Breaking News

ಸಿನಿಮಾಗಳಲ್ಲಿ ಮಾದಕ ವಸ್ತುಗಳನ್ನು ಪ್ರಚೋದಿಸುವ ದೃಶ್ಯಗಳಿದ್ದರೆ ನೋಟಿಸ್; ಪೊಲೀಸ್ ಇಲಾಖೆ

Share News

ಡ್ರಗ್ಸ್ (Drugs) ಪಿಡುಗನ್ನು ನಿರ್ನಾಮ ಮಾಡುವ ಪಣ ತೊಟ್ಟಿರುವ ಪೊಲೀಸ್ ಇಲಾಖೆಯು ಇದೀಗ ಸಿನಿಮಾಗಳ ಮೇಲೆ ಕಣ್ಣಿಟ್ಟಿದೆ. ಸಿನಿಮಾಗಳಲ್ಲಿ (Cinema) ಮಾದಕ ವಸ್ತುಗಳನ್ನು ಪ್ರಚೋದಿಸುವ ದೃಶ್ಯಗಳು ಇದ್ದರೆ, ಅಂತಹ ಸಿನಿಮಾಗಳಿಗೆ ನೋಟಿಸ್ (Notice) ನೀಡಲಾಗುವುದು ಎಂದು ಹೈದರಾಬಾದ್ ಪೊಲೀಸ್ ತಿಳಿಸಿದ್ದಾರೆ.

ಆನ್​​ಲೈನ್​ ಲೋನ್​ ವಂಚನೆ ಜಾಲಕ್ಕೆ ಸಿಲುಕಿ ಇಡೀ ಕುಟುಂಬವೇ ನಾಶ: ಸತ್ತ ನಂತರವೂ ಬೆತ್ತಲೆ ಫೋಟೋ ಹರಿಬಿಟ್ಟ ದುಷ್ಟರು!

ಹೈದರಾಬಾದ್ ಪೊಲೀಸರು ಇತ್ತೀಚೆಗಷ್ಟೇ ಮಾದಾಪುರದಲ್ಲಿ ನಡೆಸಿದ ಕಾರ್ಯಚರಣೆಯಲ್ಲಿ ವಿದೇಶಿ ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಿನಿಮಾ ನಿರ್ಮಾಪಕರು ಬಂಧನಕ್ಕೊಳಗಾಗಿದ್ದರು. ಅಲ್ಲದೇ, ಸಿನಿಮಾ ರಂಗದಲ್ಲಿ ಡ್ರಗ್ಸ್ ವಹಿವಾಟು ಜೋರಾಗಿದೆ ಎನ್ನುವ ಆರೋಪ ಕೂಡ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ. ಆನಂದ್, ‘ಸಿನಿಮಾಗಳಲ್ಲಿ ಡ್ರಗ್ಸ್ ಬಳಕೆ ಬಗ್ಗೆ ತೋರಿಸಿದರೆ ನೋಟಿಸ್ ನೀಡಿ, ಕಠಿಣ ಕ್ರಮಕ್ಕೆ ಮುಂದಾಗಲಾಗುವುದು’ ಎಂದಿದ್ದಾರೆ.

ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಜಯ್ ದೇವರಕೊಂಡ ಅವರ ಸಹೋದರನ ‘ಬೇಬಿ’ (Baby) ಚಿತ್ರ ತಂಡಕ್ಕೆ ನೋಟಿಸ್ ಕೂಡ ನೀಡಲಾಗಿದೆಯಂತೆ. ಈ ಸಿನಿಮಾದಲ್ಲಿ ಡ್ರಗ್ಸ್ ಬಳಕೆ ಕುರಿತಾಗಿ ದೃಶ್ಯವಿದೆ. ಅದರಿಂದ ಜನರ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ನೋಟಿಸ್ ನೀಡಲಾಗಿದೆ. ಸಿನಿಮಾ ಪರಿಶೀಲನೆಯ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈ ಪ್ರೊಫೈಲ್‌ ಹನಿಟ್ರ್ಯಾಪ್‌ ಕೇಸ್ ನ ಕಿಂಗ್ ಪಿನ್ ಆರತಿ ದಯಾಳ್‌ ಬೆಂಗಳೂರಿನಲ್ಲಿ ಅರೆಸ್ಟ್‌!

ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸಿನಿಮಾದಲ್ಲಿ ತೋರಿಸಿದ ರೀತಿಯಲ್ಲೇ ಡ್ರಗ್ಸ್ ಬಳಕೆ ಆಗುತ್ತಿದ್ದು ಎನ್ನುವ ಮಾಹಿತಿಯನ್ನೂ ಅಧಿಕಾರಿಗಳು ಹೊರ ಹಾಕಿದ್ದಾರೆ. ತಮಗೆ ನೋಟಿಸ್ ಬಂದಿರುವ ಕುರಿತು ಬೇಬಿ ಸಿನಿಮಾದ ನಿರ್ಮಾಪಕ ಸಾಯಿ ರಾಜೇಶ್ ಕೂಡ ಖಚಿತ ಪಡಿಸಿದ್ದಾರೆ. ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಉತ್ತರಿಸುವುದಾಗಿಯೂ ತಿಳಿಸಿದ್ದಾರೆ.

ಸಿದ್ದಕಟ್ಟೆಯ ಪುಚ್ಛಮಗುರೂರಿನಲ್ಲಿ ಸೆರೆಯಾಗಿದೆ ಚಿರತೆ!


Share News

Leave a Reply

Your email address will not be published. Required fields are marked *