Breaking News

ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಬಾಂಗ್ಲಾ ವಲಸಿಗರು ; NIA ತನಿಖೆ ವೇಳೆ ಬಹಿರಂಗ!

Share News

ಬೆಂಗಳೂರು, ನ.10: ಅಕ್ರಮವಾಗಿ ಬಾಂಗ್ಲಾ ವಲಸಿಗರನ್ನು ನಗರಕ್ಕೆ (Bengaluru) ಕರೆತರುತ್ತಿದ್ದ 11 ಜನರನ್ನು ಬಂಧಿಸಿ ತನಿಖೆ ನಡೆಸುತ್ತಿರುವ ಎನ್​ಐಎ (NIA) ಅಧಿಕಾರಿಗಳಿಗೆ, ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಅಕ್ರಮವಾಗಿ ಬಂದಿರುವುದು ತಿಳಿದುಬಂದಿದೆ. ಹೀಗಾಗಿ ಬಂಧಿತರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದೆ ಬೆಂಗಳೂರು ಹಾಗೂ ಹೊರವಲಯದ ಹಲವು ಕಡೆಗಳಲ್ಲಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಮೇಲೆ ಎನ್​ಐಎ ದಾಳಿ ಮಾಡಿತ್ತು. ಈ ವೇಳೆ ಅಕ್ರಮವಾಗಿ ನಗರಕ್ಕೆ ಕರೆತರುತ್ತಿದ್ದ 11 ಜನರನ್ನು ಅಧಿಕಾರಿಗಳು ಬಂಧಿಸಿ ಅಕ್ರಮ ವಲಸಿಗರ ಮಾಹಿತಿ ಕಲೆ ಹಾಕಿದ್ದರು.

ಇದನ್ನೂ ಓದಿ: ಅಕ್ಷಯ್‌ ಕಲ್ಲೇಗ ಹತ್ಯೆ ಪ್ರಕರಣ: ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ

ಇದುವರೆಗಿನ ತನಿಖೆ ವೇಳೆ ಸುಮಾರು 10 ಸಾವಿರಕ್ಕೂ ಅಧಿಕ ಜನ ಅಕ್ರಮವಾಗಿ ಬಂದಿರುವುದು ಬೆಳಕಿಗೆ ಬಂದಿದೆ. 11 ಜನರ ವಿಚಾರಣೆ ವೇಳೆ ಮಾಸ್ಟರ್ ಮೈಂಡ್ ಜಾಕಿರ್ ಹುಸೇನ್ ಹೆಸರನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಈತನ ಸೂಚನೆಯಂತೆ ಅನಧಿಕೃತವಾಗಿ ನಗರಕ್ಕೆ ಕರೆತರಲಾಗುತ್ತಿತ್ತು ಎಂದು ಹೇಳಿದ್ದಾರೆ. ಇತ್ತ, ಎನ್​​ಐಎ ದಾಳಿ ಆಗುವ ವೇಳೆ ಆರೋಪಿ ಜಾಕಿರ್ ಹುಸೇನ್ ಪರಾರಿಯಾಗಿದ್ದಾನೆ.

ಆಧಾರ್ ಕಾರ್ಡ್, ವೋಟರ್ ಐಡಿ ಪತ್ತೆ

ಎನ್​ಐಎ ದಾಳಿ ವೇಳೆ ಮತ್ತೊಂದು ಸ್ಫೋಟಕವಾದ ವಿಚಾರ ಬೆಳಕಿಗೆ ಬಂದಿದೆ. ಬಹುತೇಕ ಬಾಂಗ್ಲಾ ಪ್ರಜೆಗಳ ಬಳಿ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಪತ್ತೆಯಾಗಿದೆ. ಹೀಗಾಗಿ ಐಡಿ ಕಾರ್ಡ್ ಮಾಡಿಕೊಟ್ಟಿದ್ದು ಯಾರು ಎಂಬುದನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ರಾಬರಿ, ಡಕಾಯತಿಗೆ ಪ್ಲ್ಯಾನ್

ಅಕ್ರಮವಾಗಿ ಬಾಂಗ್ಲಾ ವಲಸಿಗರನ್ನು ಕರೆತಂದು ಆರೋಪಿಗಳು ರಾಬರಿ, ಡಕಾಯತಿ ನಡೆಸಲು ಫ್ಲಾನ್ ಮಾಡಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಕೆಲವರಿಗೆ ರಾಬರಿ ಡಕಾಯತಿಗಾಗಿ ತರಬೇತಿ ಕೂಡ ನೀಡಿದ್ದರು ಎನ್ನಲಾಗಿದೆ. ಇನ್ನೂ ಕೆಲವರನ್ನು ವೇಶ್ಯಾವಾಟಿಕೆಯಲ್ಲಿ ಸೇರಿಸಲು ಪ್ಲ್ಯಾನ್ ನಡೆದಿತ್ತು.

ಈ ಸಂಬಂಧ ಆರೋಪಿಗಳ ಪ್ಲ್ಯಾನ್ ಬಗ್ಗೆ ಮಾತ್ರ ಬಾಯಿಬಿಡುತ್ತಿರುವ ಆರೋಪಿಗಳು, ಮಾಡಿದವರ ಹೆಸರನ್ನು ಬಾಯಿ ಬಿಡುತ್ತಿಲ್ಲ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಸದ್ಯ ಎನ್​ಐಎ ಅಧಿಕಾರಿಗಳು 11 ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Vedio : ಎಕ್ಸ್‌ಪ್ರೆಸ್‌ವೇನಲ್ಲಿ ಸ್ಲೀಪರ್ ಬಸ್‌ಗೆ ಬೆಂಕಿ ತಗುಲಿ 2 ಸಚಿವ ದಹನ, 12 ಜನರಿಗೆ ಗಾಯ


Share News

Leave a Reply

Your email address will not be published. Required fields are marked *