮತ್ತು ನಿಂಬೋಲೈಡ್ ಅಂಶಗಳು ಬೇವಿನಲ್ಲಿ ಹೇರಳವಾಗಿದ್ದು, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿವೆ ಎಂದು ಕಂಡುಬಂದಿದೆ.

ಹಲ್ಲುಗಳು ಮತ್ತು ವಸಡಿನ ಆರೋಗ್ಯ

ಈಗಂತೂ ಮಾರುಕಟ್ಟೆಗಳಲ್ಲಿ ಬೇವಿನ ಎಲೆಗಳು ಮತ್ತು ಬೇವಿನ ಚಕ್ಕೆ ಬಳಕೆ ಮಾಡಿ ಸಾಕಷ್ಟು ಟೂತ್ ಪೇಸ್ಟ್ ಗಳನ್ನು ತಯಾರು ಮಾಡಿದ ಉದಾಹರಣೆಗಳಿವೆ. ಬೇವು ಹಲ್ಲುಗಳ ಮತ್ತು ವಸಡಿನ ಆರೋಗ್ಯ ಕಾಪಾಡುವಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಬಾಯಿಯ ದುರ್ವಾಸನೆ, ವಸಡಿನಿಂದ ರಕ್ತ ಸೋರಿಕೆ ಮತ್ತು ಇನ್ನಿತರ ಸೋಂಕುಗಳನ್ನು ನಿವಾರಣೆ ಮಾಡುತ್ತದೆ.

ಒಂದು ವೇಳೆ ನಿಮಗೆ ಬೇವಿನ ಮರ ಹತ್ತಿರವಿದ್ದು, ತಾಜಾ ಬೇವಿನ ಎಲೆಗಳು ಲಭ್ಯವಿದ್ದರೆ, ಅವುಗಳನ್ನು ಒಣಗಿಸಿ ಪುಡಿ ತಯಾರಿಸಿಕೊಂಡು ಬಹಳಷ್ಟು ದಿನಗಳ ಕಾಲ ಬಳಕೆ ಮಾಡಬಹುದು. ನಿಮ್ಮ ಮನೆ ಹತ್ತಿರ ಆಯುರ್ವೇದ ಅಂಗಡಿ ಲಭ್ಯವಿದ್ದರೆ ಬೇವಿನ ಹಲವಾರು ಉತ್ಪನ್ನಗಳು ನಿಮಗೆ ಅಲ್ಲಿ ಸಿಗುತ್ತವೆ.

ರಕ್ತ ಶುದ್ದೀಕರಣ: ಮನುಷ್ಯನ ದೇಹ ಆರೋಗ್ಯದಿಂದ ಇರಬೇಕಾದರೆ ಜೀರ್ಣಕ್ರಿಯೆ ಉತ್ತಮವಾಗಿರಬೇಕು. ಯಾವುದೇ ರೋಗ ಬರುವ ಮೊದಲು ಅದನ್ನು ತಡೆಗಟ್ಟುವುದು ಮುಖ್ಯವಾಗುತ್ತದೆ. ಉತ್ತಮ ಆರೋಗ್ಯ ಜೀರ್ಣಕ್ರಿಯೆ ಉಂಟಾಗಲು ಬೇವಿನ ಸೊಪ್ಪು ತಿಂದರೆ ಒಳ್ಳೆಯದು. ಮಳೆಗಾಲದಲ್ಲಿ ಆರೋಗ್ಯಕರ ಆಹಾರ ತಿನ್ನುವುದು ಮುಖ್ಯವಾಗುತ್ತದೆ.
ಸರಿಯಾದ ಆಹಾರ ತಿನ್ನದಿದ್ದರೆ ಜೀರ್ಣಕ್ರಿಯೆ ಸರಿಯಾಗಿ ಇರುವುದಿಲ್ಲ. ಗಿಡಮೂಲಿಕೆಯನ್ನು ಸೇವಿಸಿ ಜೀರ್ಣಕ್ರಿಯೆ ಉತ್ತಮವಾಗುವಂತೆ ನೋಡಿಕೊಳ್ಳಬಹುದು. ಇಡೀ ಜೀರ್ಣಾಂಗ ವ್ಯವಸ್ಥೆಯನ್ನು ಶಮನಗೊಳಿಸುವುದರಿಂದ ಬೇವಿನ ಎಲೆ ಉರಿಯೂತದ ಗುಣಲಕ್ಷಣಗಳಿಗೆ ಕರುಳಿನ ಆರೋಗ್ಯಕ್ಕೆ ಉಪಯುಕ್ತವಾಗುತ್ತವೆ.


Share News

Leave a Reply

Your email address will not be published. Required fields are marked *