Breaking News

ಹೈ ಪ್ರೊಫೈಲ್‌ ಹನಿಟ್ರ್ಯಾಪ್‌ ಕೇಸ್ ನ ಕಿಂಗ್ ಪಿನ್ ಆರತಿ ದಯಾಳ್‌ ಬೆಂಗಳೂರಿನಲ್ಲಿ ಅರೆಸ್ಟ್‌!

Share News

ಭಾರತದ ಅತ್ಯಂತ ಹೈ ಪ್ರೊಫೈಲ್ ಹನಿಟ್ರಾಪ್ ಕೇಸ್ ನ ಮಾಸ್ಟರ್ ಮೈಡ್ ಬೆಂಗಳೂರಿನಲ್ಲಿ ಬಂಧನವಾಗಿದ್ದಾಳೆ. 2019 ರಲ್ಲಿ ನಡೆದಿದ್ದ ಹನಿಟ್ರಾಪ್ ಪ್ರಕರಣ ಆರೋಪಿ ಆಗಿದ್ದಳು. ಮೂರ್ನಾಲ್ಕು ವರ್ಷಗಳಾದರೂ ಈ ಆರೋಪಿಯನ್ನು ಬಂಧಿಸಲು ಸಾಧ್ಯವಾಗದ ಪೊಲೀಸರಿಗೆ ತರಾಟೆ ತೆಗೆದುಕೊಂಡಿದ್ದ ಹೈಕೋರ್ಟ್‌ ಈ ಅರೋಪಿ ಜೀವತ ಇದ್ದಾಳಾ ಎಂದು ಪ್ರಶ್ನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ಕಾರ್ಯಾಚರಣೆ ಮಾಡಿದ ಪೊಲೀಸರು ಆರೋಪಿ ಆರತಿ ದಯಾಳ್‌ನನ್ನು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಹೈ ಪ್ರೊಫೈಲ್ ಹನಿಟ್ರಾಪ್ ಕೇಸ್ ನ ಮಾಸ್ಟರ್ ಮೈಂಡ್ ಆಗಿದ್ದ ಆರತಿ ದಯಾಳ್‌ ಅವರನ್ನು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಲಾಗಿದೆ. 2019 ರಲ್ಲಿ ಜೈಲು ಸೇರಿ 2020 ರಲ್ಲಿ ಹೊರ ಬಂದವಳು ಯಾರಿಗೂ ಸಿಕ್ಕಿರಲಿಲ್ಲ. ಸೋನು, ಸಮಂತಾ, ಆರತಿ ಅಗರ್ವಾಲ್ ಹೀಗೆ ಬೇರೆ ಬೇರೆ ಹೆಸರು ಬಳಸಿಕೊಂಡು ತಲೆಮರಿಸಿಕೊಂಡಿದ್ದಳು. ಸದ್ಯ ವಿಜಯವಾಡದಲ್ಲಿ ಅರೋಪಿತೆಯನ್ನು ವಶಕ್ಕೆ ಪಡೆದುಕೊಂಡು ಬಂದು, ಬೆಂಗಳೂರಿನಲ್ಲಿ ಪೊಲೀಸರು ಅರಸ್ಟ್ ಮಾಡಿದ್ದಾರೆ. ಈ ಹಿಂದೆ ಹೈ ಪ್ರೊಫೈಲ್ ಹನಿಟ್ರಾಪ್ ಮಾಡುತ್ತಿದ್ದವಳು, ಪೊಲೀಸರಿಗೆ ಸಿಕ್ಕಿಕೊಂಡ ನಂತರ ಕಳ್ಳತನದ ದಾರಿ ಹಿಡಿದಿದ್ದಳು.

ಹನಿಟ್ರ್ಯಾಪ್‌ ಬಿಟ್ಟಿದ್ದ ಆರತಿ ದಯಾಳ್‌ ಕರ್ನಾಟಕದ ಬೆಂಗಳೂರು, ತಮಿಳುನಾಡಿನ ಚೆನ್ನೈ ಸೇರಿ ವಿವಿಧ ಕಡೆ ಕಳ್ಳತನ ಮಾಡಿದ್ದಾಳೆ. ಈಕೆ ಸುಮಾರು 15 ದಿನಗಳ ಕಾಲ ಪ್ಲಾನ್ ಮಾಡಿ ಕಳ್ಳತನ ಮಾಡ್ತಿದ್ದಳು. ಇನ್ನು ತಾನು ಕಳ್ಳತನ ಮಾಡಿದ ಬಗ್ಗೆ ಯಾವುದೇ ಸುಳಿವು ಸಿಗದಂತೆ ಯಾಮಾರಿಸುತ್ತಿದ್ದಳು. ಇನ್ನು ಈಕೆ ಬೇಕಂತಲೇ ವಿವಿಧ ನಗರಗಳಿಗೆ ಹೋಗಿ ಸ್ಪಾಗಳಲ್ಲಿ ಕೆಲಸಕ್ಕೆ ಸೇರುತಿದ್ದಳು. 10 ದಿನ ಕೆಲಸ ಮಾಡಿ ಅಲ್ಲಿಯೇ ಕೆಲಸ ಮಾಡುವ ಯುವತಿಯರ ರೂಮ್, ಪಿಜಿಯಲ್ಲಿ ಉಳಿದುಕೊಳ್ಳುತ್ತಿದ್ದಳು. ಬಳಿಕ ಪಿಜಿ ಹಾಗೂ ರೂಮ್ ನಲ್ಲಿ ಇದ್ದ ಹಣ ಬಂಗಾರ ಕದ್ದು ಎಸ್ಕೇಪ್ ಆಗುತ್ತಿದ್ದಳು.

ಸದ್ಯ ಮಹದೇವಪುರ ಪೊಲೀಸರಿಂದ ಆರತಿ ದಯಾಳ್ ಅರೆಸ್ಟ್‌ ಮಾಡಿದ್ದಾಳೆ. ಮಧ್ಯಪ್ರದೇಶದ ಇಂದೋರ್ ನಲ್ಲಿ ಈಕೆ ವಿರುದ್ದ ಕೇಸ್ ಇದೆ. ಹೀಗಾಗಿ ಅಲ್ಲಿಯ ಪೊಲೀಸರಿಗೆ ಮಾಹಿತಿ ನೀಡಿರುವ ಮಹದೇವಪುರ ಪೊಲೀಸರು ಬಂಧಿಸಿ ಆಕೆಯನ್ನು ಮಧ್ಯಪ್ರದೇಶ ಪೊಲೀಸರಿಗೆ ಒಪ್ಪಿಸಲಿದ್ದಾರೆ ಎಂದು ತಿಳಿದುಬಂದಿದೆ.


Share News

Leave a Reply

Your email address will not be published. Required fields are marked *