Breaking News

ಲೋಕಸಭಾ ಚುನಾವಣೆ 2024: ಕಾಂಗ್ರೆಸ್ ಮುಂಚೂಣಿ ಅಭ್ಯರ್ಥಿಯಾಗಿ ಹೊರಹೊಮ್ಮಿದ ಹರೀಶ್ ಕುಮಾರ್. ನಳಿನ್ ಕುಮಾರ್ v/s ಹರೀಶ್ ಕುಮಾರ್ ಸ್ಪರ್ಧೆಗೆ ಅಖಾಡ ಸಿದ್ಧ?

Share News

ಮಂಗಳೂರು: ಸಚಿವ ಮಧು ಬಂಗಾರಪ್ಪ ನಡೆಸಿದ ಅಭಿಪ್ರಾಯ ಸಂಗ್ರಹಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೆಸರು ಮುಂಚೂಣಿಗೆ ಬಂದಿರುವುದು ಹೈಕಮಾಂಡ್ ಅವರನ್ನು ಅಭ್ಯರ್ಥಿಯಾಗಿಸುವ ಗಂಭೀರ ಯೋಚನೆಯಲ್ಲಿ ಇದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ಮಂಗಳೂರು ಲೋಕಸಭೆಗೆ ಅಭಿಪ್ರಾಯ ಸಂಗ್ರಹ: ಮಧು ಬಂಗಾರಪ್ಪ ಮುಂದೆ ಹರೀಶ್ ಕುಮಾರ್, ರಮಾನಾಥ ರೈ ಹೆಸರಿಗೆ ಪ್ರಬಲ ಒಲವು!

ಮಾಜಿ ಸಚಿವ ರಮನಾಥ ರೈ ಅವರ ಹೆಸರು ಸಹ ಬಹುತೇಕ ಕಾರ್ಯಕರ್ತರು ಪ್ರಸ್ತಾಪಿಸಿದ್ದಾರೆ. ಆದರೆ ಉಡುಪಿಯಲ್ಲಿ ಬಂಟ ಸಮುದಾಯದ ಜಯಪ್ರಕಾಶ್ ಹೆಗ್ಡೆ ರವರಿಗೆ ಉಡುಪಿ ಚಿಕ್ಕಮಗಳೂರು ಟಿಕೆಟ್ ಪಕ್ಕ ಎನ್ನಲಾಗುತ್ತಿದೆ.ಈ ಬೆಳವಣಿಗೆಯ ನಡುವೆ ಹರೀಶ್ ಕುಮಾರ್ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವುದು ಖಚಿತ ಎನ್ನಲಾಗುತ್ತದೆ.

ಇದನ್ನೂ ಓದಿ: ಕಾರು ಮತ್ತು ಟಾಟಾ ಏಸ್ ನಡುವೆ ಭೀಕರ ಅಪಘಾತ ; ಓರ್ವ ಸಾವು!

ಹೈಕಮಾಂಡ್ ಮೂಲದ ಉನ್ನತ ನಾಯಕರ ಪ್ರಕಾರ ಹರೀಶ್ ಕುಮಾರ್ ಹೆಸರು ಹೈಕಮಾಂಡ್ ಗಂಭೀರ ಪರಿಶೀಲನೆಯಲ್ಲಿ ಇದೆ ಎಂದು ತಿಳಿದು ಬಂದಿದೆ.

ಸಮನ್ವಯದಿಂದ ಎಲ್ಲರನ್ನು ಜೊತೆಯಾಗಿ ತೆಗೆದುಕೊಂಡು ಹೋಗುವ ಮನೋಭಾವದಿಂದ ಜಿಲ್ಲೆಯ ಬಹುತೇಕ ಕಾರ್ಯಕರ್ತರು ಹರೀಶ್ ಕುಮಾರ್ ಅವರ ಹೆಸರನ್ನು ಸೂಚಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಲೋಕಸಭಾ ಚುನಾವಣೆಗೆ ಇನ್ನು ಕೇವಲ ಐದು ತಿಂಗಳ ಬಾಕಿ ಉಳಿದಿದ್ದು ಬಿಜೆಪಿಯಿಂದ ನಳಿನ್ ಕುಮಾರ್ ವಿರುದ್ಧ ಹರೀಶ್ ಕುಮಾರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

WATCH VIDEO ON YOUTUBE: ನಾಗನ ಆರಾಧನೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶ ನಾಗಬನಗಳದ್ದು: ತಮ್ಮಣ್ಣ ಶೆಟ್ಟಿ


Share News

Leave a Reply

Your email address will not be published. Required fields are marked *