Breaking News

ಅಮಿತ್ ಶಾ ರಥಕ್ಕೆ ವಿದ್ಯುತ್ ಸ್ಪರ್ಶ; ಅಪಾಯದಿಂದ ಪಾರು!

Share News

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣಾ (Rajasthan Election) ಪ್ರಚಾರದಲ್ಲಿರುವ ಗೃಹ ಸಚಿವ ಅಮಿತ್‌ ಶಾ (Amit Shah) ಅಪಾಯದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ.

ಇದನ್ನೂ ಓದಿ: ಮಂಗಳೂರು: ಸಿಸಿಬಿ ಪೊಲೀಸರ ದಾಳಿ ;ಮೂವರು ಗಾಂಜಾ ಪೆಡ್ಲರ್ಸ್ ಗಳ ಬಂಧನ!

ಮಂಗಳವಾರ ರಾಜಸ್ಥಾನದ ನಾಗೌರ್‌ನಲ್ಲಿ ಅಮಿತ್ ಶಾ ರಥದಲ್ಲಿ (Chariot) ನಿಂತು ಪಕ್ಷದ ಪರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ರಥದ ಮೇಲಿನ ಭಾಗ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ರಥ ತಾಗಿದ ಕೂಡಲೇ ಕಿಡಿ ಹೊತ್ತಿಕೊಂಡಿದೆ.

ಕೂಡಲೇ ರಥದ ಹಿಂದೆ ಇದ್ದ ಇತರ ವಾಹನಗಳನ್ನು ತಕ್ಷಣವೇ ನಿಲ್ಲಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು.ಪರ್ಬತ್‌ಸರ್‌ನಲ್ಲಿ ಎರಡೂ ಬದಿಗಳಲ್ಲಿ ಅಂಗಡಿಗಳು ಮತ್ತು ಮನೆಗಳಿರುವ ಸಾಲಿನಲ್ಲಿ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆಯ ಬಳಿಕ ಶಾ ಅವರು ಮತ್ತೊಂದು ವಾಹನದ ಮೂಲಕ ಪರ್ಬತ್ಸರ್‌ಗೆ ತೆರಳಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ: ಕಡಬ : ಕಾಡಾನೆ ದಾಳಿಗೆ ಓರ್ವ ಬಲಿ!

ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ತಿಳಿಸಿದ್ದಾರೆ. ನವೆಂಬರ್‌ 25 ರಂದು ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು ಡಿಸೆಂಬರ್‌ 5 ರಂದು ಮತ ಎಣಿಕೆ ನಡೆಯಲಿದೆ.

WATCH VIDEO ON YOUTUBE:ಶುದ್ಧ ಗಾಣದ ಎಣ್ಣೆ ತೆಗೆಯುವ ಕಟಪಾಡಿಯ ಮಿಲ್!


Share News

Leave a Reply

Your email address will not be published. Required fields are marked *