Breaking News

ಶಕ್ತಿ ಯೋಜನೆ ಆರಂಭವಾಗಿ ಮೂರು ತಿಂಗಳು; ವಾಯುವ್ಯ ಸಾರಿಗೆ ಬಸ್ಸುಗಳಲ್ಲಿ 13.20 ಕೋಟಿ ಮಹಿಳೆಯರು ಪ್ರಯಾಣ!

Share News

ಹುಬ್ಬಳ್ಳಿ ಸೆ.12: ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಆರಂಭಿಸಿದ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ (Shakti Yojana) ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ದೊರೆತಿದೆ. ಯೋಜನೆ ಜಾರಿಯಾಗಿ ಸಪ್ಟೆಂಬರ್ 10ಕ್ಕೆ ಮೂರು ತಿಂಗಳು ಪೂರೈಸಿದ್ದು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್​​ಗಳಲ್ಲಿ ಇದುವರೆಗೆ 13.20 ಕೋಟಿ ಮಹಿಳೆಯರು ಶೂನ್ಯ ಟಿಕೆಟ್ ಪಡೆದು ಉಚಿತವಾಗಿ ಪ್ರಯಾಣಿಸಿದ್ದಾರೆ. ಶೂನ್ಯ ಟಿಕೆಟ್ ಪ್ರಯಾಣದ ಮೊತ್ತ 332.77 ಕೋಟಿ ರೂ. ಆಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಆರು ಜಿಲ್ಲೆಗಳ ಒಂಬತ್ತು ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ ಶೂನ್ಯ ಟಿಕೆಟ್​ಗಳ ಸಂಖ್ಯೆ 13,20,53,266 ಗಳಾಗಿದೆ. ಉಚಿತ ಪ್ರಯಾಣದ ಟಿಕೆಟ್ ಮೊತ್ತ 332,77,03,789 ರೂ. ಗಳಾಗಿದೆ.

ಕರಾವಳಿ ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಈ ವಾರ ಮಳೆ ಸಾಧ್ಯತೆ ; ಹವಾಮಾನ ಇಲಾಖೆ ಮುನ್ಸೂಚನೆ!

ಜೂನ್ 11 ರಿಂದ 30 ರವೆರೆಗೆ 2.55 ಕೋಟಿ ಶೂನ್ಯ ಟಿಕೆಟ್​ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 65.15 ಕೋಟಿ ರೂ. ಗಳಾಗಿದೆ. ಜುಲೈ ತಿಂಗಳಲ್ಲಿ 4.48 ಕೋಟಿ ಶೂನ್ಯ ಟಿಕೆಟ್​ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ 111.78 ಕೋಟಿ ರೂ. ಗಳಾಗಿದೆ.

ಬಂಟ್ವಾಳ ಬೈಪಾಸ್ ನಲ್ಲಿ ನಿರ್ಮಾಣಗೊಂಡ ರಿಕ್ಷಾ ತಂಗುದಾಣ ನಾಳೆ ಉದ್ಘಾಟನೆ!

ವಿಭಾಗವಾರು ಮಹಿಳೆಯರ ಪ್ರಯಾಣ
ವಿಭಾಗಶೂನ್ಯ ಟಿಕೆಟ್ ಗಳು (ಕೋಟಿ ಗಳಲ್ಲಿ)ಟಿಕೆಟ್ ಮೌಲ್ಯ (ಕೋಟಿ ಗಳಲ್ಲಿ)
ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ1.7621.46
ಹುಬ್ಬಳ್ಳಿ ಗ್ರಾಮಾಂತರ0.8831.42
ಧಾರವಾಡ1.0628.4
ಬೆಳಗಾವಿ2.0441.89
ಚಿಕ್ಕೋಡಿ1.8145.23
ಬಾಗಲಕೋಟೆ1.6651.65
ಗದಗ1.3240.02
ಹಾವೇರಿ1.4639.87
ಉತ್ತರ ಕನ್ನಡ  1.2232.84

ಆಗಸ್ಟ್ ತಿಂಗಳಲ್ಲಿ 4.61 ಕೋಟಿ ಶೂನ್ಯ ಟಿಕೆಟ್ ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ 115.42 ಕೋಟಿ ರೂ. ಗಳಾಗಿದೆ. ಸಪ್ಟೆಂಬರ್ 1 ರಿಂದ 10 ರವೆರೆಗೆ 1.56 ಕೋಟಿ ಶೂನ್ಯ ಟಿಕೆಟ್​ ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 40.42 ಕೋಟಿ ರೂ. ಆಗಿದೆ.

ತಾಸೆಯ ಪೆಟ್ಟಿಗೆ ಭರ್ಜರಿ ಹುಲಿ ಕುಣಿತ ಮಾಡಿದ ಶಿಕ್ಷಕರು ಹಾಗೂ ಮಕ್ಕಳು!


Share News

Leave a Reply

Your email address will not be published. Required fields are marked *