Breaking News

ಮದ್ಯ ಪ್ರಿಯರಿಗೆ ಶಾಕ್ ; ಮದ್ಯದ ದರ ಏರಿಕೆ.!

Share News

ಬೆಂಗಳೂರು, ಜ.02: ಹೊಸ ವರ್ಷದಂದು (New Year) ಬರೋಬ್ಬರಿ 193 ಕೋಟಿ ಆದಾಯ ಗಳಿಸಿ ಮಂದಹಾಸ ಬೀರಿದ್ದ ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ. ಇಂದಿನಿಂದ ಬಡವರು ಕುಡಿಯುವ ಮದ್ಯದ ದರದಲ್ಲಿ ಏರಿಕೆ‌ಯಾಗಿದೆ. ಅಬಕಾರಿ ಇಲಾಖೆ ಬಡವರ ನೆಚ್ಚಿನ‌ ಕೆಲ ಬ್ರ್ಯಾಂಡ್​ಗಳ ದರ ಹೆಚ್ಚಿಸಿದೆ (Liquor Price Increased). ಈ ಮೂಲಕ ಮಧ್ಯಮ ವರ್ಗದ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದೆ. ಹೊಸ ವರ್ಷಕ್ಕೆ ಕಂಠ ಪೂರ್ತಿ ಕುಡಿದು ಕುಪ್ಪಳಿಸಿದ್ದ ಬಡವರು ಈಗ ಎಣ್ಣೆ ಖರೀದಿಸಲು ಯೋಚಿಸುವಂತಾಗಿದೆ.

ಇದನ್ನೂ ಓದಿ: ವರ್ಷದ ಮೊದಲ ದಿನವೇ ಯುವತಿಯೊಬ್ಬಳು ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಈಗಾಗಲೇ 17% ರಷ್ಟು ಓವರ್ ಆಲ್ ಮಧ್ಯದ ಮೇಲೆ ದರ ಏರಿಕೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ಬಡವರು ಹೆಚ್ಚಾಗಿ ಕುಡಿಯುವ ಮೂರು ಹಾಟ್ ಫೇವರೆಟ್ ಬ್ರ್ಯಾಂಡ್​ಗಳ ದರ ಹೆಚ್ಚಳ ಮಾಡಲಾಗಿದೆ. ಮದ್ಯ ಉತ್ವಾದನ‌‌‌ ಕಂಪನಿಗಳು ಕ್ವಾಟರ್​ಗೆ 20 ರಿಂದ ಮೂವತ್ತು ರೂಪಾಯಿ ಏರಿಸಿವೆ. ಇಂದಿನಿಂದ ರಾಜ್ಯಾದ್ಯಂತ ಬಡವರ ಈ ಮೂರು ಫೇವರೆಟ್ ಬ್ರ್ಯಾಂಡ್​ಗಳ ಮೇಲಿನ ದರ ಹೆಚ್ಚಳವಾಗಿದೆ. ಈಗಾಗಲೇ ಬಾರ್ ಮಾಲೀಕರಿಗೆ ಮತ್ತು ಅಬಕಾರಿ ಇಲಾಖೆಗೆ ಮದ್ಯ ತಯಾರಿಕ ಕಂಪನಿಗಳು ಸಂದೇಶ ಕಳುಹಿಸಿವೆ. ರಾಜ್ಯದ ಕೆಳ ವರ್ಗದ ಜನ ಅತಿ ಹೆಚ್ಚು ಸೇವಿಸುವ ಬ್ರ್ಯಾಂಡ್​ಗಳ ದರ ಏರಿಕೆಯಾಗಿದೆ.

ಇದನ್ನೂ ಓದಿ: ಹೊಸ ವರ್ಷ ಕ್ಕೆ ‘ಕರಾವಳಿ’ ಸಿನಿಮಾದ ಹೊಸ ಪೋಸ್ಟರ್ ರಿಲೀಸ್

ಸದ್ಯ ಮದ್ಯ ಏರಿಕೆ ಹಿನ್ನೆಲೆ ಅಬಕಾರಿ ಇಲಾಖೆ ಹಾಗೂ ಕಂಪನಿಗಳ ವಿರುದ್ಧ ಮದ್ಯ ಪ್ರಿಯರು ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಉತ್ಪಾದನ ವೆಚ್ಚ ಅಧಿಕವಾಗಿದೆ ಎಂದು ಮದ್ಯ ಉತ್ವನ್ನ ಕಂಪನಿಗಳು ಸಮಜಾಯಿಸಿ ನೀಡಿವೆ. ಇನ್ನು ಮತ್ತೊಂದೆಡೆ ಹೀಗೆ ರೇಟ್ ಹೆಚ್ಚಳವಾದ್ರೆ ಮದ್ಯ ಮಾರಾಟದಲ್ಲಿ ಕುಸಿತ ಆಗುತ್ತೆ ಎಂದು ಬಾರ್ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ‌ ಬ್ರ್ಯಾಂಡ್​ಗಳಿಗಿಂತ ಕಡಿಮೆ ರೇಟಿನ ಎಣ್ಣೆಗೆ ಜನ ಶಿಫ್ಟ್ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ದುಬಾರಿಯಾಯ್ತು ಬಡವರ ಫೇವರೆಟ್ ಬ್ರ್ಯಾಂಡ್

  • ಓಟಿ(180 ಎಂಎಲ್): ಈ ಹಿಂದೆ  90 ರೂಪಾಯಿ, ಜನವರಿ 2 ರಿಂದ 111 ರೂಪಾಯಿ.
  • ಬಿಪಿ(180 ಎಂಎಲ್): ಹಿಂದೆ 110 ರೂಪಾಯಿ, ಇಂದಿನಿಂದ- 145 ರೂಪಾಯಿ.
  • 8PM(180 ಎಂಎಲ್): ನಿನ್ನೆಯ ದರ 90 ರೂಪಾಯಿ, ಇಂದಿನ ದರ 111 ರೂಪಾಯಿ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!


Share News

Leave a Reply

Your email address will not be published. Required fields are marked *