Breaking News

ಕಮಲ್ ಹಾಸನ್ ಮಾಜಿ ಪ್ರಿಯತಮೆಗೆ 25 ಕೋಟಿ ರೂಪಾಯಿ ವಂಚನೆ ; ಏನಿದು ಪ್ರಕರಣ!

Share News

ಕಮಲ್ ಹಾಸನ್ (Kamal Haasan) ಮಾಜಿ ಪಾರ್ಟ್ನರ್ (ಅಧಿಕೃತವಾಗಿ ಪತ್ನಿ ಅಲ್ಲ) ಗೌತಮಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಬಿಲ್ಡರ್​ನಿಂದ ಮೋಸ ಹೋಗಿದ್ದಾರೆ. ಈ ಕಾರಣದಿಂದ ಅವರಿಗೆ 25 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಈ ಬಗ್ಗೆ ಗೌತಮಿ ಅವರು ಚೆನ್ನೈ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಕೇಸ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಮಲ್ ಹಾಸನ್ ಹಾಗೂ ಗೌತಮಿ (Gautami) ಒಟ್ಟಾಗಿ ಬಾಳ್ವೆ ನಡೆಸುತ್ತಿದ್ದರು. 2016ರಲ್ಲಿ ಬೇರೆ ಆದರು. ಗೌತಮಿ ನಟಿ ಕೂಡ ಹೌದು.

ಗೌತಮಿ ಅವರು ಚೆನ್ನೈನ ಶ್ರೀಪೆರಂಬದೂರ್​ನಲ್ಲಿ 46 ಎಕರೆ ಭೂಮಿ ಖರೀದಿ ಮಾಡಿದ್ದರು. ಸಿನಿಮಾ ಇಂಡಸ್ಟ್ರಿಯಲ್ಲಿ ಗಳಿಕೆ ಮಾಡಿದ ಅಷ್ಟೂ ಹಣವನ್ನು ಅವರು ಜಮೀನು ಖರೀದಿ ಮಾಡಲು ಬಳಕೆ ಮಾಡಿಕೊಂಡಿದ್ದರು. ಜಾಗದ ಈಗಿನ ಮಾರುಕಟ್ಟೆ ಬೆಲೆ 25 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗಿದೆ. ವೈದ್ಯಕಿಯ ಖರ್ಚು ಹಾಗೂ ಮಗಳ ಶಿಕ್ಷಣಕ್ಕಾಗಿ ಹಣ ಬೇಕಿರುವುದರಿಂದ ಗೌತಮಿ ಅವರು ಈ ಭೂಮಿ ಮಾರಲು ಮುಂದಾಗಿದ್ದರು. ಇದನ್ನು ತಿಳಿದ ಬಿಲ್ಡರ್ ಒಬ್ಬರು ಅವರನ್ನು ಸಂಪರ್ಕಿಸಿದ್ದಾರೆ ಮತ್ತು ಸುಲಭದಲ್ಲಿ ಭೂಮಿ ಮಾರಾಟ ಮಾಡಿಕೊಡುವುದಾಗಿ ಹೇಳಿದ್ದಾರೆ.

ವ್ಯವಹಾರ ಸುಲಭವಾಗಲಿ ಎನ್ನುವ ಕಾರಣಕ್ಕೆ 45 ಎಕರೆ ಜಾಗದ ಒಡೆತನವನ್ನು ಬಿಲ್ಡರ್​ಗೆ ನೀಡಿದ್ದರು. ಆದರೆ, ಬಿಲ್ಡರ್ ಇದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಂಪೂರ್ಣ ಜಾಗದ ಹಕ್ಕನ್ನು ಅವರೇ ಪಡೆದುಕೊಂಡಿದ್ದಾರೆ. ಸದ್ಯ ಈ ಪ್ರಕರಣ ಸಿಸಿಬಿಗೆ ವರ್ಗವಾಣೆ ಆಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಗೌತಮಿ ಅವರಿಗೆ 55 ವರ್ಷ. ಅವರು 1987ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗು ಸಿನಿಮಾದಲ್ಲಿ ನಟಿಸಿ ಅವರು ಬಣ್ಣದ ಲೋಕಕ್ಕೆ ಬಂದರು. ‘ಏಳು ಸುತ್ತಿನ ಕೋಟೆ’, ‘ಸಾಹಸ ವೀರ’ ಮೊದಲಾದ ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2017ರ ಬಳಿಕ ಗೌತಮಿ ಅವರು ಬಣ್ಣ ಹಚ್ಚಿರಲಿಲ್ಲ. ಈಗ ಮತ್ತೆ ಅವರು ಕಂಬ್ಯಾಕ್ ಮಾಡಿದ್ದಾರೆ. 2004ರಿಂದ 2016ರವರೆಗೆ ಇಬ್ಬರೂ ಒಟ್ಟಾಗಿ ಇದ್ದರು. ಅಂದಹಾಗೆ ಇವರ ಮದುವೆ ನೋಂದಣಿ ಆಗಿಲ್ಲ. ಇದನ್ನು ಲಿವ್​ಇನ್ ರಿಲೇಶನ್​ಶಿಪ್ ರೀತಿಯಲ್ಲಿ ಪರಿಗಣಿಸಲಾಗಿದೆ.

