Breaking News

ಆನ್​​ಲೈನ್​ ಲೋನ್​ ವಂಚನೆ ಜಾಲಕ್ಕೆ ಸಿಲುಕಿ ಇಡೀ ಕುಟುಂಬವೇ ನಾಶ: ಸತ್ತ ನಂತರವೂ ಬೆತ್ತಲೆ ಫೋಟೋ ಹರಿಬಿಟ್ಟ ದುಷ್ಟರು!

Share News

ತಿರುವನಂತಪುರ: ಇತ್ತೀಚಿನ ದಿನಗಳಲ್ಲಿ ಸಾಲದ ಆ್ಯಪ್​ಗಳು​ ಮತ್ತು ರಮ್ಮಿಯಂತಹ ಆನ್​ಲೈನ್​ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್​ಲೈನ್​ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಮನೆ, ಜಮೀನು ಮಾರಿಕೊಂಡು ಬೀದಿಗೆ ಬಿದ್ದಿದ್ದಾರೆ. ಅಲ್ಲದೆ, ಸಾಲದ ಕಿರುಕುಳ ತಾಳಲಾರದೇ ಬಲಿಯಾಗುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕದಿದ್ದರೆ, ಇನ್ನುಷ್ಟು ಅಮಾಯಕ ಜೀವಗಳು ಬಲಿಯಾಗುತ್ತವೆ.
ಇತ್ತೀಚೆಗಷ್ಟೇ ಕೇರಳದ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದರು. ಈ ಘಟನೆ ಎರ್ನಾಕುಲಂನ ಕದಮಕ್ಕುಡಿಯಲ್ಲಿ ನಡೆದಿತ್ತು. ಮೃತರನ್ನು ಕದಮಕ್ಕುಡಿ ನಿವಾಸಿ ನಿಜೋ (39), ಆತನ ಪತ್ನಿ ಶಿಲ್ಪ (29) ಮತ್ತು ಮಕ್ಕಳಾದ ಆಬಲ್​ (7) ಮತ್ತು ಆ್ಯರೂನ್​ (5) ಎಂದು ಗುರುತಿಸಲಾಗಿದೆ. ಆರ್ಥಿಕ ಸಮಸ್ಯೆಯೇ ಸಾವಿಗೆ ಕಾರಣ ಎಂದು ಹೇಳಲಾಗಿತ್ತು. ಇದೀಗ ಇಡೀ ಕುಟುಂಬದ ದುರಂತ ಸಾವಿನ ಹಿಂದೆ ಲೋನ್​ ಗ್ಯಾಂಗ್​ನ ಕರಾಳ ಛಾಯೆ ಇರುವುದು ಬಯಲಾಗಿದೆ. ಆನ್​​ಲೈನ್​ ಲೋನ್​ ವಂಚನೆ ಜಾಲಕ್ಕೆ ಸಿಲುಕಿ ಇಡೀ ಕುಟುಂಬ ನಾಶವಾಗಿರುವುದು ಪೊಲೀಸ್​ ತನಿಖೆಯಿಂದ ಬಯಲಾಗಿದೆ.

ಪಡೀಲ್ ಅಂಡರ್ ಪಾಸ್ ನಲ್ಲಿ ಅಪಘಾತ ; ಓರ್ವ ಮೃತ್ಯು – ಇಬ್ಬರು ಗಂಭೀರ!

