Breaking News

ಇಸ್ರೇಲ್ ಮೇಲೆ ಪ್ಯಾಲೆಸ್ತಿನ್ ಹಮಾಸ್ ಉಗ್ರರಿಂದ ರಾಕೆಟ್ ದಾಳಿ ;ಯುದ್ಧದ ಸ್ಥಿತಿ ಘೋಷಿಸಿದ ಇಸ್ರೇಲ್…!

Share News

ಜೆರುಸಲೆಂ: ಉಕ್ರೇನ್ ಹಾಗೂ ರಷ್ಯಾ ನಡುವಿನ ಕದನ ಒಂದೂವರೆ ವರ್ಷ ದಾಟಿದರೂ ಮುಗಿಯುವ ಸೂಚನೆ ಕಾಣಿಸುತ್ತಿಲ್ಲ. ಇದರ ನಡುವೆ ಮತ್ತೊಂದು ಯುದ್ಧದ ಭೀತಿ ದಟ್ಟವಾಗಿದೆ. ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ಗಾಜಾ ಪಟ್ಟಿಯಿಂದ ಪ್ಯಾಲೆಸ್ಟೀನ್ ಹಮಾಸ್ ಬಂಡುಕೋರರು ಭೀಕರ ರಾಕೆಟ್ ದಾಳಿ ನಡೆಸಿದ್ದು, ಅದರ ಬೆನ್ನಲ್ಲೇ ಇಸ್ರೇಲ್ ‘ಯುದ್ಧದ ಸ್ಥಿತಿ’ ಘೋಷಿಸಿದೆ.

ಶನಿವಾರ ಹಬ್ಬದ ರಜೆಯ ಸಂದರ್ಭದಲ್ಲಿ ಮುಂಜಾನೆ 5000ಕ್ಕೂ ಅಧಿಕ ರಾಕೆಟ್‌ಗಳನ್ನು ಇಸ್ರೇಲ್ ಕಡೆ ಬಂಡುಕೋರರು ಉಡಾಯಿಸಿದ್ದಾರೆ. ಇದು ತನ್ನ ಮೊದಲ ದಾಳಿ ಎಂದು ಹಮಾಸ್ ಬಂಡುಕೋರರು ಹೇಳಿಕೊಂಡಿದ್ದಾರೆ. ಇಸ್ರೇಲ್‌ನಾದ್ಯಂತ ಎಚ್ಚರಿಕೆಯ ಸೈರನ್ ಮೊಳಗಿಸಲಾಗಿದೆ. ಹಮಾಸ್ ಬಂಡುಕೋರರು ಇಸ್ರೇಲ್ ಗಡಿಯೊಳಗೆ ನುಗ್ಗಿದ್ದಾರೆ ಎಂದು ರಕ್ಷಣಾ ಪಡೆಗಳು ಮಾಹಿತಿ ನೀಡಿವೆ. ದಾಳಿಗೆ ಪ್ಯಾರಾಗ್ಲೈಡರ್‌ಗಳನ್ನು ಕೂಡ ಬಳಸಿರುವುದನ್ನು ಇಸ್ರೇಲ್ ಬಿಡುಗಡೆ ಮಾಡಿರುವ ವಿಡಿಯೋಗಳು ತೋರಿಸಿವೆ.

ಇದನ್ನೂ ಓದಿ: ರಾಹುಲ್ ಗಾಂಧಿ ನವಯುಗದ ರಾವಣ ಎಂದ ಬಿಜೆಪಿ; ಕಾಂಗ್ರೆಸ್ ಆಕ್ರೋಶ!

ಶೀಘ್ರದಲ್ಲಿಯೇ ಭದ್ರತಾ ಮುಖ್ಯಸ್ಥರ ಸಭೆ ನಡೆಸುವುದಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ತನ್ನ ಕೃತ್ಯಗಳಿಗಾಗಿ ಹಮಾಸ್ ಭಾರಿ ಬೆಲೆ ತೆರಬೇಕಾಗಲಿದೆ ಎಂದು ನೆತನ್ಯಾಹು ಸರ್ಕಾರ ಎಚ್ಚರಿಕೆ ನೀಡಿದೆ. ಶನಿವಾರ ಮುಂಜಾನೆ ಹತ್ತಾರು ರಾಕೆಟ್‌ಗಳನ್ನು ಪ್ಯಾಲೆಸ್ಟೀನ್ ಉಗ್ರರು ಇಸ್ರೇಲ್ ಕಡೆ ಹಾರಿಸಿದ್ದಾರೆ. ಯುದ್ಧದ ಸನ್ನಿವೇಶ ನಿರ್ಮಾಣವಾಗಿರುವುದಾಗಿ ಘೋಷಣೆ ಮಾಡಿರುವ ಇಸ್ರೇಲ್, ನಾಗರಿಕರು ಮನೆಗಳ ಒಳಗೆ ಇರುವಂತೆ ಮನವಿ ಮಾಡಿದೆ.