ಕೇರಳದಲ್ಲಿ ಮಾರಣಾಂತಿಕ ನಿಪಾ ವೈರಸ್‌: ಕರ್ನಾಟಕದಲ್ಲೂ ಕಟ್ಟೆಚ್ಚರ

ಬೆಂಗಳೂರು(ಸೆ.14): ಕೇರಳದಲ್ಲಿ ಮಾರಣಾಂತಿಕ ನಿಪಾ ವೈರಸ್‌ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕೇರಳ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಹಾಗೂ ಜಿಲ್ಲಾ, ತಾಲೂಕು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ನಿಪಾ ವೈರಸ್‌ ಚಿಕಿತ್ಸೆಗೆ 10 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಕೇರಳದ ಕಲ್ಲಿಕೋಟೆಯಲ್ಲಿ ಇಬ್ಬರಿಗೆ ನಿಪಾ ವೈರಸ್‌ ಸೋಂಕು ದೃಢಪಟ್ಟಿದೆ. ಏಳು ಕಂಟೈನ್‌ಮೆಂಟ್‌ (ಸೋಂಕಿತ ವಲಯ) ಸೃಷ್ಟಿಸಿ ಆ ವ್ಯಾಪ್ತಿಯ ಶಾಲೆ, ಕಾಲೇಜುಗಳನ್ನು ಮುಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುನ್ನೆಚ್ಚರಿಕೆ ವಹಿಸಲು ಬುಧವಾರ ಸಭೆ ನಡೆಸಿದ ಸಚಿವರು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಕ್ಷಿಣ ಕನ್ನಡದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳು ನಿಫಾ ಶಂಕಿತ ಪ್ರಕರಣಗಳನ್ನು ದಾಖಲಿಸಿಕೊಂಡು ಕೂಡಲೇ ಜಿಲ್ಲಾ ಕಣ್ಗಾವಲು ಕಚೇರಿ, ಘಟಕಕ್ಕೆ ತಿಳಿಸಬೇಕು. ಜತೆಗೆ ಆಮ್ಲಜನಕ, ಅಗತ್ಯ ಔಷಧ ಸಿದ್ಧಪಡಿಸಿಕೊಳ್ಳಬೇಕು. ಜ್ವರದ ಕಣ್ಗಾವಲು ಘಟಕಗಳನ್ನು ಸ್ಥಾಪಿಸಬೇಕು. ನಿಪಾ ರೋಗ ಲಕ್ಷಣಗಳಿಗೆ ಕ್ಷೇತ್ರ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ಹೇಳಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್‌ ಗುಂಡೂರಾವ್‌, ಸೋಂಕಿನ ಬಗ್ಗೆ ಸಮೀಕ್ಷೆ ನಡೆಸಿ ಪೂರ್ವ ಸಿದ್ಧತಾ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ.ರಾಜ್ಯದಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ. ಪ್ರಾಣಿಗಳು, ಬಾವಲಿಗಳು ಹಾಗೂ ಮನುಷ್ಯರಿಂದ ಸೋಂಕು ಹರಡುತ್ತದೆ. ಹೀಗಾಗಿ ಕಟ್ಟೆಚ್ಚರ ವಹಿಸಲು ಸೂಚಿಸಿದ್ದೇನೆ ಎಂದರು.

ಮಾರ್ಗಸೂಚಿ ಪ್ರಕಟಿಸುತ್ತೀರಾ? ಅಥವಾ ಕೇರಳದವರನ್ನು ತಪಾಸಣೆ ಮಾಡುತ್ತೀರಾ? ಎಂಬ ಪ್ರಶ್ನೆಗೆ, ಸದ್ಯಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲ್ಲ. ಸ್ಥಳೀಯವಾಗಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ ಎಂದರು.


Share News

Leave a Reply

Your email address will not be published. Required fields are marked *