Breaking News

ಜೇನುತುಪ್ಪ ಬಳಸುತ್ತಿದ್ದೀರಾ? ಇದರಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳು ತಪ್ಪದೇ ತಿಳಿಯಿರಿ

Share News

ಜೇನು ತುಪ್ಪ ಎಂದು ಹೆಸರು ಎತ್ತಿದರೆ ಸಾಕು ನಮಗೆ ಅರಿವಿಲ್ಲದೆಯೇ ಬಾಯಲ್ಲಿ ನೀರೂರಲು ಆರಂಭವಾಗುತ್ತದೆ.. ಅಲ್ವಾ. ಸಕ್ಕರೆಯ ಸವಿಯನ್ನು ನೀಡಬಲ್ಲ ಜೇನು ನೈವೇದ್ಯ ಸಮಾನ.ನೈಸರ್ಗಿಕವಾದ ಸಿಹಿಯನ್ನು ಹೊಂದಿರುವ ಜೇನುತುಪ್ಪ ಅನೇಕ ರೋಗಗಳಿಗೆ ಮದ್ದಾಗಿದೆ. ಸಹಸ್ರಾರು ವರ್ಷಗಳಿಂದ, ಜೇನುತುಪ್ಪವು, ಅಡುಗೆ ಮನೆಯ ಒಂದು ವಿಶೇಷ ಆಹಾರ ಹಾಗೂ ಪ್ರಮುಖವಾದ ವೈದ್ಯಕೀಯ ಪರಿಹಾರವಾಗಿದೆ.

ಜೇನುತುಪ್ಪ ಬಳಸುತ್ತಿದ್ದೀರಾ? ಇದರಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳು ತಪ್ಪದೇ ತಿಳಿಯಿರಿ

ಜೇನುತುಪ್ಪವನ್ನು ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಯಾಗಿ ಬಳಸಲಾಗುತ್ತದೆ. ಜೇನುತುಪ್ಪದಲ್ಲಿ ಹೇರಳವಾಗಿ ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫೇಟ್, ಸೋಡಿಯಂ, ಕ್ಲೋರಿನ್, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳಿರುತ್ತವೆ. ಇದಲ್ಲದೆ, ಇದು ನಂಜುನಿರೋಧಕ, ಪ್ರತಿಜೀವಕ ಗುಣಲಕ್ಷಣಗಳನ್ನು ಹೊಂದಿದ್ದು, ವಿಟಮಿನ್ ಬಿ 1 ಮತ್ತು ಬಿ 6 ಸಹ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ.

ಇಂದಿನ ವೇಗದ ಜೀವನದಲ್ಲಿ ಆರೋಗ್ಯಕರವಾಗಿ ಮತ್ತು ಫಿಟ್ ಆಗಿ ಉಳಿಯುವುದು ಒಂದು ಸವಾಲಾಗಿದೆ. ನಿರ್ದಿಷ್ಟವಾಗಿ ಮಹಿಳೆಯರು ಕೆಲಸ, ಕುಟುಂಬ ಮತ್ತು ಆರೋಗ್ಯದ ನಡುವೆ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಲು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಾರೆ ಮತ್ತು ವಿಫಲರಾಗುತ್ತಾರೆ. ಈ ಪರಿಸ್ಥಿತಿಯು ಒಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಮಹಿಳೆಯರು ಆರೋಗ್ಯವಾಗಿರುವುದು ಹೇಗೆ ಎಂದು.ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಹಲವಾರು ನೈಸರ್ಗಿಕ ಅಂಶಗಳು ನಮ್ಮನ್ನು ವಿವಿಧ ರೀತಿಯ ಆರೋಗ್ಯದ ಸಮಸ್ಯೆಗಳಿಂದಪಾರು ಮಾಡುತ್ತದೆ. ಅದು ಕೇವಲ ಗಿಡಮೂಲಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಜೇನು ಹುಳುಗಳು ತಯಾರಿಸುವ ಜೇನುತುಪ್ಪದಂತಹ ವಸ್ತುಗಳಿಂದಲೂ ಸಿಗುತ್ತದೆ.

