Breaking News

ಆಯಿಲ್‌ ತುಂಬಿದ್ದ ಟ್ಯಾಂಕರ್‌ ಫ್ಲೈಓವರ್‌ನ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿ – ಧಗಧಗಿಸಿದ ಬೆಂಕಿ

Share News

ಚಂಡೀಗಢ: ಪಂಜಾಬ್‌ನ  ಲೂಧಿಯಾನದಲ್ಲಿ  (Punjab’s Ludhiana)  ಫ್ಲೈಓವರ್‌ ಮೇಲೆ ಬೆಂಕಿಯ ಕೆನ್ನಾಲಿಗೆ ಧಗಧಗಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್‌ ವೈರಲ್‌ ಆಗುತ್ತಿದೆ.

ಲೂಧಿಯಾನದ ಖನ್ನಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯಿಲ್‌ ತುಂಬಿ ಹೊರಟಿದ್ದ ಟ್ಯಾಂಕರ್‌ (Oil Tanker) ಫ್ಲೈಓವರ್‌ನ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಪರಿಣಾಮ ಬೆಂಕಿ ಹೊತ್ತಿ ಉರಿದಿದೆ.

ಇದನ್ನೂ ಓದಿ: ಸ್ಕೂಟಿ ಸಮೇತ ಮಲ್ಪೆ ಸಮುದ್ರಕ್ಕೆ ಬಿದ್ದ ಮೀನುಗಾರ ಮೃತ್ಯು..!

ಘಟನೆಯ ಹಿನ್ನೆಲೆಯಲ್ಲಿ ಕೆಲ ಕಾಲ ಆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು ಫ್ಲೈಓವರ್‌ನಲ್ಲಿ ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಹೊತ್ತಿ ಉರಿಯುತ್ತಿದ್ದರೆ,ಇದರ ಕೆಳಗೆ ವಾಹನಗಳು ಚಲಿಸುತ್ತಿದ್ದವು. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲ.

ಘಟನೆಯ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿವೆ. ಘಟನೆಯ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸಪಟ್ಟಿದ್ದಾರೆ. ಈ ಮೂಲಕ ಭಾರೀ ಅನಾಹುತವನ್ನು ತಡೆಯಲು ಪ್ರಯತ್ನಿಸಿವೆ.

ಇದನ್ನೂ ಓದಿ: ಮದ್ಯ ಪ್ರಿಯರಿಗೆ ಶಾಕ್ ; ಮದ್ಯದ ದರ ಏರಿಕೆ.!


Share News

Leave a Reply

Your email address will not be published. Required fields are marked *