Breaking News

ಒಂದೇ ಹೆಸರು ಎರಡು ಸಂಸ್ಥೆಗಳಿಗೆ ನೀಡಿದ ಪ್ರಕರಣ: ಉತ್ತರ ಕನ್ನಡ ಜಿಲ್ಲಾ ಅಮಚೂರ್ ಕಬಡ್ಡಿ ಅಸೋಸಿಯೇಷನ್ ನೊಂದಾವಣಿ ರದ್ದು!

Share News

ಕಾರವಾರ: ಒಂದೇ ಹೆಸರಿನಲ್ಲಿ ಎರಡು ಸಂಘಗಳನ್ನು ನೋಂದಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಸಹಕಾರಿ ಉಪನಿಬಂಧಕರು ನಂತರ ನೋಂದಾವಣೆಗೊಂಡಿರುವ ಉತ್ತರ ಕನ್ನಡ ಜಿಲ್ಲಾ ಅಮೆಚೂರು
ಕಬಡ್ಡಿ ಎಸೋಸಿಯೇಷನ್ ನೋಂದಾವಣೆಯನ್ನು ರದ್ದುಗೊಳಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸದಾನಂದ ಗೌಡ

ಸಹಕಾರಿ ಸಂಘಗಳ ನೋಂದಾವಣಿ ಅಧಿನಿಯಮ 7ರ ಪ್ರಕಾರ ಉತ್ತರ ಕನ್ನಡ ಅಮೆಚೂರು ಕಬ್ಬಡಿ ಎಸೋಶಿಯೇಶನ್ ಎರಡನೇ ಸಂಘದ ನೋಂದಣಿ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದು, ವಾದ-ವಿವಾದವನ್ನ ಆಲಿಸಿದ ಉಪನಿಬಂಧಕರು ಏಳು ತಿಂಗಳ ನಂತರ ನೋಂದಾವಣೆಗೊಂಡ ಸಂಘವನ್ನು ರದ್ದುಗೊಳಿಸಿ ಆದೇಶ ನೀಡಿದ್ದಾರೆ.
ಇಂತಹ ಪ್ರಕರಣಗಳು ಸಹಕಾರಿ ಸಂಘದಲ್ಲಿ ಇದ್ದು, ಒಂದೇ ಹೆಸರಿನಲ್ಲಿ ಎರಡು ಹೆಸರುಗಳನ್ನು ನೀಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಆದೇಶ ಮಹತ್ವ ಪಡೆದಿದ್ದು, ಕಲಂ ಏಳ ಮಹತ್ವವನ್ನು ಇದು ಒತ್ತಿ ಹೇಳಿದೆ ಎಂದು ಅಭಿಪ್ರಾಯ ಪಡಲಾಗಿದೆ.

ಇದನ್ನೂ ಓದಿ: ಅಮಿತ್ ಶಾ ರಥಕ್ಕೆ ವಿದ್ಯುತ್ ಸ್ಪರ್ಶ; ಅಪಾಯದಿಂದ ಪಾರು!

ಉತ್ತರ ಕನ್ನಡ ಅಮೆಚೂರು ಕಬ್ಬಡಿ ಎಸೋಸಿಯೇಷನ್ ಪರವಾಗಿ ಅಧ್ಯಕ್ಷರಾದ ಮಂಜುನಾಥ ನಾಯ್ಕ್, ಕಾರ್ಯದರ್ಶಿ ಅನಿಲ್ ಕುಮಾರ್, ಉಪಾಧ್ಯಕ್ಷ ವಾಸು ಎಲ್ ನಾಯ್ಕ್, ಸಂಘಟನಾ ಕಾರ್ಯದರ್ಶಿ ಗಜ ನಾಯ್ಕ್ ಪ್ರತಿನಿಧಿಸಿದ್ದರು.

ಉತ್ತರ ಕನ್ನಡ ಅಮೆಚೂರು ಕಬ್ಬಡಿ ಎಸೋಸಿಯೇಶನ್ ಪರವಾಗಿ ಐಪಿ ನ್ಯಾಯವಾದಿ ನವನೀತ್.ಡಿ. ಹಿ0ಗಾಣಿ ಮಂಗಳೂರು ಹಾಗೂ ಹೈಕೋರ್ಟ್ ನ್ಯಾಯವಾದಿ ನಾಗೇಂದ್ರ ನಾಯ್ಕ್ ಭಟ್ಕಳ ಕಾನೂನು ಸಲಹೆ ಸೂಚನೆಗಳನ್ನು ನೀಡಿದ್ದರು.

 


Share News

Leave a Reply

Your email address will not be published. Required fields are marked *