ಜೇನುತುಪ್ಪ ನಿಮ್ಮ ಆರೋಗ್ಯದ ವಿಚಾರದಲ್ಲಿ ಮ್ಯಾಜಿಕ್ ಮಾಡಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಚೈತನ್ಯವನ್ನು ಹೆಚ್ಚಿಸಲು ಮತ್ತು ಮಹಿಳೆಯರಲ್ಲಿ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಇದನ್ನು ವರ್ಷಗಳಿಂದ ಬಳಸಲಾಗುತ್ತದೆ.ಹಾಗಾಂತ ಹೇಳಿ ಇದು ಅರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೆಚ್ಚು ಹೆಚ್ಚು ಸೇವಿಸುವಂತಿಲ್ಲ. ಬದಲಿಗೆ ದಿನಕ್ಕೆ ಕೇವಲ ಒಂದರಿಂದ ಎರಡು ಚಮಚದಷ್ಟು ಮಾತ್ರ ಹಣ್ಣಿನೊಂದಿಗೆ ಅಥವಾ ನೇರವಾಗಿ ಈ ತುಪ್ಪವನ್ನು ಸೇವಿಸಬೇಕು.ಮುಖ್ಯವಾದ ವಿಚಾರ ಏನೆಂದರೆ ಈ ಜೇನುತುಪ್ಪ ವನ್ನು ಬೇಸಿಗೆ ಕಾಲದಲ್ಲಿ ತೆಗೆದುಕೊಂಡರೆ ದೇಹದ ಉಷ್ಣತೆ ಯು ಹೆಚ್ಚಿ ಪ್ರತಿಕೂಲ ಪರಿಣಾಮವನ್ನು ಬೀರಬಹುದು.

ಜೇನುತುಪ್ಪದ ಒಂದು ಮುಖ್ಯ ಉಪಯೋಗ ಏನೆಂದರೆ ಈ ಜೇನಿಗೆ ಗಾಯವನ್ನು ಗುಣಪಡಿಸುವ ಸಾಮರ್ಥ್ಯವಿದೆ.ಹಾಗಾಗಿ ಬಾಯಿಹುಣ್ಣು ಆದ ಸಂದರ್ಭದಲ್ಲಿ ನಾಲ್ಕು ಚಮಚದಷ್ಟು ಜೇನು ತುಪ್ಪವನ್ನು ಬಾಯಿಯಲ್ಲಿ ಹಾಕಿ ಇಟ್ಟುಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ. ಅಥವಾ ನೆಲ್ಲಿಕಾಯಿ ಪುಡಿಯನ್ನು ಈ ಜೇನುತುಪ್ಪ ದೊಂದಿಗೆ ಸೇರಿಸಿ ಲೇಪದಂತೆ ಹಚ್ಚಿಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ.

ಜೇನುತುಪ್ಪವು ಗ್ಲೂಕೋಸ್‌ನಿಂದ ತುಂಬಿರುತ್ತದೆ. ದೇಹವು ಇದನ್ನು ತ್ವರಿತವಾಗಿ ಹೀರಿಕೊಳ್ಳುವುದರಿಂದ, ಇದು ವ್ಯಕ್ತಿಗೆ ಶಕ್ತಿಯನ್ನು ನೀಡುತ್ತದೆ. ಹೆಚ್ಚುವರಿಯಾಗಿ, ವ್ಯಾಯಾಮ ಮಾಡುವ ಮೊದಲು ಅರ್ಧ ಟೀಸ್ಪೂನ್ ಜೇನುತುಪ್ಪವನ್ನು ಸೇವಿಸುವುದರಿಂದ ಆಯಾಸವಾಗುವುದಿಲ್ಲ. ನೀವು ಚಹಾ ಅಥವಾ ಕಾಫಿ ಕುಡಿಯಲು ಬಯಸಿದರೆ, ಸಕ್ಕರೆಯ ಬದಲಿಗೆ ಜೇನುತುಪ್ಪವನ್ನು ಬಳಸಿ.

