Breaking News

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು; 8 ಮಂದಿ ಪ್ರಾಣಾಪಾಯದಿಂದ ಪಾರು

Share News

ಮಡಿಕೇರಿ: ಚಾಲಕನೋರ್ವನ ನಿಯಂತ್ರಣ ತಪ್ಪಿ ಕಾರೊಂದು (Car) ರಸ್ತೆ ಬದಿಯಲ್ಲಿರುವ ಕೆರೆಗೆ ಬಿದ್ದು, ಕಾರಿನಲ್ಲಿದ್ದ 8 ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ (Somavarapete) ತಾಲೂಕಿನ ಯಡೂರು ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.

ಹಾನಗಲ್ಲು ಗ್ರಾಮದ ನಿವಾಸಿ ಶಿವಣ್ಣ ಎಂಬವರು ತಮ್ಮ ತೋಟದಲ್ಲಿ ಕಾಫಿ (Coffee) ಕೊಯ್ದು, ಸಂಜೆ ಯಡೂರು ಮಾರ್ಗವಾಗಿ ಬರುವಾಗ ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಯಡೂರು ಕೆರೆಗೆ ಬಿದ್ದಿದೆ. ಕಾರಿನೊಳಗಿದ್ದವರು ಕಿಟಕಿಗಳನ್ನು ಒಡೆದು ಹೊರಬರುವ ಮೂಲಕ ಜೀವ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ: ಡಾ. ಯತೀಂದ್ರ

ಮದಲಾಪುರದ ಜ್ಯೋತಿ, ಲಕ್ಷ್ಮಿ, ಮನು, ಸೀತಮ್ಮ, ರತಿ ಅವರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ನಂತರ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

ಭದ್ರತಾ ಬೇಲಿ ಅಳವಡಿಸಲು ಒತ್ತಾಯ: ಕರೆಯು ರಸ್ತೆಯ ಅಂಚಿನಲ್ಲಿದ್ದು, ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಯಾವುದೇ ಸಂಭವಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ಸುತ್ತ ಭದ್ರತಾ ಬೇಲಿ ಅಳವಡಿಸಬೇಕೆಂದು ಯಡೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಟಾಯ್ಲೆಟಲ್ಲೇ ಕೂತು ಪ್ರಯಾಣ!


Share News

Leave a Reply

Your email address will not be published. Required fields are marked *