Breaking News

ನಿಫಾ ವೈರಸ್ ಕೋವಿಡ್‌ಗೆ ಹೋಲಿಸಿದರೆ ಮರಣ ಪ್ರಮಾಣ ಹೆಚ್ಚು-ಐಸಿಎಂಆರ್

Share News

ನವದೆಹಲಿ, ಸೆಪ್ಟೆಂಬರ್ 16: ಕೋವಿಡ್-19 ಸೋಂಕಿತರಿಗೆ ಹೋಲಿಸಿದರೆ ನಿಫಾ (Nipah) ವೈರಸ್ ಸೋಂಕಿತರಲ್ಲಿ ಮರಣ ಪ್ರಮಾಣವು ತುಂಬಾ ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮುಖ್ಯಸ್ಥ ಡಾ ರಾಜೀವ್ ಬಹ್ಲ್ ಶುಕ್ರವಾರ ಹೇಳಿದ್ದಾರೆ. ಡಾ ಬಹ್ಲ್ ಅವರ ಪ್ರಕಾರ, ಕೋವಿಡ್‌ನ ಶೇ 2-3 ಮರಣ ಪ್ರಮಾಣಕ್ಕೆ ಹೋಲಿಸಿದರೆ ನಿಫಾ ವೈರಸ್ ಸೋಂಕಿನಿಂದ ಮರಣ ಪ್ರಮಾಣ ಶೇಕಡಾ 40 ರಿಂದ 70 ರಷ್ಟಿದೆ. ಶುಕ್ರವಾರ ಕೇರಳದ ಕೋಝಿಕ್ಕೋಡ್‌ನಲ್ಲಿ ನಿಫಾ ವೈರಸ್‌ನ ಹೊಸ ಪ್ರಕರಣ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6 ಕ್ಕೆ ತಲುಪಿದೆ.ಕೇರಳದಲ್ಲಿ ಪ್ರಕರಣಗಳ ಹೆಚ್ಚಳದ ಮಧ್ಯೆ, ನಿಫಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಇನ್ನೂ 20 ಡೋಸ್ ಮೊನೊಕ್ಲೋನಲ್ ಆಂಟಿಬಾಡಿಗಳನ್ನು ಪೂರೈಸುವಂತೆ ಭಾರತವು ಆಸ್ಟ್ರೇಲಿಯಾಕ್ಕೆ ಮನವಿ ಮಾಡಿದೆ.

ಚಾರ್ಮಾಡಿ 100 ಅಡಿ ಪ್ರಪಾತಕ್ಕೆ ಬಿದ್ದ ಲಾರಿ ; ಮರದ ಸಹಾಯದಿಂದ ಡ್ರೈವರ್ ಮತ್ತು ಕ್ಲೀನರ್ ಸೇಫ್.!

ದಕ್ಷಿಣದ ರಾಜ್ಯದಲ್ಲಿ ನಿಫಾ ವೈರಸ್ ಸೋಂಕು ಪ್ರಮಾಣ ಹೆಚ್ಚುತ್ತಿರುವುದು ಮತ್ತು ಕೋವಿಡ್‌ಗೆ ಹೋಲಿಸಿದರೆ ಹೆಚ್ಚಿನ ಮರಣ ಪ್ರಮಾಣ ಹೊಂದಿರುವುದರಿಂದ ಅದರ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಐಸಿಎಂಆರ್ ತಿಳಿಸಿದೆನಾವು 2018 ರಲ್ಲಿ ಆಸ್ಟ್ರೇಲಿಯಾದಿಂದ ಕೆಲವು ಡೋಸ್ ಮೊನೊಕ್ಲೋನಲ್ ಆಂಟಿಬಾಡಿಗಳನ್ನು ಪಡೆದುಕೊಂಡಿದ್ದೆವು. ಪ್ರಸ್ತುತ, ಕೇವಲ 10 ರೋಗಿಗಳಿಗೆ ಮಾತ್ರ ಸಾಕಾಗುವಷ್ಟು ಲಭ್ಯವಿವೆ ಎಂದು ಡಾ ರಾಜೀವ್ ಬಹ್ಲ್ ತಿಳಿಸಿದ್ದಾರೆ.

ಹೊಟೇಲ್ ನಲ್ಲಿ ರೂಂ ಕೊಟ್ಟು ಪ್ರೇಮಿಗಳ ಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ; ಇಬ್ಬರ ಬಂಧನ!

ವಿದೇಶಗಳಲ್ಲಿ ನಿಫಾ ವೈರಸ್‌ಗೆ ತುತ್ತಾದ 14 ಜನರು ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯನ್ನು ಪಡೆದ ನಂತರ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ಡಾ ಬಹ್ಲ್ ಹೇಳಿದ್ದಾರೆ.ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಕೋಝಿಕ್ಕೋಡ್‌ನ ಎಲ್ಲಾ ಶಿಕ್ಷಣ ಸಂಸ್ಥೆಗಳು ಇಂದಿನಿಂದ ಒಂದು ವಾರದವರೆಗೆ ರಜೆ ಘೋಷಿಸಿವೆ.

ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಪರ್ಕ ಪಟ್ಟಿ 1,080ಕ್ಕೆ ಏರಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ಹೇಳಿದ್ದಾರೆ. ಇವರಲ್ಲಿ 327 ಮಂದಿ ಆರೋಗ್ಯ ಕಾರ್ಯಕರ್ತರಾಗಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಸೈನಿಕರಿಗೆ ಫ್ರೀಯಾಗಿ ಚಹಾ ನೀಡುವ ಅಂಗಡಿಯ ವಿಡಿಯೋ!


Share News

Leave a Reply

Your email address will not be published. Required fields are marked *