Breaking News

ಏರಿಕೆ ಕಂಡ ಅಡಿಕೆ ಧಾರಣೆ; ರೈತರ ಮುಖದಲ್ಲಿ ಸಂತೋಷ!

Share News

ತೀವ್ರ ಕುಸಿತ ಕಂಡ ಬಳಿಕ ಅಡಿಕೆ ಧಾರಣೆ ಸದ್ಯ ಅಲ್ಪ ಏರಿಕೆ ಕಂಡಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ಭೂತಾನ್‌ನಿಂದ ಹಸಿ ಅಡಿಕೆ ಆಮದು ಸುದ್ದಿಯಾದ ಬಳಿಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕುಸಿತ ಕಂಡಿದ್ದು ರೈತರಲ್ಲಿ ಆತಂಕ ಮೂಡಿಸಿತ್ತು. ಆದರೆ ಈ ವಾರದ ಆರಂಭದಲ್ಲೇ ಅಲ್ಪ ಏರಿಕೆ ಕಂಡಿರುವುದು ಅಡಿಕೆ ಬೆಳೆಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ.
ಸೋಮವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ 42499 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ 50,599 ರೂಪಾಯಿಗಳಾಗಿತ್ತು. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 44,599 ರೂಪಾಯಿ ಆಗಿದ್ದರೆ, ಗರಿಷ್ಠ ಧಾರಣೆ 49119 ರೂಪಾಯಿ ಆಗಿತ್ತು.
ಬೆಂಗಳೂರು ಮಾರುಕಟ್ಟೆಯಲ್ಲಿ ಸೋಮವಾರ ಅಡಿಕೆ ಧಾರಣೆ ಕನಿಷ್ಠ 55 ಸಾವಿರ ರೂಪಾಯಿ ಇದ್ದರೆ ಗರಿಷ್ಠ 60 ಸಾವಿರ ರೂಪಾಯಿ ಆಗಿತ್ತು. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಟ 33,269 ರೂಪಾಯಿ ಇದ್ದರೆ ಗರಿಷ್ಠ 49,999 ರೂಪಾಯಿ ಆಗಿತ್ತು. ಯಲ್ಲಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕ್ವಿಂಟಾಲ್‌ಗೆ ಕನಿಷ್ಠ48,280 ರೂಪಾಯಿ ಗರಿಷ್ಠ 52,899 ರೂಪಾಯಿ ಆಗಿತ್ತು.

Share News

Leave a Reply

Your email address will not be published. Required fields are marked *