“ಇಸ್ರೇಲ್ ಭೂ ಪ್ರದೇಶದ ಒಳಗೆ ಅನೇಕ ಉಗ್ರರು ನುಗ್ಗಿದ್ದಾರೆ. ಗಾಜಾ ಪಟ್ಟಿಯಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುತ್ತಿದ್ದು, ಜೆರುಸಲೆಂನಲ್ಲಿ ವಾಯು ದಾಳಿ ಸೈರನ್ ಮೊಳಗಿಸಲಾಗಿದೆ” ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಇಸ್ರೇಲಿ ಗಡಿ ಪಟ್ಟಣ ಸ್ಡೆರೊಟ್‌ನ ಒಳಗೆ ಸಮವಸ್ತ್ರ ಧರಿಸಿದ ಬಂದೂಕುಧಾರಿಗಳು ಓಡಾಡುವುದು ವಿಡಿಯೋಗಳಲ್ಲಿ ಕಂಡುಬಂದಿದೆ. ಗುಂಡಿನ ಚಕಮಕಿಯ ಸದ್ದು ಕೂಡ ಕೇಳಿಸಿದೆ. ಆದರೆ ಇವುಗಳ ಅಧಿಕೃತತೆ ಖಚಿತವಾಗಿಲ್ಲ.

ಇದನ್ನೂ ಓದಿ: ಆನ್ಲೈನ್ ಬೆಟ್ಟಿಂಗ್ ಕೇಸ್: ಕಪಿಲ್ ಶರ್ಮಾ, ಶ್ರದ್ಧಾ ಕಪೂರ್ ಸೇರಿದಂತೆ ಹಲವರಿಗೆ ಇಡಿ ನೋಟಿಸ್ ಜಾರಿ!

ಗಾಜಾದ ವಾಯು ಭಾಗದಲ್ಲಿ ರಾಕೆಟ್‌ಗಳು ನುಗ್ಗುವ ಸದ್ದುಗಳು, ಟೆಲ್ ಅವಿವ್‌ನಲ್ಲಿ ಸೈರನ್‌ಗಳ ಸದ್ದು ಕೇಳಿಬಂದಿದೆ. ಸುಮಾರು 30 ನಿಮಿಷಗಳ ಕಾಲ ಈ ಶಬ್ಧ ತೀವ್ರವಾಗಿತ್ತು.

ದಕ್ಷಿಣ ಇಸ್ರೇಲ್‌ನಲ್ಲಿ ಕಟ್ಟಡವೊಂದಕ್ಕೆ ರಾಕೆಟ್ ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ 70 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರಾಕೆಟ್‌ನ ಭಾಗವೊಂದು ತಗುಲಿ 20 ವರ್ಷದ ಯುವಕನಿಗೆ ಗಾಯವಾಗಿದೆ ಎಂದು ಇಸ್ರೇಲ್‌ನ ಮಾಗೆನ್ ಡೇವಿಡ್ ಆಡೊಮ್ ರಕ್ಷಣಾ ಸಂಸ್ಥೆ ತಿಳಿಸಿದೆ.

ಇಸ್ರೇಲ್ ಮೇಲೆ ಶನಿವಾರ ಮುಂಜಾನೆ ‘ಆಪರೇಷನ್ ಅಲ್- ಅಕ್ಸಾ ಸ್ಟಾರ್ಮ್’ ಆರಂಭಿಸಲು 5 ಸಾವಿರ ರಾಕೆಟ್‌ಗಳನ್ನು ಉಡಾಯಿಸಲಾಗಿದೆ ಎಂದು ದೀಫ್ ಹೇಳಿದ್ದಾನೆ. ಇಸ್ರೇಲ್ ಅನ್ನು ಎದುರಿಸಲು ಎಲ್ಲಾ ಪ್ಯಾಲೆಸ್ಟೀನಿಯರು ಮುಂದಾಗಬೇಕು ಕೋರಿದ್ದಾನೆ.

ದೀಫ್‌ನನ್ನು ಹತ್ಯೆ ಮಾಡಲು ಇಸ್ರೇಲ್ ಅನೇಕ ಬಾರಿ ದಾಳಿಗಳನ್ನು ನಡೆಸಿತ್ತು. ಆದರೆ ಅದರ ಪ್ರಯತ್ನಗಳು ಫಲ ಕೊಟ್ಟಿಲ್ಲ. ಈತ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ರೆಕಾರ್ಡಿಂಗ್ ಮೂಲಕ ತನ್ನ ಭಾಷಣಗಳನ್ನು ಬಿಡುಗಡೆ ಮಾಡುತ್ತಾನೆ.

WATCH VIDEO ON YOUTUBE: ತಾಸೆಯ ಪೆಟ್ಟಿಗೆ ಭರ್ಜರಿ ಹುಲಿ ಕುಣಿತ ಮಾಡಿದ ಶಿಕ್ಷಕರು ಹಾಗೂ ಮಕ್ಕಳು!


Share News

Leave a Reply

Your email address will not be published. Required fields are marked *