Breaking News

ಕಾಸರಗೋಡು: ಆಟ ಆಡುತ್ತಿದ್ದ ಒಂದೂವರೆ ವರ್ಷದ ಮಗುವನ್ನು ಕಚ್ಚಿ ಎಳೆದೊಯ್ದ ಬೀದಿನಾಯಿಗಳು

Share News

ಕಾಸರಗೋಡು: ಮನೆಯ ಪ್ರವೇಶ ದ್ವಾರದ ಬಳಿ ಹೊರಗಡೆ ಆಟ ಆಡುತ್ತಿದ್ದ ಒಂದೂವರೆ ವರ್ಷದ ಮಗುವನ್ನು ಬೀದಿ ನಾಯಿಗಳ ಹಿಂಡು ಕಚ್ಚಿ ಎಳೆದುಕೊಂಡು ಹೋದ ಆಘಾತಕಾರಿ ಘಟನೆ ಕಾಸರಗೋಡು ಸಮೀಪ ನಡೆದಿದೆ. ಪಡನ್ನ ವಡಕ್ಕೇಪುರತ್ತ್ ಮಣ್ಣಾತಿಗೆಯ ಫಾಬಿನಾ – ಸುಲೈಮಾನ್‌ ದಂಪತಿ ಪುತ್ರ, ಒಂದೂವರೆ ವರ್ಷ ವಯಸ್ಸಿನ ಬಶೀರ್‌ ನಾಯಿಗಳ ದಾಳಿಗೊಳಗಾದ ಮಗು.

ಇದನ್ನೂ ಓದಿ: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ: ಡಾ. ಯತೀಂದ್ರ

ಮಗುವಿನ ಆರ್ಭಟ ಕೇಳಿ ಮನೆಯಿಂದ ಓಡಿಬಂದ ಆಲಿಸಿದವರಿಗೆ ಹೃದಯವಿದ್ರಾವಕ ದೃಶ್ಯ ಕಂಡುಬಂದಿದ್ದು, ಅವರನ್ನು ನೋಡಿದ ನಾಯಿಗಳು ಪರಾರಿಯಾಗಿವೆ. ಮಗುವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಲಾಗುತ್ತಿದೆ. ಇದೇ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಇಬ್ಬರು ಮಕ್ಕಳು ಮತ್ತು ಓರ್ವ ಮಹಿಳೆಯನ್ನು ಕಚ್ಚಿ ಗಾಯಗೊಳಿಸಿವೆ.

ಇದನ್ನೂ ಓದಿ: ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಟಾಯ್ಲೆಟಲ್ಲೇ ಕೂತು ಪ್ರಯಾಣ!


Share News

Leave a Reply

Your email address will not be published. Required fields are marked *