Breaking News

ಭಾರತಕ್ಕೆ ಬಂದ ಪಾಕ್‌ ಚೆಲುವೆ; ಜನವರಿಯಲ್ಲಿ ಮದುವೆ..!

Share News

ಕರಾಚಿ ನಿವಾಸಿ ಜವೇರಿಯಾ ಖಾನುಮ್ ಅಮೃತಸರ ಜಿಲ್ಲೆಯ ಅಟ್ಟಾರಿಯಿಂದ ಭಾರತಕ್ಕೆ ಬಂದಿದ್ದಾರೆ. ಪಾಕಿಸ್ತಾನದ ಮಹಿಳೆಯೊಬ್ಬರು (Pakistan Women) ಭಾರತಕ್ಕೆ ಬಂದು ಪ್ರಿಯಕರನ ಸೇರಿದ್ದಾರೆ. ಆಕೆ ನಿಶ್ಚಿತ ವರ ಸಮೀರ್ ಖಾನ್‌ನನ್ನು ಸೇರಿದ್ದಾಳೆ. ವಾಘಾ-ಅಟ್ಟಾರಿ ಅಂತಾರಾಷ್ಟ್ರೀಯ ಗಡಿಯಿಂದ ಭಾರತಕ್ಕೆ ಬಂದಿದ್ದು, ಕೋಲ್ಕತ್ತಾ ನಿವಾಸಿ ಸಮೀರ್‌ನನ್ನು ಮುಂದಿನ ವರ್ಷದ ಜನವರಿಯಲ್ಲಿ ಮದುವೆಯಾಗಲಿದ್ದಾರೆ.

ಇದನ್ನೂ ಓದಿ: ಉಳ್ಳಾಲ : ಸಾರ್ವಜನಿಕ ರಸ್ತೆ ಬದಿಯಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಯತ್ನ- ಇಬ್ಬರ ಬಂಧನ

ಖಾನುಮ್‌ಗೆ 45 ದಿನಗಳ ವೀಸಾವನ್ನು ನೀಡಲಾಗಿದೆ. ಕೋವಿಡ್ ಸಾಂಕ್ರಾಮಿಕವು ಭಾರತಕ್ಕೆ ಬರುವ ಆಕೆಯ ಯೋಜನೆಗೆ ಐದು ವರ್ಷಗಳ ಕಾಲ ಅಡ್ಡಗಾಲಾಗಿತ್ತು. ಮುಂದಿನ ವರ್ಷ ಜನವರಿಯಲ್ಲಿ ನಾವು ಮದುವೆಯಾಗುತ್ತೇವೆ ಎಂದು ಮಾಧ್ಯಮಗಳಿಗೆ ಜೋಡಿ ಪ್ರತಿಕ್ರಿಯಿಸಿದೆ.

ನನಗೆ 45 ದಿನಗಳ ವೀಸಾ ನೀಡಲಾಗಿದೆ. ನಾನು ಇಲ್ಲಿಗೆ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ. ಆಗಮನದ ನಂತರ ನಾನು ಇಲ್ಲಿ ತುಂಬಾ ಪ್ರೀತಿಯನ್ನು ಪಡೆಯುತ್ತಿದ್ದೇನೆ. ಐದು ವರ್ಷದ ನಂತರ ನನಗೆ ವೀಸಾ ಸಿಕ್ಕಿದೆ. ಇದನ್ನು ನಂಬಲಾಗುತ್ತಿಲ್ಲ ಎಂದು ಖಾನುಮ್‌ ತಿಳಿಸಿದ್ದಾರೆ.

ಇದನ್ನೂ ಓದಿ: 4 ವರ್ಷದ ಮಗುವಿನ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಈಚೆಗೆ ಪಾಕಿಸ್ತಾನದಿಂದ ಭಾರತಕ್ಕೆ ಪ್ರೇಮಿಯನ್ನು ಅರಸಿ ಬಂದು ಸೀಮಾ ಹೈದರ್‌ ಸುದ್ದಿಯಾಗಿದ್ದರು. ಭಾರತದಿಂದ ಅಂಜು ಎಂಬಾಕೆ ಪಾಕಿಸ್ತಾನಕ್ಕೆ ಹೋಗಿ ಪ್ರಿಯಕರನ ಸೇರಿದಳು. ಅದೇ ಮಾದರಿಯಲ್ಲಿ ಮತ್ತೊಂದು ಸುದ್ದಿ ಈಗ ಸದ್ದು ಮಾಡುತ್ತಿದೆ.

WATCH VIDEO ON YOUTUBE: ನಾಗನ ಆರಾಧನೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶ ನಾಗಬನಗಳದ್ದು: ತಮ್ಮಣ್ಣ ಶೆಟ್ಟಿ


Share News

Leave a Reply

Your email address will not be published. Required fields are marked *