Breaking News

ಪದವಿ ಶಿಕ್ಷಣಕ್ಕೆ ಇನ್ನು ಮುಂದೆ ಶುಲ್ಕ ಹೆಚ್ಚಳ…!

Share News

ಬೆಂಗಳೂರು: ರಾಜ್ಯ ಸರ್ಕಾರ ವಿದ್ಯುತ್ ಬಿಲ್ ಹಾಗೂ ನೀರಿನ ಬಿಲ್ ಹೆಚ್ಚಳ ಮಾಡಿದ ಬಳಿಕ ಪದವಿ ಶಿಕ್ಷಣ ಶುಲ್ಕವನ್ನು 10% ಹೆಚ್ಚಳ (College Fees Hike) ಮಾಡಿ ಜನರಿಗೆ ಶಾಕ್ ನೀಡಿದೆ.

ಇದನ್ನೂ ಓದಿ: ಆಯಿಲ್‌ ತುಂಬಿದ್ದ ಟ್ಯಾಂಕರ್‌ ಫ್ಲೈಓವರ್‌ನ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿ – ಧಗಧಗಿಸಿದ ಬೆಂಕಿ

ವಿಶ್ವವಿದ್ಯಾಲಯಗಳು ಸಲ್ಲಿಸಿದ್ದ ಶುಲ್ಕ ಹೆಚ್ಚಳ ಪ್ರಸ್ತಾವನೆಗೆ ಉನ್ನತ ಶಿಕ್ಷಣ ಇಲಾಖೆ (Karnataka Higher Education Council) ಒಪ್ಪಿಗೆ ಕೊಟ್ಟಿದೆ. ಇದರಿಂದ ವಿಶ್ವವಿದ್ಯಾಲಯಗಳು ಹಾಗೂ ಪದವಿ ಕಾಲೇಜ್‍ಗಳ ಶಿಕ್ಷಣ ಶುಲ್ಕವನ್ನು 10% ಹೆಚ್ಚಿಸಲು ಸರ್ಕಾರದಿಂದ ಅನುಮತಿ ಸಿಕ್ಕಂತಾಗಿದೆ. ಪ್ರಸ್ತುತ ವರ್ಷದಿಂದಲೇ ಶುಲ್ಕ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ.

ಇದನ್ನೂ ಓದಿ: ಪುತ್ತೂರು: ಮೈ ಮೇಲೆ ಪ್ರೇತ ಬರುತ್ತೆ ಎಂದು ಪತ್ನಿಯನ್ನು 3 ತಿಂಗಳಿಂದ ಕೊಠಡಿಯಲ್ಲಿ ದಿಗ್ಬಂಧನ ಮಾಡಿದ ಪತಿ

ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಏಕರೂಪ ಶುಲ್ಕ ತಜ್ಞರ ಸಮಿತಿ ನೀಡಿದ್ದ ವರದಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಯುವನಿಧಿಯಲ್ಲಿ ಕೊಡುತ್ತಿರುವ ಹಣ ಮತ್ತೊಂದು ರೀತಿಯಲ್ಲಿ ಸರ್ಕಾರ ವಾಪಸ್ ಪಡೆಯಲು ತೀರ್ಮಾನಿಸಿದಂತಿದೆ. ಇನ್ನು ಮುಂದೆ ರಾಜ್ಯದಲ್ಲಿ ಪದವಿ ಶಿಕ್ಷಣವೂ ದುಬಾರಿಯಾಗಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!


Share News

Leave a Reply

Your email address will not be published. Required fields are marked *