ಮಹಿಳೆಯರು ತಮ್ಮ ಋತುಚಕ್ರದ ಮೊದಲು ಅಥವಾ ಆ ಸಮಯದಲ್ಲಿ ನೋವು, ಬೆನ್ನುನೋವು ಅಥವಾ ತಲೆನೋವುಗಳಂತಹ ಅನೇಕ ಸಮಸ್ಯೆಯನ್ನು ಅನುಭವಿಸುತ್ತಾರೆ. ಇದನ್ನು ಸುಲಭವಾಗಿ ನಿಭಾಯಿಸಲು, ಬೆಚ್ಚಗಿನ ನೀರಿಗೆ 1 ಚಮಚ ಜೇನುತುಪ್ಪ ಮತ್ತು ಸಣ್ಣ ತುಂಡು ಶುಂಠಿಯನ್ನು ಹಾಕಿ ಕುಡಿಯುವುದು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.ಕೆಮ್ಮು ಕಾಣಿಸಿಕೊಂಡರೆ ನೀವು ಜೇನುತುಪ್ಪದ ಜತೆಗೆ ಕಾಳುಮೆಣಸಿನ ಪುಡಿಯನ್ನು ಹಾಕಿ ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

 • ಜೇನುತುಪ್ಪವು ಬಲವಾದ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದರ ನಿಯಮಿತ ಸೇವನೆಯು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನಲ್ಲಿ ಜೇನುತುಪ್ಪ ಬೆರೆಸಿದ ನಿಂಬೆ ರಸವನ್ನು ಕುಡಿದರೆ ಕೊಬ್ಬನ್ನು ಕಡಿಮೆ ಮಾಡಬಹುದು. ಇದು ಅನೇಕ ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಜೀರ್ಣಕ್ರಿಯೆಯಿಂದಾಗಿ, ಮಲಬದ್ಧತೆ, ಅನಿಲ, ಅಜೀರ್ಣ ಮುಂತಾದ ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡುತ್ತವೆ.
 • ಮಹಿಳೆಯರು ಸಾಮಾನ್ಯವಾಗಿ ಹಾರ್ಮೋನುಗಳ ಅಸಮತೋಲನದಿಂದ ಬಳಲುತ್ತಿದ್ದಾರೆ, ಇದು ಟೆಸ್ಟೋಸ್ಟೆರಾನ್ ಮಟ್ಟದಲ್ಲಿನ ಅಸಮತೋಲನದ ಪರಿಣಾಮವಾಗಿದೆ. ಇದು ಸಂತಾನೋತ್ಪತ್ತಿ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಜೇನುತುಪ್ಪದ ದೈನಂದಿನ ಸೇವನೆಯು ಟೆಸ್ಟೋಸ್ಟೆರಾನ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುತ್ತದೆ.
 • ಸಾಮಾನ್ಯ ಉಸಿರಾಟದ ಸಮಸ್ಯೆಗಳಿಗೆ ಜೇನುತುಪ್ಪ ಪರಿಹಾರ ನೀಡುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿದ ಒಂದು ಲೋಟ ಜೇನುತುಪ್ಪವನ್ನು ಕುಡಿಯುತ್ತಿದ್ದರೆ, ಗಂಟಲು ನೋವಿನಂತಹ ಸಮಸ್ಯೆಗಳನ್ನು ದೂರ ಮಾಡುತ್ತವೆ.
 • ನೋವನ್ನು ಗುಣಪಡಿಸುವುದರ ಜೊತೆಗೆ, ಜೇನುತುಪ್ಪದ ಸೇವನೆಯು ಚರ್ಮದ ಸುಕ್ಕುಗಳಂತಹ ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಮಾಡಲು ಉತ್ತಮ ಮಾರ್ಗವೆಂದರೆ ನಿಮ್ಮ ಬೆಳಗಿನ ಚಹಾಕ್ಕೆ ಜೇನುತುಪ್ಪವನ್ನು ಸೇರಿಸುವುದು. ಹಾಗೆಯೇ ಮೊಸರು, ಕಡಲೆ ಹಿಟ್ಟಿಗೆ ಜೇನುತುಪ್ಪ ಹಾಕಿ ಮುಖಕ್ಕೆ ಹಚ್ಚಿದರ ತ್ವಚೆಯು ಹೊಳೆಯುತ್ತದೆ.

