Breaking News

ಮಂಗಳೂರು : ಡೆಂಗ್ಯೂ ಜ್ವರಕ್ಕೆ 8ನೇ ತರಗತಿ ವಿದ್ಯಾರ್ಥಿ ಬಲಿ!

Share News

ಮಂಗಳೂರು: ಮಂಗಳೂರು ನಗರದಲ್ಲಿ ಕಿಲ್ಲರ್ ಡೆಂಗ್ಯೂ 8 ನೇ ತರಗತಿಯ ವಿದ್ಯಾರ್ಥಿಯೋರ್ವನನ್ನು ಬಲಿ ಪಡೆದಿದೆ. ನಗರದ ಅತ್ತಾವರ ಏಳನೇ ಕ್ರಾಸ್ ರಸ್ತೆಯ ನಿವಾಸಿಯಾಗಿರುವ ಸೋನಿ ಮತ್ತು ಆಲ್ಫೋನ್ಸ್ ಅವರ ಪುತ್ರ ಆಶೀಶ್ ಡಿಸೋಜಾ(13) ಡೆಂಗ್ಯೂ ಗೆ ಬಲಿಯಾದ ವಿದ್ಯಾರ್ಥಿಯಾಗಿದ್ದಾನೆ.

ಇದನ್ನೂ ಓದಿ: ಲಿಂಕ್ಡ್​ಇನ್​ನಲ್ಲಿ ಲೇ ಆಫ್; 668 ಉದ್ಯೋಗಿಗಳು ಕೆಲಸದಿಂದ ವಜಾ ಸಾಧ್ಯತೆ!

ತೀವ್ರ ಜ್ವರದಿಂದ ಬಳಲುತ್ತಿದ್ದ ಸೋನಿ ಮತ್ತು ಆಲ್ಫೋನ್ಸ್ ರ ಇಬ್ಬರು ಪುತ್ರರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಈ ಪೈಕಿ 13ರ ಹರೆಯದ ಆಶೀಶ್ ಸೋಮವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಶಿಶ್ ನ ಅಣ್ಣ ಡಿಸ್ಚಾರ್ಜ್ ಮಾಡಲಾಗಿದೆ. ಆಶೀಶ್ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಸದಾ ಚುರುಕುತನದಿಂದಿದ್ದ ಆಶಿಶ್ ಇಗರ್ಜಿಯ ಬಲಿಪೀಠ ಸೇವಾ ಸಂಘದ ಸಕ್ರೀಯ ಸದಸ್ಯನಾಗಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೀ ಐಟಿ ಬೆನ್ನಲ್ಲೇ ಇಡಿ ಭರ್ಜರಿ ದಾಳಿ!

ಅತ್ತಾವರ ಸಹಿತ ನಗರದ ಅನೇಕ ಕಡೆ ಡೆಂಗ್ಯೂ, ಇತರ ಸಾಂಕ್ರಾಮಿಕ ರೋಗಗಳು ತೀವ್ರ ಉಲ್ಭಣ ಸ್ಥಿತಿಯಲ್ಲಿದ್ದರೂ ಪಾಲಿಕೆ ಆರೋಗ್ಯಾಧಿಕಾರಿಗಳು ಮಕಡೆ ಮಲಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

WATCH VIDEO ON YOUTUBE: ಸರ್ವರ ಗಮನ ಸೆಳೆದ ತಾಜ್ಮಹಲ್ ಟೀಯ ಸಂಗೀತದ ಬಿಲ್ ಬೋರ್ಡ್!


Share News

Leave a Reply

Your email address will not be published. Required fields are marked *