Breaking News

ಉಡುಪಿ :ಬನಿಯನ್‌ ಹಾಗೂ ಚಡ್ಡಿ ಧರಿಸಿ ಕಳ್ಳತನ….!

Share News

ಉಡುಪಿ: ಚಿತ್ರ-ವಿಚಿತ್ರವಾಗಿ ವೇಷ ಧರಿಸಿ ಬರುವ ಕಳ್ಳರ ಹೆಜ್ಜೆ ಗುರುತು ಪತ್ತೆ ಮಾಡುವುದೇ ಪೊಲೀಸರಿಗೆ ತಲೆನೋವಾಗಿದೆ. ಒಂದು ಕಡೆ ಸೈಬರ್‌ ಕಳ್ಳರ ಹಾವಳಿಯಾದರೆ ಮತ್ತೊಂದೆಡೆ ಕೆಲ ನಟೋರಿಯಸ್‌ ಗ್ಯಾಂಗ್‌ ಸಕ್ರಿಯಗೊಂಡಿದೆ. ಸದ್ಯ ಉಡುಪಿಯಲ್ಲಿ ನಟೋರಿಯಸ್ ಬನಿಯನ್ ಗ್ಯಾಂಗ್‌ ಜನರ ಆತಂಕವನ್ನು ಹೆಚ್ಚು ಮಾಡಿದೆ.

ಬನಿಯನ್‌ ಹಾಗೂ ಚಡ್ಡಿ ಧರಿಸಿ ಬರುವ ಈ ಕಳ್ಳರು ಮೈಗೆ ಎಣ್ಣೆ ಹಚ್ಚಿಕೊಂಡು ಫೀಲ್ಡಿಗಿಳಿಯುತ್ತಾರೆ. ಎಲ್ಲರೂ ಗಾಢ ನಿದ್ರೆ ಜಾರುವ ಸಮಯಕ್ಕೆ ಕಾದುಕುಳಿತು ನಂತರ ಕಳ್ಳತನಕ್ಕೆ ಮುಂದಾಗುತ್ತಾರೆ. ರಾತ್ರೋ ರಾತ್ರಿ ಕಳ್ಳ ಬೆಕ್ಕಿನಂತೆ ನುಗ್ಗುವ ಇವರು ಕ್ಷಣಾರ್ಧದಲ್ಲಿ ಚಿನ್ನಾಭರಣವನ್ನು ಲೂಟಿ ಮಾಡಿ ಪರಾರಿ ಆಗುತ್ತಾರೆ.

ಈ ಕಚ್ಚಾ ಬನಿಯನ್ ಗ್ಯಾಂಗ್ ಪತ್ತೆ ಮಾಡುವುದೇ ಉಡುಪಿ ಪೊಲೀಸರಿಗೆ ಸವಾಲಾಗಿದೆ. ಸಂತೆಕಟ್ಟೆಯಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣದಲ್ಲಿ ಈ ತಂಡದ ಕೃತ್ಯ ಬಯಲಾಗಿದೆ. ಇನ್ನು ಕೃತ್ಯದ ಬಳಿಕ ಈ ಗ್ಯಾಂಗ್ ಸಿಂಗಲ್ ಚಪ್ಪಲಿಯನ್ನು ಬಿಟ್ಟು ಹೋಗುತ್ತಾರೆ. ಸೊಂಟಕ್ಕೆ ಚಪ್ಪಲಿ ಕಟ್ಟಿಕೊಂಡು ಬರುವ ಈ ಗ್ಯಾಂಗ್‌ ಡೆಲ್ಲಿ ಕ್ರೈಮ್-2 ವೆಬ್ ಸೀರೀಸ್‌ ಕಚ್ಚಾ ಬನಿಯನ್ ಗ್ಯಾಂಗ್ ನೆನಪಿಸುತ್ತೆ. ಸಿಸಿಟಿವಿಯಲ್ಲಿ ಚೆಡ್ಡಿ ಗ್ಯಾಂಗ್‌ನ ಮಾರುವೇಷ ಪತ್ತೆಯಾಗಿದೆ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!


Share News

Leave a Reply

Your email address will not be published. Required fields are marked *