Breaking News

ಬೆಳ್ತಂಗಡಿ : ಕಾಪಿನಡ್ಕದಲ್ಲಿ ಬೈಕ್ ಮತ್ತು ಕಾರು ನಡುವೆ ಭೀಕರ ಅಪಘಾತ ; ಬೈಕ್ ಸವಾರ ಸಾವು!

Share News

ಬೆಳ್ತಂಗಡಿ, ಸೆ 04: ಬೆಳ್ತಂಗಡಿ ತಾಲೂಕಿನ ಕಾಪಿನಡ್ಕದಲ್ಲಿ ಇನೋವಾ ಕಾರು ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಮೃತ ಬೈಕ್‌ ಸವಾರನನ್ನು ಕಾರ್ಕಳ ತಾಲೂಕಿನ ಈದು ಗ್ರಾಮದ ಸುಧೀರ್‌ ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಇನೋವಾ ಕಾರು ಹಾಗೂ ಅಳದಂಗಡಿ ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಬೈಕ್‌ ನಡುವೆ ಢಿಕ್ಕಿ ಸಂಭವಿಸಿದ್ದು, ಢಿಕ್ಕಿ ರಭಸಕ್ಕೆ ಬೈಕ್‌ ಸವಾರ ರಸ್ತೆಗೆ ಎಲೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.

ಇನ್ನು ತಕ್ಷಣ ಬೈಕ್‌ ಸವಾರನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಪ್ಲ್ಯಾಸ್ಟಿಕ್ ಸರ್ಜರಿಯ ಅಡ್ಡ ಪರಿಣಾಮದಿಂದ ನಟಿ ಸಿಲ್ವಿನಾ ಲೂನಾ ಸಾವು!

ಪ್ಲಾಸ್ಟಿಕ್ ಸರ್ಜರಿ ಒಳಗಾಗಿದ್ದ ಖ್ಯಾತ ನಟಿ, ರೂಪದರ್ಶಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅರ್ಜೆಂಟೀನಾದ ನಟಿ, ರೂಪದರ್ಶಿ ಮತ್ತು ಟಿವಿ ನಿರೂಪಕಿ ಸಿಲ್ವಿನಾ ಲೂನಾ (43) ಪ್ಲ್ಯಾಸ್ಟಿಕ್ ಸರ್ಜರಿಯಿಂದ ಉಂಟಾದ ಅಡ್ಡ ಪರಿಣಾಮದಿಂದ ಸಾವನ್ನಪ್ಪಿದ್ದಾರೆ.

2011 ರಲ್ಲಿ ಸಿಲ್ವಿನಾ ಬ್ಯಾಕ್  ಸರ್ಜರಿಗೆ ಒಳಗಾಗಿದ್ದರು. ಇದಾದ ಬಳಿಕ ಅವರಿಗೆ ಕಿಡ್ನಿಯಲ್ಲಿ ಸಮಸ್ಯೆ ‌ಕಾಣಿಸಿಕೊಂಡಿತ್ತು.‌ಇದರಿಂದ ಅವರು ಅನಾರೋಗ್ಯಕ್ಕೆ‌ ಒಳಗಾಗಿದ್ದರು. 2015 ರಿಂದ ಅವರಿಗೆ ವಾರಕ್ಕೊಮ್ಮೆ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿತ್ತು.

ಹೈಪರ್‌ಕಾಲ್ಸೆಮಿಯಾದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದರು. ಒಟ್ಟು 79 ದಿನಗಳು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿ ತಿಳಿಸಿದೆ.

ಆದರೆ ಇತ್ತೀಚೆಗೆ ಅವರ ಆರೋಗ್ಯ ಹದಗೆಟ್ಟಿದ್ದು, ವೆಂಟಿಲೇಟರ್ ಸಪೋರ್ಟ್ ನಲ್ಲಿ ಅವರನ್ನು ಇರಿಸಲಾಗಿತ್ತು. ಅವರ ಕುಟುಂಬದವರ ಸೂಚನೆಯಂತೆ ಅವರ ವೆಂಟಿಲೇಟರ್ ಬೆಂಬಲವನ್ನು ಆಗಸ್ಟ್ 31 ರಂದು ತೆಗೆಯಲಾಗಿದೆ.


Share News

Leave a Reply

Your email address will not be published. Required fields are marked *