Breaking News

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆಯ ಮೂಲಕ ತೆರೆಗೆ ಬರಲಿದೆ ಮಂಗಳೂರಿನ ಚೈತ್ರಾ ಶೆಟ್ಟಿ, ಮೋಹನ್ ಶೇನಿ ಮುಖ್ಯ ಪಾತ್ರದ ಚಲನಚಿತ್ರ ಸಾ೦ಕೇತ್

Share News

ಕನ್ನಡ ಚಲನಚಿತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಯುವ ತಂಡ ಹೊಸ ಚಲನಚಿತ್ರವನ್ನು ತೆರೆಗೆ ಅಪ್ಪಳಿಸಲು ಸಿದ್ಧವಾಗಿ ನಿಂತಿದೆ. ರಿವರ್ ಸ್ಟೀಮ್ ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬಂದಿರುವ ಕನ್ನಡ ಚಲನಚಿತ್ರ ಸ೦ಕೇತ್ ವಿಭಿನ್ನ ಕುತೂಹಲ ಭರಿತ ಕಥಾ ಹ೦ದರವನ್ನು ಹೊಂದಿಕೊಂಡಿದೆ.

ಇದನ್ನೂ ಓದಿ: ಆಯಿಲ್‌ ತುಂಬಿದ್ದ ಟ್ಯಾಂಕರ್‌ ಫ್ಲೈಓವರ್‌ನ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿ – ಧಗಧಗಿಸಿದ ಬೆಂಕಿ

ಪ್ರತಿಭಾವಂತ ನಟಿ ಮಂಗಳೂರಿನ ಚೈತ್ರಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಈ ಚಲನಚಿತ್ರ ಹೊಸ ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದೆ. ಉದಯೋನ್ಮುಖ ನಟ ವಿಕ್ಕಿ ರಾವ್ ನಟಿಸಿರುವ ಈ ಚಲನಚಿತ್ರವನ್ನು ಮಂಗಳೂರು ಮೂಲದ ಜೋಶ್ನಾ ರಾಜ್ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಪುತ್ತೂರು: ಮೈ ಮೇಲೆ ಪ್ರೇತ ಬರುತ್ತೆ ಎಂದು ಪತ್ನಿಯನ್ನು 3 ತಿಂಗಳಿಂದ ಕೊಠಡಿಯಲ್ಲಿ ದಿಗ್ಬಂಧನ ಮಾಡಿದ ಪತಿ

ರೂಪಶ್ರೀ ವಾರ್ಕಡಿ, ಮೋಹನ್ ಶೇನಿ ಗಮನಸೆಳೆಯುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜನವರಿ ತಿಂಗಳು ತೆರೆಗೆ ಅಪ್ಪಳಿಸಲು ಚಲನಚಿತ್ರ ಸಿದ್ಧವಾಗಿ ನಿಂತಿದೆ. ಪ್ರತಿಭಾವಂತ ಕಲಾವಿದರು ಮನೋಜ್ಞವಾಗಿ ಅಭಿನಯಿಸಿರುವ ಕುತೂಹಲ ಭರಿತ ಈ ಚಲನಚಿತ್ರ ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!


Share News

Leave a Reply

Your email address will not be published. Required fields are marked *