ಇಡೀ ಕುಟುಂಬವೇ ನಾಶವಾಗಿ ಮೂರು ದಿನಗಳು ಕಳೆದರೂ ಲೋನ್​ ಗ್ಯಾಂಗ್​ ಮಾತ್ರ ಹಣದ ಮೇಲಿನ ತಮ್ಮ ದಾಹವನ್ನು ನಿಲ್ಲಿಸಿಲ್ಲ. ಕರುಣೆ ಎಂಬ ಪದವೇ ಈ ಕಟುಕರ ಜೀವನದಲ್ಲಿ ಇಲ್ಲ ಎಂಬಂತೆ ಕಾಣುತ್ತದೆ. ಏಕೆಂದರೆ, ಸಾವಿನ ಬಳಿಕವೂ ಮೃತ ಶಿಲ್ಪಾಳ ತಿರುಚಿದ ಅಥವಾ ಮಾರ್ಪ್​ ಮಾಡಿದ ಬೆತ್ತಲೆ ಫೋಟೋವನ್ನು ಆಶಾ ಕಾರ್ಯಕರ್ತೆ ಶೀಬಾ ಜೀವನ್​ ಎಂಬುವರಿಗೆ ಕಳುಹಿಸಿದ್ದಾರೆ
ಶಿಲ್ಪಾ ಫೋನ್​ ಲೀಸ್ಟ್​ನಲ್ಲಿದ್ದ ಸುಮಾರು 25 ನಂಬರ್​ಗಳಿಗೆ ಬೆತ್ತಲೆ ಚಿತ್ರ ರವಾನೆಯಾಗಿದೆ. ಫೋಟೋ ಸ್ವೀಕರಿಸಿದವರು ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು ಲೋನ್​ ಗ್ಯಾಂಗ್​ ಅನ್ನು ನಾಶ ಮಾಡುವಂತೆ ಮನವಿ ಮಾಡಿದ್ದಾರೆ
ಕುಟುಂಬದ ಸಾವಿನ ಹಿಂದೆ ಲೋನ್​ ಗ್ಯಾಂಗ್​ ಕೈವಾಡ ಇದೆ. ಸದ್ಯ ಪೊಲೀಸ್​ ತನಿಖೆ ನಡೆಯುತ್ತಿದೆ. ವಡಕ್ಕೆಕರಾ ಪೊಲೀಸ್​ ಠಾಣೆಯ ವಿ.ಸಿ. ಸೂರಜ್​ ತನಿಖೆಯ ನೇತೃತ್ವ ವಹಿಸಿದ್ದಾರೆ. ಶಿಲ್ಪಾ ಮತ್ತು ನಿಜೋ ಅವರ ಮೊಬೈಲ್ ಫೋನ್‌ಗಳನ್ನು ಇನ್ನೂ ಪರಿಶೀಲಿಸಿಲ್ಲ. ಫೋನ್‌ಗಳ ವೈಜ್ಞಾನಿಕ ಪರೀಕ್ಷೆಯು ಇನ್ನೂ ಬಾಕಿಯಿದೆ ಮತ್ತು ಈ ಪರೀಕ್ಷೆಯು ವಂಚನೆ ಗ್ಯಾಂಗ್ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಬಹುದು ಎಂದು ಪೊಲೀಸರು ನಂಬಿದ್ದಾರೆ.

ಹೈ ಪ್ರೊಫೈಲ್‌ ಹನಿಟ್ರ್ಯಾಪ್‌ ಕೇಸ್ ನ ಕಿಂಗ್ ಪಿನ್ ಆರತಿ ದಯಾಳ್‌ ಬೆಂಗಳೂರಿನಲ್ಲಿ ಅರೆಸ್ಟ್‌!

ಮಂಗಳವಾರ ರಾತ್ರಿ ಶೀಬಾ ಜೀವನ್​ ಅವರಿಗೆ ಲೋನ್​ ಗ್ಯಾಂಗ್​ನಿಂದ ಮೊದಲ ಮಸೇಜ್​ ಬಂದಿದೆ. ಶಿಲ್ಪಾ ಹೆಸರು, ಆಕೆಯ ಮೊಬೈಲ್ ಸಂಖ್ಯೆ, 9300 ರೂ. ಮೊತ್ತದ ಸ್ಕ್ರೀನ್ ಶಾಟ್, ಶಿಲ್ಪಾ ಅವರ ಆಧಾರ್ ಕಾರ್ಡ್​ನ ಪ್ರತಿಯು ಮಸೇಜ್​ನಲ್ಲಿತ್ತು. ಭಯದಿಂದ ಶೀಬಾ ಈ ನಂಬರ್ ಅನ್ನು ಬ್ಲಾಕ್ ಮಾಡಿದ್ದರು. ಆದರೆ, ಗುರುವಾರ ಬೆಳಗ್ಗೆ ಶೀಬಾ ಅವರ ಫೋನ್‌ಗೆ ಮತ್ತೊಂದು ನಂಬರ್‌ನಿಂದ ಶಿಲ್ಪಾಳ ನಗ್ನ ಚಿತ್ರಗಳು ಬಂದಿದ್ದವು.

ಸಿದ್ದಕಟ್ಟೆಯ ಪುಚ್ಛಮಗುರೂರಿನಲ್ಲಿ ಸೆರೆಯಾಗಿದೆ ಚಿರತೆ!


Share News

Leave a Reply

Your email address will not be published. Required fields are marked *