Breaking News

ಚಾರ್ಮಾಡಿ 100 ಅಡಿ ಪ್ರಪಾತಕ್ಕೆ ಬಿದ್ದ ಲಾರಿ ; ಮರದ ಸಹಾಯದಿಂದ ಡ್ರೈವರ್ ಮತ್ತು ಕ್ಲೀನರ್ ಸೇಫ್.!

Share News

ಕೊಟ್ಟಿಗೆಹಾರ: ಕಳೆದ ಕೆಲ ದಿನಗಳಿಂದ ನಿರಂತರ ಸುರಿಯುತಿದ್ದ ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಆವರಿಸಿಕೊಂಡಿದ್ದು ಪರಿಣಾಮ ಲಾರಿಯೊಂದು ನೂರು ಅಡಿ ಪ್ರಪಾತಕ್ಕೆ ಉರುಳಿಬಿದ್ದ ಘಟನೆ ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಹೊಟೇಲ್ ನಲ್ಲಿ ರೂಂ ಕೊಟ್ಟು ಪ್ರೇಮಿಗಳ ಖಾಸಗಿ ವಿಡಿಯೋ ಲೀಕ್ ಮಾಡುವ ಬೆದರಿಕೆ; ಇಬ್ಬರ ಬಂಧನ!

ಶುಕ್ರವಾರ ರಾತ್ರಿ ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲ್ ತುಂಬಿದ ಲಾರಿ ಚಾರ್ಮಾಡಿ ಘಾಟಿಯಲ್ಲಿ ಆವರಿಸಿದ ದಟ್ಟ ಮಂಜಿನಿಂದ ದಾರಿ ಕಾಣದೆ 100 ಅಡಿ ಪ್ರಪಾತಕ್ಕೆ ಬಿದ್ದಿದೆ ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಗೆ ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿದ್ದಾರೆ.

ನಾಲ್ಕನೇ ಹಂತದ ಕಕ್ಷೆ ಬದಲಾವಣೆ ಪೂರ್ಣಗೊಳಿಸಿದ Aditya L1

ಇಬ್ಬರ ಪ್ರಾಣ ಉಳಿಸಿದ ಮರ:
ಲಾರಿ ತಡೆಗೋಡೆಗೆ ಡಿಕ್ಕಿ ಹೊಡೆದು ನೂರು ಅಡಿ ಪ್ರಪಾತಕ್ಕೆ ಉರುಳಿದೆ ಈ ವೇಳೆ ಅಲ್ಲಿ ಇದ್ದ ದೈತ್ಯ ಮರಕ್ಕೆ ಲಾರಿ ಸಿಲುಕಿಕೊಂಡ ಪರಿಣಾಮ ಸಂಭವನೀಯ ಅವಘಡ ತಪ್ಪಿದೆ ಒಂದು ವೇಳೆ ಲಾರಿ ಮರಕ್ಕೆ ಸಿಕ್ಕಿಕೊಳ್ಳದಿದ್ದಲ್ಲಿ ಸಾವಿರ ಅಡಿ ಪ್ರಪಾತಕ್ಕೆ ಹೋಗಿ ಬೀಳುತ್ತಿತ್ತು ಎನ್ನಲಾಗಿದೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಸೈನಿಕರಿಗೆ ಫ್ರೀಯಾಗಿ ಚಹಾ ನೀಡುವ ಅಂಗಡಿಯ ವಿಡಿಯೋ!


Share News

Leave a Reply

Your email address will not be published. Required fields are marked *