Breaking News

ಹೊಸ ವರ್ಷ ಕ್ಕೆ ‘ಕರಾವಳಿ’ ಸಿನಿಮಾದ ಹೊಸ ಪೋಸ್ಟರ್ ರಿಲೀಸ್

Share News

ಅಂಬಿ ನಿಂಗೆ ವಯಸ್ಸಾಯ್ತು ಸಿನಿಮಾ ಮೂಲಕ ಚಿತ್ರಜಗತ್ತಿಗೆ ನಿರ್ದೇಶಕರಾಗಿ ಎಂಟ್ರಿ ಪಡೆದಿರುವ ಗುರುದತ್ ಗಾಣಿಗ, ಇದೀಗ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರಕ್ಕೆ ಅವರು ಕರಾವಳಿ ಎಂದು ಹೆಸರಿಟ್ಟಿದ್ದಾರೆ. ಈ ಹಿಂದೆ ಟೀಸರ್ ರಿಲೀಸ್ ಮಾಡುವ ಮೂಲಕ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದ್ದವರು, ಇದೀಗ ಹೊಸ ವರ್ಷಕ್ಕೆ ಹೊಸದೊಂದು ಪೋಸ್ಟರ್ (Poster) ರಿಲೀಸ್ ಮಾಡಿದ್ದಾರೆ. ಆ ಪೋಸ್ಟರ್ ಕೂಡ ಗಮನ ಸೆಳೆಯುತ್ತಿದೆ.

ಕರಾವಳಿ (Karavali) ಭಾಗದ ಸಂಸ್ಕೃತಿ ಸಾರುವ ಮತ್ತೊಂದು ಸಿನಿಮಾ ಇದಾಗಿದ್ದು, ‘ಕರಾವಳಿ’ ಹೆಸರಿನಲ್ಲೇ ಹೊಸ ಸಿನಿಮಾ ಅನೌನ್ಸ್ ಆಗಿದೆ.  ವಿಶೇಷ ಎಂದರೆ ಕರಾವಳಿ ಭಾಗದ ಬಗ್ಗೆಯೇ ಇರುವ ಈ ಸಿನಿಮಾದ ಟೀಸರ್ ಅನ್ನು ಮಂಗಳೂರಿನಲ್ಲಿ ಈ ಹಿಂದೆ ಅದ್ದೂರಿಯಾಗಿ ಲಾಂಚ್ ಮಾಡಲಾಗಿತ್ತು. ಅಂದಹಾಗೆ ‘ಕರಾವಳಿ’ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕನಾಗಿ ನಟಿಸುತ್ತಿರುವ ಸಿನಿಮಾ. ಈ ಚಿತ್ರಕ್ಕೆ ಗುರುದತ್ ಗಾಣಿಗ (Gurudutt Ganiga) ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಗುರುದತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ.

ಇದನ್ನೂ ಓದಿ: ಬಂಟ್ವಾಳ : ಬೈಕ್ ಸ್ಕಿಡ್ ಆಗಿ ಬಿದ್ದು ನಾಟಕ ಕಲಾವಿದ ಸಾವು..!

ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಜಗತ್ತಿಗೆ ಎಂಟ್ರಿ ಕೊಡುವ ಎರಡು ಹೊಸ ಜೀವಗಳನ್ನು ನೋಡಬಹುದು. ತಾಯಿ ಮಗುವಿಗೆ ಜನ್ಮ ನೀಡುತ್ತಿರುವ ದೃಶ್ಯದ ಜೊತೆಗೆಯೇ ಎಮ್ಮೆ ಕೂಡ ತನ್ನ ಮಗುವಿಗೆ ಜನ್ಮ ನೀಡುತ್ತಿದೆ. ಈ ಟೀಸರ್ ನೋಡ್ತಿದ್ರೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಬಗ್ಗೆ ಇರುವ ಸಿನಿಮಾ ಎನ್ನುವುದು ಮೇಲ್ನೋಟಕ್ಕೆ ಗೋತ್ತಾಗುತ್ತಿದೆ. ಬ್ಯಾಗ್ರೌಂಡ್‌ನಲ್ಲಿ ಬರುವ ಯಕ್ಷಗಾನದ ಧ್ವನಿ ಟೀಸರ್‌ನ ತೂಕವನ್ನು ಹೆಚ್ಚಿಸುವ ಜೊತೆಗೆ ಕುತೂಹಲ ದುಪ್ಪಟ್ಟು ಮಾಡಿದೆ.

ಕರಾವಳಿ ಎಂದಮೇಲೆ ಆ ಭಾಗದ ಸಂಸ್ಕೃತಿ, ದೈವ, ಯಕ್ಷಗಾನ ಮುಖ್ಯವಾಗಿ ಕಂಬಳ ಸೇರಿದಂತೆ ಅಲ್ಲಿನ ಆಚಾರ ವಿಚಾರ ಎಲ್ಲವನ್ನು ಈ ಸಿನಿಮಾದಲ್ಲಿ ನೋಡುವ ಕಾತರದಲ್ಲಿದ್ದಾರೆ ಅಭಿಮಾನಿಗಳು. ಇನ್ನು ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಸದ್ಯ ರಿಲೀಸ್ ಆಗಿರುವ ಟೀಸರ್ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರ ಪಾತ್ರ ನೋಡಿದ್ರೆ ಇದುವರೆಗೂ ಅವರು ಮಾಡಿರುವ ಪಾತ್ರಗಳಲ್ಲಿಯೇ ಅತ್ಯಂತ ವಿಭಿನ್ನವಾಗಿದೆ. ಟೀಸರ್ ನೋಡ್ತಿದ್ರೆ ಪ್ರಜ್ವಲ್ 40ನೇ ಸಿನಿಮಾ ತುಂಬಾ ವಿಶೇಷವಾಗಿ ಮೂಡಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುದರಲ್ಲಿ ಎರಡು ಮಾತಿಲ್ಲ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!


Share News

Leave a Reply

Your email address will not be published. Required fields are marked *