Breaking News

ಹಿರಿಯ ನಟಿ ತಾರಾ ಫೇಸ್‍ಬುಕ್ ಅಕೌಂಟ್ ಹ್ಯಾಕ್…!

Share News

ನ್ನಡದ ಹಿರಿಯ ನಟಿ ತಾರಾ (Thara Anuradha) ಅವರ ಫೇಸ್‍ಬುಕ್ ಹ್ಯಾಕ್ ಮಾಡಿ ಅನಾವಶ್ಯಕ ವಿಚಾರಗಳ ಕುರಿತಾಗಿ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ಹೃದಯಾಘಾತಕ್ಕೆ 7 ನೇ ತರಗತಿ ವಿದ್ಯಾರ್ಥಿನಿ ಬಲಿ…!

ಫೇಸ್‍ಬುಕ್ (Facebook Account Hack) ಐಡಿ ಮೂಲಕ ಸ್ನೇಹಿತರಿಗೆ ಟ್ಯಾಗ್ ಮಾಡಿ ಅನಾವಶ್ಯಕ ಸಂದೇಶ ಕಳಿಸಿದ ಆರೋಪದ ಮೇಲೆ ತಾರಾ ಅವರು ದಕ್ಷಿಣ ವಿಭಾಗ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರೋ ಹಿರಿಯ ನಟಿ, ಕಾನೂನು ಮೂಲಕ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ನಟಿ ತಾರಾನುರಾಧ ಹಾಗೂ ತಾರಾನುರಾಧ ವೇಣು ಎಂಬ ಎರಡು ಅಕೌಂಟ್‍ಗಳನ್ನು ಬಳಕೆ ಮಾಡುತ್ತಿದ್ದರು. ಇತ್ತೀಚೆಗೆ ಅವರು ಹೆಚ್ಚಾಗಿ ತಾರಾನುರಾಧ ವೇಣು ಎಂಬ ಅಕೌಂಟ್ ಬಳಸುತ್ತಿದ್ದರು. ಈ ವೇಳೆ ಸ್ನೇಹಿತರೊಬ್ಬರು ತಾರಾಗೆ ಲಿಂಕ್ ಒಂದನ್ನ ಕಳುಹಿಸಿದ್ದಾರೆ. ಆಗ ವಿಚಾರ ಬಯಲಾಗಿದೆ.

ಇದನ್ನೂ ಓದಿ: ಕಾಸರಗೋಡು : ಸೊಳ್ಳೆ ನಿವಾರಕ ದ್ರಾವಣ ಸೇವಿಸಿ ಒಂದುವರೆ ವರ್ಷದ ಮಗು ಮೃತ್ಯು..!

ತಾರಾನುರಾಧ ಎಂಬುವ ಅಕೌಂಟ್‍ನಲ್ಲಿ ವಿಚಾರವೊಂದನ್ನ ಪೋಸ್ಟ್ ಮಾಡಲಾಗಿತ್ತು. ಆದರೆ ಅದು ನಾನು ಮಾಡಿದ ಪೋಸ್ಟ್ ಅಲ್ಲ. ನನ್ನ ಅಕೌಂಟ್ ಓಪನ್ ಮಾಡಿದಾಗ ಆ ಪೋಸ್ಟ್ ಕಾಣುತ್ತಿಲ್ಲ. ಆದರೆ ಲಿಂಕ್ ಓಪನ್ ಮಾಡಿದರೆ ಆ ಪೋಸ್ಟ್ ಕಾಣಿಸುತ್ತಿದೆ. ಹೀಗಾಗಿ ಆ ಪೋಸ್ಟ್ ಡಿಲೀಟ್ ಮಾಡುವಂತೆ ದೂರು ನೀಡಿದ್ದಾರೆ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!


Share News

Leave a Reply

Your email address will not be published. Required fields are marked *