Breaking News

ಮಂಗಳೂರು: ರಸ್ತೆ ಬದಿ ತ್ಯಾಜ್ಯ ಸುರಿದ ವಾಹನ ಚಾಲಕನಿಗೆ 5 ಸಾವಿರ ರೂ. ದಂಡ

Share News

ಮಂಗಳೂರು, ಜ 11: ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದು ಗಲೀಜು ಮಾಡುತ್ತಿದ್ದ ವಾಹನ ಚಾಲಕನಿಗೆ ದಂಡ ವಿಧಿಸಿದ ಘಟನೆ ಮಂಗಳೂರಿನ ಪಡೀಲ್ ಜಂಕ್ಷನ್‌ ಬಳಿ ಬುಧವಾರ ನಡೆದಿದೆ.

ಇದನ್ನೂ ಓದಿ: ಬಂಟ್ವಾಳ : ವಗ್ಗ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳೆರಡು ಓವರ್ ಟೇಕ್ ಮಾಡುವ ಭರದಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ; ಕಾಲೇಜು ವಿದ್ಯಾರ್ಥಿನಿ ಗಂಭೀರ..!

ವಾಹನ ಚಾಲಕನೋರ್ವ ತಲಪಾಡಿ ಭಾಗದಿಂದ ತ್ಯಾಜ್ಯವನ್ನು ತಂದು ಪಡೀಲ್‌ ಜಂಕ್ಷನ್‌ನಲ್ಲಿ ಸುರಿಯುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಪಡೆದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಾಹನ ಚಾಲಕನಿಗೆ 5 ಸಾವಿರ ರೂ. ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬೇಡಿಕೊಳ್ಳುತ್ತಿದ್ದರೂ ಯಾವೊಬ್ಬ ವೈದ್ಯರೂ ಸಹಾಯಕ್ಕೆ ಬರಲಿಲ್ಲ; ತರಕಾರಿ ತಳ್ಳುಗಾಡಿಯಲ್ಲೇ ಮಗುವಿಗೆ ಜನ್ಮವಿತ್ತ ಮಹಿಳೆ

ಇನ್ನು ವಾಹನ ಚಾಲಕನಿಗೆ ಎಚ್ಚರಿಕೆ ನೀಡಿದ ಪಾಲಿಕೆ ಅಧಿಕಾರಿಗಳು, ಇದೇ ರೀತಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿವುದು ಮತ್ತೆ ಕಂಡುಬಂದರೆ ದಂಡ ಮೊತ್ತವನ್ನು ದ್ವಿಗುಣಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!


Share News

Leave a Reply

Your email address will not be published. Required fields are marked *