Breaking News

ಉಳ್ಳಾಲ : ಸಾರ್ವಜನಿಕ ರಸ್ತೆ ಬದಿಯಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಯತ್ನ- ಇಬ್ಬರ ಬಂಧನ

Share News

ಮಂಗಳೂರು: ಉಳ್ಳಾಲ ತಾಲೂಕು ಪೆರ್ಮನ್ನೂರು ಗ್ರಾಮದ ಸಂತೋಷನಗರ ಸಾರ್ವಜನಿಕ ರಸ್ತೆ ಬದಿಯಲ್ಲಿ ನಿಷೇಧಿತ ಮಾದಕ ವಸ್ತು ಮೆಥಂಫೆಟಮೈನ್‌ ಮತ್ತು ಎಲ್‌.ಎಸ್.ಡಿ. ಸ್ಟ್ಯಾಂಪ್‍ ಡ್ರಗ್‍ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಪೊಲೀಸ್‌ ಕಮಿಷನರೆಟ್‌ ನ ಆ್ಯಂಟಿ ಡ್ರಗ್‌ ಟೀಮ್‌ ಬಂಧಿಸಿ ಅವರಿಂದ ಒಟ್ಟು 14.01 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದೆ.

ಇದನ್ನೂ ಓದಿ: ಮಂಗಳೂರು ಲೋಕಸಭೆಗೆ ಅಭಿಪ್ರಾಯ ಸಂಗ್ರಹ: ಮಧು ಬಂಗಾರಪ್ಪ ಮುಂದೆ ಹರೀಶ್ ಕುಮಾರ್, ರಮಾನಾಥ ರೈ ಹೆಸರಿಗೆ ಪ್ರಬಲ ಒಲವು!

ಶಿಶಿರ್ ದೇವಾಡಿಗ ಮತ್ತು ಶುಶಾನ್.ಎಲ್. ಬಂಧಿತ ಆರೋಪಿಗಳು. ಅವರಿಂದ 132 ಗ್ರಾಂ ತೂಕದ ಮೆಥಂಫೆಟಮೈನ್‌ ಮತ್ತು 250 ಎಲ್‌.ಎಸ್.ಡಿ. ಸ್ಟ್ಯಾಂಪ್‍ ಡ್ರಗ್, ನಗದು 3,70,050 ರೂಪಾಯಿ ಹಾಗೂ ಒಂದು ಸ್ವಿಪ್ಟ್ ಕಾರು ಸೇರಿದಂತೆ ಒಟ್ಟು 14 ಲಕ್ಷದ ಒಂದು ಸಾವಿರದ ಐವತ್ತು ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕಾರಿನಲ್ಲಿ ಬಂದು ಸಂತೋಷನಗರ ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಮಾಹಿತಿ ಲಭಿಸಿದ ಆ್ಯಂಟಿ ಡ್ರಗ್‌ ಟೀಮ್‌ ದಾಳಿ ಕಾರ್ಯಾಚರಣೆ ನಡೆಸಿತು. ಎಸಿಪಿ ಧನ್ಯಾ ಎನ್.ನಾಯಕ್‌ ನೇತೃತ್ವದ ಆ್ಯಂಟಿ ಡ್ರಗ್‌ ಟೀಮ್‌ ನಲ್ಲಿ ಉಳ್ಳಾಲ ಪೊಲೀಸ್‌ ಠಾಣೆಯ ಪಿಎಸ್‍ಐ ಗಳಾದ ಪುನಿತ್‍ ಗಾಂವ್‍ಕರ್ ಮತ್ತು ಸಂತೋಷ್‌ ಕುಮಾರ್.ಡಿ. ಹಾಗೂ ಸಿಬಂದಿ ಭಾಗವಹಿಸಿದ್ದರು.

WATCH VIDEO ON YOUTUBE: ನಾಗನ ಆರಾಧನೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶ ನಾಗಬನಗಳದ್ದು: ತಮ್ಮಣ್ಣ ಶೆಟ್ಟಿ


Share News

Leave a Reply

Your email address will not be published. Required fields are marked *