Breaking News

ಬಂಟ್ವಾಳ: ಮಹಿಳೆಯ ಅನುಮಾನಾಸ್ಪದ ಸಾವು – ಕೊಲೆ ಆರೋಪ

Share News

ಬಂಟ್ವಾಳ, ನ 22 : ಹೃದಯಾಘಾತದಿಂದ ಮಹಿಳೆಯೊರ್ವಳು ಮೃತಪಟ್ಟಿದ್ದಾಳೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಗ ದೂರು ನೀಡಿದ ಘಟನೆ ನಡೆದಿದ್ದು, ಇದು ಆರ್ಟ್ ಹ್ಯಾಟಕ್ ಅಲ್ಲ ಇದೊಂದು ಸಂಶ ಯಾಸ್ಪದ ಸಾವು ಈ ಬಗ್ಗೆ ತನಿಖೆಯಾಗಬೇಕು ಎಂದು ಇನ್ನೊಂದು ದೂರು ದಾಖಲಾದ ಬಗ್ಗೆ ವರದಿಯಾಗಿದೆ.

ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಮೊಡಂಕಾಪು ರಾಜೀವಪಲ್ಕೆ ನಿವಾಸಿ ಯೋಗೀಶ್ ಅವರ ಪತ್ನಿ ಬೇಬಿ ಅವರು ಸಾವನ್ನಪ್ಪಿದ ಮಹಿಳೆ.

ರಾತ್ರಿ ಸುಮಾರು 2 ಗಂಟೆ ವೇಳೆ ಇವರಿಗೆ ಹೃದಯ ನೋವು ಕಾಣಿಸಿಕೊಂಡಿದ್ದು,ಅಸ್ತಮಾ ರೋಗದಿಂದ ಬಳಲುತ್ತಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಅವರು ಮನೆಯವರಿಗೆ ತಿಳಿಸಿದ್ದಾರೆ.

ಇದೊಂದು ವ್ಯವಸ್ಥಿತವಾದ ಕೊಲೆ: ಮನೆಯವರ ಆರೋಪ

ಪಿಲಾತಬೆಟ್ಟು ಗ್ರಾಮದ ನಯನಾಡು ನಿವಾಸಿ ನಾರಾಯಣ ಮೂಲ್ಯ ಅವರು ಮಗಳು ಬೇಬಿ ಅವರಿಗೆ ಕಳೆದ ನಾಲ್ಕು ವರ್ಷಗಳ‌ ಹಿಂದೆ ಮೊಡಂಕಾಪು ನಿವಾಸಿ ವೃತ್ತಿಯಲ್ಲಿ ಗಾರೆ ಕೆಲಸಗಾರ ಯೋಗೀಶ್ ಅವರೊಂದಿಗೆ ವಿವಾಹ ನಡೆದಿತ್ತು.

ಇದನ್ನೂ ಓದಿ: ಗುರುಪುರ: ಬೈಕ್ ಮತ್ತು ಲಾರಿ ನಡುವೆ ಅಪಘಾತ ; ಬೈಕ್ ಸವಾರ ಸಾವು!

ಆದರೆ ಅ ಬಳಿಕ ಇವರ ವೈವಾಹಿಕ ಜೀವನದಲ್ಲಿ ಸರಿಹೊಂದಿಸಲು ಸಾಧ್ಯವಾಗದೆ ಪದೇ ಪದೇ ಕೌಟುಂಬಿಕ ಕಲಹ ಉಂಟಾಗುತ್ತಿತ್ತು. ಅಲ್ಲದೆ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ.ಈ.ಕಾರಣಕ್ಕಾಗಿ ಕೂಡ ಗಲಾಟೆ ನಡೆಯುತ್ತಿತ್ತು.

ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಕುಟುಂಬದ ಹಿರಿಯರು ಸೇರಿ ಇವರ ಕೌಟುಂಬಿಕ ಕಲಹವನ್ನು ಮಾತುಕತೆ ಮೂಲಕ ಸರಿಪಡಿಸುವ ಕೆಲಸ ಮಾಡಿದ್ದರು.

