Breaking News

14 ಸಾವಿರ ಉದ್ಯೋಗಿಗಳನ್ನು ವಜಾ ಗೊಳಿಸಿದ ನೋಕಿಯಾ!

Share News

ಯುಎಸ್ ಮತ್ತು ಯುರೋಪಿಯನ್​​ನಂತಹ ಮಾರುಕಟ್ಟೆಗಳಲ್ಲಿ 5G ಮಾರಾಟ ನಿಧಾನಗೊಂಡ ಕಾರಣ ಹಾಗೂ ಮೊಬೈಲ್ ಮೂಲಸೌಕರ್ಯದಲ್ಲಿ ಹೂಡಿಕೆ ಕಡಿಮೆಯಾದ ಕಾರಣ ವೆಚ್ಚ ಕಡಿಮೆ ಮಾಡಲು ಮತ್ತು ಉಳಿತಾಯವನ್ನು ಹೆಚ್ಚಿಸಲು ನೋಕಿಯಾ (Nokia Layoff) ತನ್ನ 14 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಸಿಬ್ಬಂದಿ ವೆಚ್ಚದಲ್ಲಿ 10% ರಿಂದ 15% ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ನೋಕಿಯಾ ತನ್ನ ಮುಂದಿನ ಅಂದರೆ 2024, 2025ರಲ್ಲಿ ಎಷ್ಟು ಉಳಿತಾಯ ಮಾಡಬೇಕು ಎಂಬುದನ್ನು ಲೆಕ್ಕಚಾರ ಹಾಕಿಕೊಂಡಿದೆ. ಈ ಕಾರಣಕ್ಕೆ ಈಗಿನಿಂದಲೇ ಉಳಿತಾಯಕ್ಕಾಗಿ ಉದ್ಯೋಗಿಗಳ ವಜಾದ ನಿರ್ಧಾರವನ್ನು ತೆಗೆದುಕೊಂಡಿದೆ.

ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ ಎಂ ಇಬ್ರಾಹಿಂ ವಜಾ ; ಅಧ್ಯಕ್ಷರನ್ನಾಗಿ ಎಚ್. ಡಿ ಕುಮಾರಸ್ವಾಮಿ ನೇಮಕ!

ಮುಂದಿನ ವರ್ಷ € 400 ಮಿಲಿಯನ್ (₹ 33,30,61,60,000.00) ಮತ್ತು 2025 ರಲ್ಲಿ ಹೆಚ್ಚುವರಿ €300 ಮಿಲಿಯನ್ (₹ 24,97,94,70,000) ಉಳಿತಾಯ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದೆ. ನೋಕಿಯಾದ ವರದಿ ವಿಭಿನ್ನ ಮಾಹಿತಿಯನ್ನು ನೀಡಿದೆ. ಒಂದು ವರದಿಯಲ್ಲಿ ಮೂರನೇ ತ್ರೈಮಾಸಿಕದಲ್ಲಿ ಹೊಂದಾಣಿಕೆಯ ಕಾರ್ಯಾಚರಣೆಯ ಲಾಭವು €424 ಮಿಲಿಯನ್ (₹ 35,30,43,17,600.00) ಆಗಿತ್ತು. ಆದರೆ ಬ್ಲೂಮ್‌ಬರ್ಗ್ ಸಮೀಕ್ಷೆಯ ಪ್ರಕಾರ 545.2 ಮಿಲಿಯನ್‌ಗೆ (₹ 45,39,60,23,480.00) ಹೋಲಿಸುತ್ತದೆ.

ಇದನ್ನೂ ಓದಿ: ಗೆಜ್ಜೆ ಗಿರಿಗೆ ಇಂದಿನಿಂದ ಹೊರಡಲಿದೆ ಕೆಎಸ್ಆರ್ಟಿಸಿ (ksrtc)ಯ ವಿಶೇಷ ಪ್ಯಾಕೇಜ್ ಟೂರ್ ಬಸ್

ನಾವು 2023ರ ನಿವ್ವಳ ಮಾರಾಟ ಶ್ರೇಣಿಯಲ್ಲಿ ತುಂಬಾ ಕೆಳ ಹಂತದಲ್ಲಿದ್ದೇವೆ. ಇದನ್ನು ಹೇಗಾದರು ಮಾರ್ಜಿನ್ ಶ್ರೇಣಿಗೆ ತರಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೆಕ್ಕಾ ಲುಂಡ್‌ಮಾರ್ಕ್ ತಿಳಿಸಿದ್ದಾರೆ. ಕಂಪನಿಯು ಈ ಬಗ್ಗೆ ಜುಲೈನಲ್ಲಿ ಡೌನ್‌ಗ್ರೇಡ್ ವಿಚಾರಣೆ ನಡೆಸಿತ್ತು. ಜತೆಗೆ ಈ ಬಗ್ಗೆ ವರದಿಯನ್ನು ಕೂಡ ನೀಡಿತ್ತು. ಇದರ ಪ್ರಕಾರ ಕಂಪನಿಯು ತುಂಬಾ ಲಾಭದಾಯಕವಾಗಿಲ್ಲ ಹಾಗೂ ಮುಂದಿನ ಎರಡು ವರ್ಷಗಳಿಗೆ ಅಗತ್ಯವಾಗಿ ಉಳಿತಾಯ ಮಾಡಬೇಕಿದೆ. ಇದಕ್ಕಾಗಿ ಉಳಿತಾಯ ಕಡೆ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಗಮನ ನೀಡಬೇಕು ಎಂದು ಹೇಳಿದ್ದಾರೆ.

US ಮತ್ತು ಯುರೋಪಿಯನ್​​ನ ಮಾರುಕಟ್ಟೆಗಳ ನಿರ್ವಾಹಕರ ಬಂಡವಾಳ ವೆಚ್ಚವನ್ನು ಕಡಿಮೆ ಮಾಡಲು ಹಾಗೂ ದಾಸ್ತಾನುಗಳನ್ನು ಸರಿಹೊಂದಿಸಲು 5G ಉಪಕರಣಗಳ ತಯಾರಕರು ಹೆಣಗಾಡುತ್ತಿದ್ದಾರೆ. ನಮ್ಮ ಪ್ರತಿಸ್ಪರ್ಧಿಗಳು ಮುಂದೆ ಹೋಗುತ್ತಿದ್ದಾರೆ. ಈ ಕಾರಣಕ್ಕೆ ನಮ್ಮ ವೆಚ್ಚ ಕಡಿಮೆ ಆಗಬೇಕಿದೆ. ಜತೆಗೆ ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕಿದೆ ಎಂದು ನೋಕಿಯಾ ಹೇಳಿದೆ.

WATCH VIDEO ON YOUTUBE: ಮಧ್ಯದ ಬಹುದೊಡ್ಡ ಎಕ್ಸಿಬಿಷನ್ ಸರ್ವರ ಗಮನ ಸೆಳೆದಿದೆ!


Share News

Leave a Reply

Your email address will not be published. Required fields are marked *