Breaking News

ಬಂಟ್ವಾಳ : ವಗ್ಗ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳೆರಡು ಓವರ್ ಟೇಕ್ ಮಾಡುವ ಭರದಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ; ಕಾಲೇಜು ವಿದ್ಯಾರ್ಥಿನಿ ಗಂಭೀರ..!

Share News

ಬಂಟ್ವಾಳ, ಜ 10: ಕೆಎಸ್‌ಆರ್‌ಟಿಸಿ ಬಸ್‌ಗಳೆರಡು ಓವರ್ ಟೇಕ್ ಮಾಡುವ ಭರದಲ್ಲಿ ದ್ವಿಚಕ್ರದಲ್ಲಿ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವಗ್ಗ ದಲ್ಲಿ ನಡೆದಿದೆ.

ಅಲ್ಲಿಪಾದೆ ಪೆರಿಯಾರ್ ದೋಟ ಪಲ್ಲವಿ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿನಿ.ಕೆಳಗಿನ ವಗ್ಗ ತಿರುವಿನಲ್ಲಿ ಧರ್ಮಸ್ಥಳ ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಎರಡು ಬಸ್ ಗಳು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓವರ್ ಟೇಕ್ ಮಾಡಿದೆ.

ಇದನ್ನೂ ಓದಿ: ಹೆತ್ತ ನಾಲ್ಕು ವರ್ಷದ ತನ್ನ ಮಗುವನ್ನೇ ಕೊಂದು ಕಾರಿನಲ್ಲಿ ಶವವನ್ನು ಸಾಗಿಸಿದ ತಾಯಿ..! ಅರೆಸ್ಟ್ ಆಗಿದ್ದು ಹೇಗೆ?

ಈ ಸಂದರ್ಭದಲ್ಲಿ ಬಂಟ್ವಾಳ ಕಡೆಯಿಂದ ವಾಮದಪದವು ಕಾಲೇಜಿಗೆ ದ್ವಿಚಕ್ರದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಸ್ ಗಳೆರಡರ ಅಜಾಗರೂಕತೆಯಿಂದ ಸಂಚಾರಕ್ಕೆ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಇದನ್ನೂ ಓದಿ: ಜನವರಿ 14ರಿಂದ ಮತ್ತೆ ರಾತ್ರಿ ಇಡೀ ಯಕ್ಷಗಾನ ಪ್ರದರ್ಶನ!

ವಿದ್ಯಾರ್ಥಿನಿ ತಂದೆ ಗೋಪಾಲ ಸಪಲ್ಯ ಅವರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೋಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!


Share News

Leave a Reply

Your email address will not be published. Required fields are marked *