Breaking News

ಎಂಬಪ್ಪೆ ಹಿಂದಿಕ್ಕಿ ಫಿಫಾ ವರ್ಷದ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದ ಮೆಸ್ಸಿ

Share News

The Best FIFA Football Awards 2023: ಮ್ಯಾಂಚೆಸ್ಟರ್ ಸಿಟಿ ತಂಡದ ಗೋಲ್ ಮಷಿನ್ ಅರ್ಲಿಂಗ್ ಹಾಲೆಂಡ್ ಅವರನ್ನು ಹಿಂದಿಕ್ಕಿ ಫುಟ್‌ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ FIFAದ ವರ್ಷದ ಅತ್ಯುತ್ತಮ ಆಟಗಾರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೇ ವೇಳೆ ವನಿತೆಯರ ವಿಭಾಗದಲ್ಲಿ ಐತಾನಾ ಬೊನ್ಮತಿ ವರ್ಷದ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದಿದ್ದಾರೆ.

ಬಲಿಷ್ಠ ಆಟಗಾರರಾದ ಮ್ಯಾಂಚೆಸ್ಟರ್ ಸಿಟಿ ಕ್ಲಬ್‌ನ ಗೋಲ್ ಮೆಷಿನ್ ಅರ್ಲಿಂಗ್ ಹಾಲೆಂಡ್ ಮತ್ತು ಫ್ರೆಂಚ್ ಫುಟ್‌ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಅವರನ್ನು ಹಿಂದಿಕ್ಕಿ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ವರ್ಷದ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಕಠಿಣ ಪೈಪೋಟಿ ಬಳಿಕ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದ ಫುಟ್ಬಾಲ್ ಆಟಗಾರ ‘ಫಿಫಾ ದಿ ಬೆಸ್ಟ್’ ಪ್ರಶಸ್ತಿ ಗೆದ್ದಿದ್ದಾರೆ.(AP)

ಪ್ರಶಸ್ತಿಗಾಗಿ ಮೆಸ್ಸಿ ಮತ್ತು ಹಾಲೆಂಡ್ ನಡುವಿನ ತೀವ್ರ ಪೈಪೋಟಿ ಇತ್ತು. ಫಿಫಾ ರೇಟಿಂಗ್ ವ್ಯವಸ್ಥೆಯಲ್ಲಿ ಮೆಸ್ಸಿ ಮತ್ತು ಹಾಲೆಂಡ್ ತಲಾ 48 ಅಂಕಗಳೊಂದಿಗೆ ಸಮಬಲಗೊಂಡರು. ಆದರೆ, ಅರ್ಜೆಂಟೀನಾ ನಾಯಕ ಪ್ರಶಸ್ತಿಯನ್ನು ಗೆದ್ದರು, ರಾಷ್ಟ್ರೀಯ ತಂಡದ ನಾಯಕರಿಂದ ಹೆಚ್ಚಿನ ಮತಗಳು ಬಿದ್ದವು. ರಾಷ್ಟ್ರೀಯ ತಂಡದ ನಾಯಕರು, ಕೋಚ್‌ಗಳು, ಪತ್ರಕರ್ತರು ಮತ್ತು ಅಭಿಮಾನಿಗಳ ಮತಗಳನ್ನು ಎಣಿಸಿದ ನಂತರ ಈ ಪ್ರಶಸ್ತಿಗಳನ್ನು ನಿರ್ಧರಿಸಲಾಗುತ್ತದೆ.(AFP)

ಇದನ್ನೂ ಓದಿ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗೆ ಅಪರಿಚಿತ ಕಾರೊಂದು ಡಿಕ್ಕಿ; ಪರಾರಿಯಾದ ಚಾಲಕ ಪೊಲೀಸ್ ವಶಕ್ಕೆ..!

