Breaking News

ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತ: ಜೈಲು ಅಧಿಕಾರಿ​ ಸಾವು!

Share News

ಪಾಣಿಪತ್ (ಹರಿಯಾಣ) ಅಕ್ಟೋಬರ್ 25: ಪಾಣಿಪತ್‌ ಡೆಪ್ಯುಟಿ ಸೂಪರಿಂಟೆಂಡೆಂಟ್ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ (heart attack) ತುತ್ತಾಗಿದ್ದಾರೆ. ಹರ್ಯಾಣ ಜೈಲು ಉಪ ಅಧೀಕ್ಷಕರಾದ ಜೋಗಿಂದರ್ ದೇಸ್ವಾಲ್ ಮೃತ ದುರ್ದೈವಿ. ಕರ್ನಾಲ್‌ ಮೂಲದ ಜೋಗಿಂದರ್ ಅವರು ಕಾರಾಗೃಹ ಇಲಾಖೆಗೆ ಸೇರುವ ಮೊದಲು ವಕೀಲರಾಗಿ ಪ್ರಾಕ್ಟೀಸ್​​ ಮಾಡುತ್ತಿದ್ದರು. ಪ್ರಸ್ತುತ ಪಾಣಿಪತ್ ಜೈಲಿನಲ್ಲಿ ( Panipat, Haryana) ನಿಯೋಜಿಸಲಾಗಿದ್ದ 52 ವರ್ಷದ ಡೆಪ್ಯುಟಿ ಸೂಪರಿಂಟೆಂಡೆಂಟ್ (Jail superintendent) ಸೋಮವಾರ ಬೆಳಗ್ಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಹತ್ತಿರದ ಮೂಲಗಳು ತಿಳಿಸಿವೆ. ಕೂಡಲೇ ಜಿಮ್ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: ನಟ ದರ್ಶನ್​ ಮತ್ತು ವಿನಯ್​ ಗುರೂಜಿ ವಿರುದ್ಧ ದೂರು ದಾಖಲು ;ಸೆಲೆಬ್ರಿಟಿಗಳಿಗೆ ಹೆಚ್ಚಾದ ಹುಲಿ ಹಗುರು ಪ್ರಕರಣ!

ಉಪ ಪೊಲೀಸ್ ವರಿಷ್ಠಾಧಿಕಾರಿ ಜೋಗಿಂದರ್ ದೇಸ್ವಾಲ್ ಅವರು ಹರಿಯಾಣದ ಪಾಣಿಪತ್ ಜಿಲ್ಲಾ ಕಾರಾಗೃಹದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜೋಗಿಂದರ್ ದೇಸ್ವಾಲ್ ಸೋಮವಾರ ಬೆಳಗ್ಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಜಿಮ್ ಮಾಡುವಾಗ ಇದ್ದಕ್ಕಿದ್ದ ಹಾಗೆ ನೆಲಕ್ಕೆ ಬಿದ್ದಿದ್ದಾರೆ. ಸ್ಥಳದಲ್ಲಿ ಸಹೋದ್ಯೋಗಿಗಳು ತಮ್ಮ ಪೊಲೀಸ್ ಅಧಿಕಾರಿಯನ್ನು ಕರ್ನಾಲ್‌ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಜೋಗಿಂದರ್ ದೇಸ್ವಾಲ್ ಮೃತಪಟ್ಟಿದ್ದಾರೆ. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಜೋಗಿಂದರ್ ದೇಸ್ವಾಲ್ ಅವರು ಕರ್ನಾಲ್‌ನ ನ್ಯಾಯಪುರಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶ ವಿರುದ್ಧ ಬೃಹತ್ ಗೆಲುವು, ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದ ದಕ್ಷಿಣ ಆಫ್ರಿಕಾ!

ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದು ಇದೇ ಮೊದಲಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವ್ಯಕ್ತಿಯೊಬ್ಬ ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದಾಗ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಆಗಸ್ಟ್‌ನಲ್ಲಿಯೂ ಸಹ, ಒಬ್ಬ ವ್ಯಕ್ತಿಯು ಒಳಾಂಗಣ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

WATCH VIDEO ON YOUTUBE: ಮಧ್ಯದ ಬಹುದೊಡ್ಡ ಎಕ್ಸಿಬಿಷನ್ ಸರ್ವರ ಗಮನ ಸೆಳೆದಿದೆ!


Share News

Leave a Reply

Your email address will not be published. Required fields are marked *