Breaking News

ಮಂಗಳೂರು : ಬೆಂದೂರ್ ವೆಲ್ – ಲಾಡ್ಜ್ ರೂಮ್ ನಲ್ಲಿ ಬೆಂಕಿ, ಓರ್ವ ಸಾವು

Share News

ಮಂಗಳೂರು: ಲಾಡ್ಜ್ ನ ರೂಮ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಸಂಭವಿಸಿದೆ. ಯಶ್ರಾಜ್ ಎಸ್.‌ಸುವರ್ಣ(43) ಮೃತಪಟ್ಟವರು.

ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ಸಿದ್ಧತೆ ; 150 ಜೋಡಿ ಕೋಣಗಳು ಹಾಗೂ 8 ಲಕ್ಷ ಜನರ ವೀಕ್ಷಣೆಗೆ ಕ್ಷಣಗಣನೆ..!

ನಗದರ ಬೆಂದೂರ್ ವೆಲ್ ಲಾಡ್ಜ್ ನಲ್ಲಿ ಮಧ್ಯರಾತ್ರಿ ಬಳಿಕ‌ ಸುಮಾರು 12:35 ಕ್ಕೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ.

ಯಶ್ರಾಜ್ ಅವರ ಮೃತದೇಹ ಮಲಗಿದ ಸ್ಥಿತಿಯಲ್ಲಿದ್ದು, ಬಾಗಿಲಿನ ಚಿಲಕ ಹಾಕಿಕೊಂಡಿದ್ದರು.‌ ಅನಂತರ ಲಾಡ್ಜ್ ನವರು ತೆರೆದಾಗ ಬೆಂಕಿ ಆವರಿಸಿತ್ತು. ಅಗ್ನಿಶಾಮಕದವರಿಗೆ ತಿಳಿಸಿದರು ಎನ್ನಲಾಗಿದೆ.

ಇದನ್ನೂ ಓದಿ: ಬಂಟ್ವಾಳ: ಮಹಿಳೆಯ ಅನುಮಾನಾಸ್ಪದ ಸಾವು – ಕೊಲೆ ಆರೋಪ

ಪಾಂಡೇಶ್ವರ ಅಗ್ನಿಶಾಮಕ ಠಾಣೆಯವರು ಬೆಂಕಿ‌ ನಂದಿಸಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

WATCH VIDEO ON YOUTUBE: ಹುಟ್ಟಿ ಹರಿಯುವ ಪ್ರದೇಶದಿಂದ ಸಮುದ್ರ ಸೇರುವ ತನಕದ ಕಾವೇರಿ ನದಿಯ ಅದ್ಭುತ ದೃಶ್ಯ!


Share News

Leave a Reply

Your email address will not be published. Required fields are marked *