ಲಂಡನ್‌ನಲ್ಲಿ ನಡೆದ ಫಿಫಾ ‘ದಿ ಬೆಸ್ಟ್’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಲಿಯೋನೆಲ್ ಮೆಸ್ಸಿ ಭಾಗವಹಿಸಲಿಲ್ಲ. ಹೀಗಾಗಿ ಮೆಸ್ಸಿ ಅನುಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಫ್ರೆಂಚ್ ದಿಗ್ಗಜ ಫುಟ್ಬಾಲ್ ಆಟಗಾರ ಥಿಯೆರಿ ಹೆನ್ರಿ ಸ್ವೀಕರಿಸಿದರು. ಐತಾನಾ ಬೊನ್ಮತಿ ಮಹಿಳೆಯರ ವಿಭಾಗದ ವರ್ಷದ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು.(AFP) ಮ್ಯಾಂಚೆಸ್ಟರ್ ಸಿಟಿಯ ಯಶಸ್ವಿ ಕೋಚ್ ಪೆಪ್ ಗಾರ್ಡಿವಾಲಾ ಅವರು ಪುರುಷರ ‘ದಿ ಬೆಸ್ಟ್’ ಕೋಚ್ ಪ್ರಶಸ್ತಿ ಗೆದ್ದರು. ಇಟಲಿಯ ಕೋಚ್ ಲುಸಿಯಾನೊ ಸ್ಪಲ್ಲೆಟ್ಟಿ ಮತ್ತು ಇಂಟರ್ ಮಿಲನ್ ತರಬೇತುದಾರ ಸಿಮೋನ್ ಇಂಜಾಘಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.(REUTERS) ಇಂಗ್ಲೆಂಡ್ ವನಿತೆಯರ ತಂಡದ ಡಚ್ ಕೋಚ್ ಸರೀನಾ ವೈಗ್ ಮನ್ ಮಹಿಳಾ ‘ದಿ ಬೆಸ್ಟ್’ ಕೋಚ್ ಪ್ರಶಸ್ತಿ ಪಡೆದರು.(AP)

ಬ್ರೆಜಿಲ್‌ನ ‘ಸ್ಕರ್ಟ್‌ಡ್ ಪೀಲೆ’ ಎಂದು ಕರೆಯಲ್ಪಡುವ ಮಾರ್ಟಾಗೆ ವಿಶೇಷ ಟ್ರೋಫಿ ನೀಡಲಾಯಿತು. ದಿವಂಗತ ಬ್ರೆಜಿಲಿಯನ್ ದಂತಕಥೆ ಪೀಲೆ ಅವರ ಪತ್ನಿ ಮಾರ್ಸಿಯಾ ಐಯೊಕಿ ಟ್ರೋಫಿಯನ್ನು ನೀಡಿದರು.(AFP) ಬ್ರೆಜಿಲ್ ಗೋಲ್‌ಕೀಪರ್ ಎಲ್ಲೆಸನ್ ಪುರುಷರ ‘ದಿ ಬೆಸ್ಟ್’ ಗೋಲ್‌ಕೀಪರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.(AP) ಇಂಗ್ಲೆಂಡ್ ಮಹಿಳಾ ತಂಡದ ಗೋಲ್ ಕೀಪರ್ ಮೇರಿ ಇಯರ್ಪ್ಸ್ ಅತ್ಯುತ್ತಮ ಮಹಿಳಾ ಗೋಲ್ ಕೀಪರ್ ಪ್ರಶಸ್ತಿ ಪಡೆದರು.(AP) ಅರ್ಜೆಂಟೀನಾದ ಕ್ಲಬ್ ಕೊಲೊನ್ ಅಭಿಮಾನಿ ಹ್ಯೂಗೋ ಡೇನಿಯಲ್ ಇನಿಗಸ್ ಅವರು FIFA ಅಭಿಮಾನಿ ಪ್ರಶಸ್ತಿ ಗೆದ್ದರು. ಕಳೆದ ವರ್ಷ ನಡೆದ ಅರ್ಜೆಂಟೀನಾದ ಅಗ್ರ ಲೀಗ್‌ನಲ್ಲಿ ಬರಾಕಾಸ್-ಕೊಲೊನ್ ನಡುವಿನ ಪಂದ್ಯ ವೀಕ್ಷಿಸುತ್ತಾ ಅವರು ಮಗುವಿಗೆ ಬಾಟಲಿಯಿಂದ ಹಾಲು ಕುಡಿಸುತ್ತಿದ್ದರು.

ಇದನ್ನೂ ಓದಿ: ಸುರತ್ಕಲ್‌: ಹಠಾತ್ ಬ್ರೇಕ್ ಹಾಕಿದ ಬಸ್ ಚಾಲಕ; ಬಸ್ ಮುಂಭಾಗದಲ್ಲಿ ಕುಳಿತ ಮಹಿಳೆ ಕೆಳಗೆ ಬಿದ್ದು ತಲೆ ಮೇಲೆ ಚಕ್ರ ಹರಿದು ಸ್ಥಳದಲ್ಲೇ ಸಾವು


Share News

Leave a Reply

Your email address will not be published. Required fields are marked *