  • ಅಲ್ಲದೇ ಶುಂಠಿಯನ್ನು ಜೇನುತುಪ್ಪದೊಂದಿಗೆ ಜಜ್ಜಿ ಸೇವಿಸಿದರೆ ಪದೇ ಪದೇ ಉಂಟಾಗುವ ಕಫ, ಕೆಮ್ಮು, ಹಾಗೂ ಉರಿ ಶೀತದಿಂದ ಪಾರಾಗಬಹುದು. ಯಾಕೆಂದರೆ ಜೇನುತುಪ್ಪ ದಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಅಮೃತದಂತೆ ದೇಹಕ್ಕೆ ಸಹಕರಿಸುತ್ತದೆ.
  • ಇಷ್ಟೇ ಅಲ್ಲದೇ ದೇಹದ ಚಯಾಪಚಯ ಕ್ರಿಯೆಗೂ ಈ ಜೇನು ತುಂಬ ಸಹಾಯವಾಗುತ್ತದೆ. ಹೀಗಾಗಿ ಮಾರ್ಕೆಟ್ ನಿಂದ ಜೇನನ್ನು ತೆಗೆದುಕೊಳ್ಳುವ ವೇಳೆ ಆದಷ್ಟು ಕಲಬೆರಕೆ ಇಲ್ಲದ ತುಪ್ಪವನ್ನು ತೆಗೆದುಕೊಳ್ಳಿ.
  • ನಮ್ಮ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳುವಲ್ಲಿ ಈ ಜೇನುತುಪ್ಪದ ಪಾತ್ರ ಅತ್ಯಂತ ಪ್ರಮುಖವಾದದ್ದು. ಸಾಮಾನ್ಯವಾಗಿ ಜೇನುತುಪ್ಪವನ್ನು ನೀರಿನಲ್ಲಿ ಬೆರೆಸಿ ಕುಡಿದರೆ, ಅದು ರಕ್ತದ ಕೆಂಪು ರಕ್ತಕಣಗಳ ಸಂಖ್ಯೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ರಕ್ತದಲ್ಲಿನ ಆಮ್ಲಜನಕವನ್ನು ದೇಹದಲ್ಲಿನ ವಿವಿಧ ಭಾಗಗಳಿಗೆ ಸಾಗಿಸಲು ಆರ್-ಬಿ-ಸಿಯು ಕಾರಣವಾಗಿದೆ. ತುಸು ಬೆಚ್ಚಗಿನ ನೀರಿನ ಜೊತೆ ಜೇನು ತುಪ್ಪವನ್ನು ಸೇರಿಸಿ ಸೇವಿಸಿದರೆ, ರಕ್ತದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗಿ, ರಕ್ತಹೀನತೆಯನ್ನು ಗುಣಪಡಿಸುತ್ತದೆ.
  • ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಸುಧಾರಿಸುವುದು ಬಹಳ ಮುಖ್ಯ. ಏಕೆಂದರೆ ದೇಹವು ಎಷ್ಟು ಆರೋಗ್ಯಕರವಾಗಿದೆ ಹಾಗೂ ಅದು ಎಷ್ಟು ಸುಲಭವಾಗಿ ತನ್ನನ್ನು ತಾನು ಪುನಃ ಚೈತನ್ಯಗೊಳಿಸಿಕೊಳ್ಳುತ್ತದೆ ಎಂಬುವುದು ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಅವಲಂಬಿಸಿರುತ್ತದೆ. ಅಧಿಕ ರಕ್ತದೊತ್ತಡದ ಮೇಲೆ ಜೇನುತುಪ್ಪದ ಧನಾತ್ಮಕ ಪರಿಣಾಮವನ್ನು, ಪ್ರಾಥಮಿಕ ಸಂಶೋಧನೆಯು ತೋರಿಸಿದೆ. ಸಾಂಪ್ರದಾಯಿಕವಾಗಿ, hypotension ಅಥವಾ ಕಡಿಮೆ ರಕ್ತದೊತ್ತಡದ ಪರಿಣಾಮಗಳನ್ನು ಕಡಿಮೆ ಮಾಡಲು ಕೂಡ ಜೇನುತುಪ್ಪವನ್ನು ಸೇವಿಸಲಾಗುತ್ತದೆ.

Share News

Leave a Reply

Your email address will not be published. Required fields are marked *