ಇತ್ತೀಚಿನ ದಿನಗಳಲ್ಲಿ ಮತ್ತೆ ಇವರೊಳಗೆ ಗಲಾಟೆ ನಡೆಯುತ್ತಿತ್ತು,ನವರಾತ್ರಿ ಸಂದರ್ಭದಲ್ಲಿ ಇವರೊಳಗೆ ಗಲಾಟೆ ನಡೆದು ಬಳಿಕ ಬೇಬಿ ಅವರ‌ ಕಿವಿಯನ್ನು ಕಚ್ಚಿ ಹರಿದು ಹಾಕಿದ ಘಟನೆ ಕೂಡ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ನಿನ್ನೆ ಸಂಜೆ ಮತ್ತೆ ಗಂಡಹೆಂಡತಿ ನಡುವೆ ವಾಗ್ವಾದ ನಡೆದು ಬಳಿಕ ಬೇಬಿ ಅವರು ಅವರ ಸಹೋದರಿಗೆ ಪೋನ್ ಮಾಡಿ ವಿಚಾರ ತಿಳಿಸಿದ್ದಲ್ಲದೆ, ನಾನು ಮನೆಗೆ ಬರುವುದಾಗಿ ತಿಳಿಸಿದ್ದಾರೆ. ನನಗೆ ಸಹಿಸಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟಿದ್ದಾರೆಯಂತೆ.

ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ಸಿದ್ಧತೆ ; 150 ಜೋಡಿ ಕೋಣಗಳು ಹಾಗೂ 8 ಲಕ್ಷ ಜನರ ವೀಕ್ಷಣೆಗೆ ಕ್ಷಣಗಣನೆ..!

ಅವರಿಗೆ ಆಸ್ತಮಾ ಅಥವಾ ಇತರ ಯಾವುದೇ ಖಾಯಿಲೆ ಇರಲಿಲ್ಲ, ನಿನ್ನೆ ಕೂಡ ಅವರು ತಾಯಿ ಹಾಗೂ ಅಕ್ಕನ ಜೊತೆ ಮಾತನಾಡಿದ್ದಾರೆ. ಯಾವುದೇ ಖಾಯಿಲೆ ಬಗ್ಗೆ ತಿಳಿಸಿಲ್ಲ. ಆರೋಗ್ಯ ವಂತರಾಗಿದ್ದ ಇವಳು ಏಕಾಏಕಿ ಸಾವನ್ನು ಕಾಣಲು ಸಾಧ್ಯವಿಲ್ಲ. ಈ ಸಾವಿನ ಬಗ್ಗೆ ನಮಗೆ ಸಂಶಯವಿದೆ. ಇದೊಂದು ವ್ಯವಸ್ಥಿತವಾದ ಕೊಲೆ ಎಂಬುದು ನಮಗೆ ಸಂಶಯವಿದೆ ಹಾಗಾಗಿ ಸರಿಯಾದ ಕ್ರಮದಲ್ಲಿ ಪೋಸ್ಟ್ ಮಾರ್ಟ್ಂ ಮಾಡಿಸಬೇಕು. ಮತ್ತು ಸೂಕ್ತವಾದ ತನಿಖೆಯಾಗಬೇಕು, ಒಂದು ವೇಳೆ ಕೊಲೆಯಾದರೆ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಯಾಗಬೇಕು ಎಂದು ಮೃತಳ ಅಣ್ಣ ಪದ್ಮನಾಭ ತಿಳಿಸಿದ್ದಾರೆ.

ಮದುವೆಯಾದ ಬಳಿಕ ಮನೆಯಲ್ಲಿದ್ದ ಇವರು ಇತ್ತೀಚಿನ ಕೆಲ ವರ್ಷಗಳಿಂದ ಜೀವನಕ್ಕಾಗಿ ಕ್ಯಾಟರಿಂಗ್ ನಲ್ಲಿ ಬಡಿಸಲು ಹೋಗುತ್ತಿದ್ದರು ಎಂದು ತಿಳಿಸಿದ್ದಾರೆ.

WATCH VIDEO ON YOUTUBE: ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಮಹಿಷಾ ಮರ್ದಿನಿ ನೃತ್ಯ ರೂಪಕ


Share News

Leave a Reply

Your email address will not be published. Required fields are marked *